ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ರಸ್ತೆ ಗುಂಡಿಗಳ ಬಗ್ಗೆ ಶಾಸಕ ಆಶ್ವತ್ಥನಾರಾಯಣ ಟ್ವೀಟ್

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 21 : "ಇವು ಬೆಂಗಳೂರಿನ ರಸ್ತೆಗಳೇ ಸ್ವಾಮಿ, ಕುಳಿಗಳಲ್ಲ. ಇದು ವಿಶ್ವ ಮಟ್ಟದ ನಗರದಲ್ಲಿ ರಸ್ತೆಗಳ ಸ್ಥಿತಿ" ಎಂಬ ಒಕ್ಕಣೆಯ ಜತೆಗೆ ಮಲ್ಲೇಶ್ವರದ ಶಾಸಕ ಡಾ.ಅಶ್ವತ್ಠನಾರಾಯಣ ನಗರದಲ್ಲಿನ ರಸ್ತೆಗಳ ಅಧ್ವಾನ ಸ್ಥಿತಿಯನ್ನು ತೆರೆದಿಟ್ಟಿದ್ದಾರೆ. ಅಷ್ಟೇ ಅಲ್ಲ ಇಷ್ಟಿಷ್ಟು ಅಗಲ ಕಾಣುವ ರಸ್ತೆ ಗುಂಡಿಗಳ ಫೋಟೋಗಳನ್ನು ಹಾಕಿ ಟ್ವೀಟ್ ಮಾಡಿದ್ದಾರೆ.

ಬೆಂಗಳೂರಿನಲ್ಲಿರುವ ರಸ್ತೆ ಗುಂಡಿಗಳ ಸಂಖ್ಯೆ 9 ಸಾವಿರ!ಬೆಂಗಳೂರಿನಲ್ಲಿರುವ ರಸ್ತೆ ಗುಂಡಿಗಳ ಸಂಖ್ಯೆ 9 ಸಾವಿರ!

ಆನಂದ್ ರಾವ್ ಸರ್ಕಲ್ ಬಳಿ, ರಿಚ್ಮಂಡ್ ರಸ್ತೆ, ಅಲಸೂರು ಲೇಕ್ ಬಳಿಯ ಕೆನ್ಸಿಂಗ್ ಟನ್ ರಸ್ತೆ, ಬಾಣಸವಾಡಿ ಮುಖ್ಯರಸ್ತೆ, ಪುಟ್ಟೇನಹಳ್ಳಿ ಇಪ್ಪತ್ನಾಲ್ಕನೇ ಮುಖ್ಯರಸ್ತೆ, ಕಾಮರಾಜ ರಸ್ತೆಯಲ್ಲಿನ ಗುಂಡಿಗಳ ಫೋಟೋಗಳನ್ನು ಹಾಕಿ, ಸಚಿವ ಕೆ.ಜೆ.ಜಾರ್ಜ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ತಲುಪುವಂತೆ ಟ್ವೀಟ್ ಮಾಡಿದ್ದಾರೆ.

ಸದ್ಯಕ್ಕೆ ಬೆಂಗಳೂರಿನಲ್ಲಿ ಸುಮಾರು 9 ಸಾವಿರ ಗುಂಡಿಗಳಿವೆ ಎಂದು ಬಿಬಿಎಂಪಿ ಲೆಕ್ಕ ಹಾಕಿದೆ. ಇವುಗಳನ್ನು ಬೇಗನೇ ಮುಚ್ಚಲೇಬೇಕು. ಇದಕ್ಕಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಹೇಳಿದೆ. ಈ ಬಗ್ಗೆ ಒನ್ಇಂಡಿಯಾ ಕನ್ನಡದಲ್ಲಿ ವರದಿ ಕೂಡ ಪ್ರಕಟವಾಗಿದೆ. ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚಲು ಎಷ್ಟು ಸಮಯ ಬೇಕೋ, ಅದೂ ಕಾದು ನೋಡಿಯೇ ಬಿಡೋಣ.

English summary
Malleshwaram MLA Dr. Ashwathnarayan tweet about Bengaluru potholes. He has posted some of the pothole pictures and compared with craters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X