ಬೆಂಗಳೂರಲ್ಲಿ ದರೋಡೆಕೋರರ ಮೇಲೆ ಗುಂಡಿನ ದಾಳಿ

Posted By: Gururaj
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 10 : ಬೆಂಗಳೂರಿನಲ್ಲಿ ರೌಡಿಗಳ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. 23ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಬೇಕಾಗಿದ್ದ ಇಬ್ಬರು ಆರೋಪಿಗಳು ಗಾಯಗೊಂಡಿದ್ದಾರೆ.

ಅಮರ್ ಮತ್ತು ಮುದವೀರ್ ಎಂಬ ರೌಡಿಗಳ ಮೇಲೆ ಪೊಲೀಸರು ಬೆಳ್ಳಂದೂರು ಬಳಿ ಗುಂಡಿನ ದಾಳಿ ನಡೆಸಿದ್ದಾರೆ. ಇಬ್ಬರ ಕಾಲಿಗೆ ಗುಂಡು ತಗುಲಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಬ್ಯಾಂಕ್ ಮ್ಯಾನೇಜರ್ ಮುನಿಯಪ್ಪ ಹತ್ಯೆಗೆ ನೋಟು ನಿಷೇಧ ಕಾರಣ!

Bengaluru police open fires at robbers

ಆರೋಪಿಗಳು ಶನಿವಾರ ರಾತ್ರಿ ಆನಂದ್ ಎಂಬುವವರ ಮೊಬೈಲ್ ಕದ್ದಿದ್ದರು. ಸರ್ಜಾಪುರ ರಸ್ತೆಯಲ್ಲಿಯೂ ಮೊಬೈಲ್ ದೋಚಿದ್ದರು, ಆರೋಪಿಗಳು ಬಂದಿದ್ದ ಬೈಕ್‌ನ ಸಂಖ್ಯೆ ಬರೆದುಕೊಂಡಿದ್ದ ಆನಂದ್ ಪೊಲೀಸರಿಗೆ ದೂರು ನೀಡಿದ್ದರು.

ಯುವತಿ ಅಪಹರಣ, ಅರ್ಧಗಂಟೆಯಲ್ಲೇ ರಕ್ಷಿಸಿದ ಯಶವಂತಪುರ ಪೊಲೀಸ್

ಕಳ್ಳರ ಪತ್ತೆಗಾಗಿ ಪೊಲೀಸರು ನಾಕಾಬಂಧಿ ಹಾಕಿದ್ದರು. ಇಂದು ಬೆಳಗ್ಗೆ 10 ಗಂಟೆ ವೇಳೆಗೆ ಬೆಳ್ಳಂದೂರು ಬಳಿ ಆರೋಪಿಗಳು ಬೈಕ್‌ನಲ್ಲಿ ಬಂದರು. ಆಗ ಅವರನ್ನು ತಡೆಯಲು ಪೊಲೀಸರು ಮುಂದಾದರು.

ಈ ವೇಳೆ ಪೊಲೀಸ್ ಪೇದೆಗಳಾದ ವಿಜಯ್ ಮತ್ತು ಆಂಟನಿ ಮೇಲೆ ದರೋಡೆಕೋರರು ಚಾಕುವಿನಿಂದ ಹಲ್ಲೆ ನಡೆಸಲು ಮುಂದಾದರು. ಆಗ ಇನ್ಸ್‌ಪೆಕ್ಟೆರ್ ಸೈಮನ್ ಅವರ ಮೇಲೆ ಗುಂಡಿನ ದಾಳಿ ನಡೆಸಿದರು.

ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಟಿ. ಸುನೀಲ್ ಕುಮಾರ್ ನೇಮಕ

ಅಮರ್ ಮತ್ತು ಮುದವೀರ್ ಕರ್ನಾಟಕ ಮತ್ತು ತಮಿಳುನಾಡು ಗಡಿಯಲ್ಲಿ ಕಳ್ಳತನ, ದರೋಡೆ ಪ್ರಕರಣದಲ್ಲಿ ಆರೋಪಿಗಳಾಗಿದ್ದರು. 2015ರಲ್ಲಿ ತಮಿಳುನಾಡು ಪೊಲೀಸ್ ಪೇದೆಯನ್ನು ಹತ್ಯೆ ಮಾಡಿದ ಆರೋಪ ಇವರ ಮೇಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bengaluru police opened fire at robbers near Bellandur on Sunday, September 10 morning. Amar and Maduveer injured.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ