ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಕ್ಕಳ ರಕ್ಷಣೆಗೆ ಬೆಂಗಳೂರಲ್ಲಿ ಆರಂಭವಾಯಿತು 'ಆಪರೇಷನ್ ಸ್ಮೈಲ್'

|
Google Oneindia Kannada News

ಬೆಂಗಳೂರು, ಆಗಸ್ಟ್ 6 : ಮಕ್ಕಳು ಹಾಗೂ ಅಂಗವಿಕಲರ ಬಡತನವನ್ನೇ ಬಂಡವಾಳ ಮಾಡಿಕೊಂಡು ಅವರನ್ನು ಭಿಕ್ಷಾಟನೆಗೆ ತಳ್ಳುವ ದೊಡ್ಡ ಜಾಲವೇ ಇದೆ. ಬೆಂಗಳೂರು ಪೊಲೀಸರು ಭಿಕ್ಷಾಟನೆಯಿಂದ ಮಕ್ಕಳನ್ನು ರಕ್ಷಣೆ ಮಾಡಲು 'ಆಪರೇಷನ್ ಸ್ಮೈಲ್' ಹೆಸರಿನ ಆಂದೋಲನವನ್ನು ಆರಂಭಿಸಿದ್ದಾರೆ.

ಗುರುವಾರ ಬೆಂಗಳೂರು ನಗರದಲ್ಲಿ ಪೊಲೀಸರು ಈ ಆಂದೋಲನಕ್ಕೆ ಚಾಲನೆ ನೀಡಿದ್ದಾರೆ. ಸುಪ್ರೀಂಕೋರ್ಟ್ ಆದೇಶದಂತೆ ಎಲ್ಲಾ ರಾಜ್ಯಗಳಲ್ಲಿಯೂ ಈ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದ್ದು, ಬೆಂಗಳೂರಿನಲ್ಲಿ ಆ.6ರಿಂದ ಆರಂಭವಾಗಿದೆ. [ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಏನು ಮಾಡಬಹುದು?]

child

ಟ್ರಾಫಿಲ್ ಸಿಗ್ನಲ್‌, ಸಿನಿಮಾ ಮಂದಿರ, ಬಸ್ ಮತ್ತು ರೈಲ್ವೆ ನಿಲ್ದಾಣ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಭಿಕ್ಷೆ ಬೇಡುವ ಮಕ್ಕಳನ್ನು ಪತ್ತೆ ಹಚ್ಚಿ ಅವರನ್ನು ರಕ್ಷಣೆ ಮಾಡುವ ಕಾರ್ಯಾಚರಣೆಯೇ 'ಆಪರೇಷನ್ ಸ್ಮೈಲ್'. ಮನೆಯಿಂದ ತಪ್ಪಿಸಿಕೊಂಡ ಮಕ್ಕಳನ್ನು ಈ ಕಾರ್ಯಾಚರಣೆ ಮೂಲಕ ಮನೆಗೆ ವಾಪಸ್ ಕಳಿಸಲಾಗುತ್ತದೆ.

'ಆಪರೇಷನ್ ಸ್ಮೈಲ್' ಕಾರ್ಯಾಚರಣೆಯಲ್ಲಿ ಸಿಗುವ ಮಕ್ಕಳ ಪೋಷಕರನ್ನು ಪತ್ತೆ ಹಚ್ಚಿ ಅವರೊಂದಿಗೆ ಕಳಿಸಲಾಗುತ್ತದೆ. ಪಾಲಕರು ಸಿಗುವ ತನಕ ಬಾಲ ಮಂದಿರದಲ್ಲಿ ಮಕ್ಕಳಿಗೆ ಆಶ್ರಯ ನೀಡಲಾಗುತ್ತದೆ.

ಉತ್ತರಾಖಂಡ್ ರಾಜ್ಯದಲ್ಲಿ ಜುಲೈ ತಿಂಗಳಿನಲ್ಲಿ 'ಆಪರೇಷನ್ ಸ್ಮೈಲ್' ಕಾರ್ಯಾಚರಣೆ ಮೂಲಕ 264 ಮಕ್ಕಳನ್ನು ಪತ್ತೆ ಹಚ್ಚಲಾಗಿದೆ. ಇವರಲ್ಲಿ 219 ಮಕ್ಕಳನ್ನು ಪೋಷಕರ ಬಳಿ ಕಳುಹಿಸಲಾಗಿದೆ. ಇಂತಹ ಕಾರ್ಯಾಚರಣೆ ಈಗ ಬೆಂಗಳೂರಿನಲ್ಲೂ ಆರಂಭವಾಗಿದೆ.

English summary
Bangalore police on August 5 launched 'Operation Smile' to track and rescue missing children.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X