ತಲೆಮರೆಸಿಕೊಂಡಿರುವ ಡೊಮಿನಿಕ್ ಬಂಧನಕ್ಕೆ ಪೊಲೀಸ್ ಬಲೆ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 24 : ಎಟಿಎಂಗಳಿಗೆ ತುಂಬಿಸಬೇಕಿದ್ದ 1 ಕೋಟಿ 37 ಲಕ್ಷ ರುಪಾಯಿಯಲ್ಲಿ 92 ಲಕ್ಷ ರುಪಾಯಿ ಎತ್ತಿಕೊಂಡು, ವಾಹನದಲ್ಲಿ 45 ಲಕ್ಷ ರುಪಾಯಿ ಬಿಟ್ಟು ಹೆಂಡತಿ ಮಗನೊಂದಿಗೆ ಪರಾರಿಯಾಗಿರುವ ಡೊಮಿನಿಕ್ ರಾಯ್ ಎಂಬಾತನ ಬಲೆಗೆ ಬೆಂಗಳೂರು ಪೊಲೀಸರು ಭಾರೀ ಬಲೆ ಬೀಸಿದ್ದಾರೆ.

ಲಿಂಗರಾಜಪುರ ನಿವಾಸಿಯಾಗಿರುವ ಡೊಮಿನಿಕ್ ರಾಯ್ ತಮಿಳುನಾಡು ಮೂಲದವನಾಗಿದ್ದು, ಸೆಕ್ಯೂರ್ ಟ್ರಾನ್ಸಿಟ್ ಕಂಪನಿಯ ಮೂಲಕ ಬ್ಯಾಂಕ್ ಗಳ ಎಟಿಎಂಗಳಿಗೆ ಹಣ ಸಾಗಿಸುವ ಹಾದಿಯಲ್ಲಿ, ವಾಹನದಲ್ಲಿದ್ದ 1.37 ಕೋಟಿ ರುಪಾಯಿಗಳೊಂದಿಗೆ ಬುಧವಾರ ಪರಾರಿಯಾಗಿದ್ದ.

ಭದ್ರತಾ ಸಿಬ್ಬಂದಿ ಪ್ರಕೃತಿ ಕರೆಗೆಂದು ಇಳಿದಿದ್ದಾಗ ವಾಹನ ತೆಗೆದುಕೊಂಡು ಪರಾರಿಯಾಗಿದ್ದ ಡೊಮಿನಿಕ್ ವಾಹನವನ್ನು ವಸಂತನಗರದಲ್ಲಿ ಬಿಟ್ಟಿರುವುದು ಗುರುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ವಾಹನದಲ್ಲಿ 2000 ರು ಮುಖಬೆಲೆಯ 45 ಲಕ್ಷ ರುಪಾಯಿಗಳನ್ನು ಮತ್ತು ಗನ್ ಬಿಟ್ಟು ಆತ ತಲೆಮರೆಸಿಕೊಂಡಿದ್ದಾನೆ. [ಮೌಂಟ್ ಕಾರ್ಮೆಲ್ ಕಾಲೇಜು ಬಳಿ ನಗದು ವಾಹನ ಪತ್ತೆ]

Bengaluru police form four team to nab Dominic

ಆತ ವಾಸವಿದ್ದ ಲಿಂಗರಾಜಪುರದಲ್ಲಿ ಅಕ್ಕಪಕ್ಕದವರ ಮೂಲಕ ಮಾಹಿತಿ ಸಂಗ್ರಹಿಸಿರುವ ಪೊಲೀಸರು ಆತನ ಹುಡುಕಾಟಕ್ಕಾಗಿ ನಾಲ್ಕು ತಂಡಗಳನ್ನು ರಚಿಸಿದ್ದು, ಆತನ ಬಲೆಗೆ ಭಾರೀ ಬಲೆ ಬೀಸಿದ್ದಾರೆ. ಈ ಸಂಬಂಧ ಪಕ್ಕದ ರಾಜ್ಯಗಳ ಪೊಲೀಸರಿಗೂ ಸಂದೇಶ ರವಾನಿಸಲಾಗಿದೆ.

ಆತನ ಹೆಂಡತಿ ಕೆಲ ವರ್ಷಗಳ ಹಿಂದೆ ದುಬೈನಲ್ಲಿ ಕೆಲಸ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ. ಡೊಮಿನಿಕ್ ಈಮೊದಲು ಸೆಕ್ಯೂರಿಟಿ ಏಜೆನ್ಸಿಯಲ್ಲಿಯೇ ಕೆಲಸಕ್ಕಿದ್ದ. ಪ್ರಸ್ತುತ, ಸೆಕ್ಯೂರ್ ಟ್ರಾನ್ಸಿಟ್ ಕಂಪನಿಗೆ ಕಳೆದ 10 ದಿನಗಳಿಂದ ಕೆಲಸಕ್ಕೆ ಬಂದಿರಲಿಲ್ಲ. ಆದರೆ, ಮೂರು ದಿನಗಳ ಹಿಂದೆ ಕ್ಷಮೆಕೋರಿ ಮತ್ತೆ ಕೆಲಸಕ್ಕೆ ಹಾಜರಾಗಿದ್ದ. [ಬೆಂಗಳೂರಿನಲ್ಲಿ 1.37 ಕೋಟಿ ಹಣದೊಂದಿಗೆ ಚಾಲಕ ಪರಾರಿ]

ಬ್ಯಾಂಕುಗಳಿಗೆ ರವಾನಿಸುವ ಹಣವನ್ನು ಲಪಟಾಯಿಸುವ ಯೋಜನೆಯನ್ನು ಆತ ಮೊದಲೇ ರೂಪಿಸಿಕೊಂಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಆತನ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bengaluru police have formed four team to nab Dominic Roy who has escaped with Rs 92 lakh out of 1.37 crore rupees. He had drove away van while filling money to ATMs in Bengaluru. He has abandoned van in Vasant Nagar before absconding with his wife and son.
Please Wait while comments are loading...