ಎಚ್ಚೆತ್ತುಕೊಂಡ ಬೆಂಗಳೂರು ಪೊಲೀಸರು: ಶಾರ್ಟ್‌ಕಟ್‌ಗೆ ಮುಕ್ತಿ

Written By:
Subscribe to Oneindia Kannada

ಬೆಂಗಳೂರು, ಏಪ್ರಿಲ್,20: ಅಂತೂ ಇಂತೂ ಬೆಂಗಳೂರು ಪೊಲೀಸರು ಆಗಬಹುದಾಗಿದ್ದ ಪ್ರಾಣಹಾನಿಯನ್ನು ತಪ್ಪಿಸಿದ್ದಾರೆ. ಕೊಂಚ ತಡವಾಗಿಯಾದರೂ ಎಚ್ಚೆತ್ತುಕೊಂಡಿದ್ದಾರೆ.

ಶಿವನ ಪಾದ ಸೇರಲು ಜಯನಗರದಲ್ಲಿ ಇದ್ದ ಶಾರ್ಟ್ ಕಟ್ ನ್ನು ಬಂದ್ ಮಾಡಿದ್ದಾರೆ. ಸೌತ್ ಎಂಡ್ ಮತ್ತು ಬಾಲಾಜಿ ಮೆಡಿಕಲ್ ಸ್ಟೋರ್ ಮಧ್ಯದಲ್ಲಿ ಡಿವೈಡರ್ ಕಿತ್ತುಹೋಗಿದ್ದನ್ನು ದುರಸ್ತಿ ಮಾಡಿದ್ದಾರೆ.[ಜಯನಗರದಲ್ಲಿದೆ ಶಿವನ ಪಾದ ಸೇರಲು ಶಾರ್ಟ್‌ಕಟ್!]

bengaluru

ಈ ಬಗ್ಗೆ ಒನ್ ಇಂಡಿಯಾ ಕನ್ನಡ ವರದಿ ಮಾಡಿತ್ತು. ಅಲ್ಲದೇ ಪೊಲೀಸ್ ಇಲಾಖೆಗೂ ಮಾಹಿತಿ ನೀಡಿತ್ತು. ಸೌತ್ ಎಂಡ್ ಸಿಗ್ನಲ್ ಮತ್ತು ಬಾಲಾಜಿ ಮೆಡಿಕಲ್ ಸ್ಟೋರ್ಸ್ ಸಮೀಪದ ಸಿಗ್ನಲ್ ಎರಡು ಕಡೆಯಿಂದ ಸಿಗ್ನಲ್ ಬಿಟ್ಟ ತಕ್ಷಣ ವಾಹನಗಳು ವೇಗವಾಗಿ ಬರುತ್ತವೆ. ಮಧ್ಯದ ಒಡೆದ ಡಿವೈಡರ್ ಬಳಿ ಶಾರ್ಟ್ ಕಟ್ ಮೂಲಕ ಹಾರಿ ಹೋಗಲು ದ್ವಿಚಕ್ರ ವಾಹನ ಸವಾರರು ಕಾಯುತ್ತಾ ಇರುತ್ತಾರೆ. ಇದು ಎಂಥ ಅಪಾಯ ತಂದೊಡ್ಡುತ್ತಿದೆ ಎಂಬುದನ್ನು ಸವಿರವಾಗಿ ವರದಿ ಮಾಡಲಾಗಿತ್ತು.[ಮಂಗಳವಾರ ಬೆಂಗಳೂರ ಶಾಂತಿ ಕದಡಿದವರು ಯಾರು?]

bengaluru

ಎರಡು ಕಡೆಯೂ ಬಂದ್
ಎರಡು ಕಡೆ ಡಿವೈಡರ್ ಕಿತ್ತುಹೋಗಿದ್ದನ್ನು ಸಿಮೆಂಟ್ ಹಾಕಿ ಬಂದ್ ಮಾಡಲಾಗಿದೆ. ಶಾರ್ಟ್ ಕಟ್ ಬಳಸುತ್ತಿದ್ದವರ ಜೀವ ಕಾಪಾಡಿದ ಕೀರ್ತಿ ಬೆಂಗಳೂರು ಪೊಲೀಸರಿಗೆ ಸಲ್ಲಬೇಕು.

ಸರ್ ಈ ಬಗ್ಗೆ ಮೊದಲೆ ತಿಳಿಸಿದ್ದೇವು. ಆದರೆ ಎಲ್ಲ ಆರ್ಡರ್ ಬಂದು ದುರಸ್ತಿ ಮಾಡಲು ಸ್ವಲ್ಪ ದಿನ ಹಿಡಿಯಿತು. ಜನರು ಸಹ ಸಹಕಾರ ನೀಡಬೇಕು ಎಂದು ಬಸವನಗುಡಿ ಠಾಣೆಯ ಹೊನ್ನರಾಜ್ ಹೇಳುತ್ತಾರೆ.

-
-
-
-
-

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Finally Bengaluru Police took a step on 'Jayanagar South End Circle flaw'. Now this death trap was blocked by Police. Good job Bengaluru Police.
Please Wait while comments are loading...