ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಂಚನೆ ಪ್ರಕರಣ: ಲತಾ ರಜನಿಕಾಂತ್ ವಿರುದ್ಧ ಎಫ್ ಐಆರ್

By Mahesh
|
Google Oneindia Kannada News

ಬೆಂಗಳೂರು, ಜೂ.15: ಸೂಪರ್ ಸ್ಟಾರ್ ರಜನಿಕಾಂತ್ ಅವರ ಪತ್ನಿ ಲತಾ ಅವರ ವಿರುದ್ಧ ವಂಚನೆ, ನಕಲಿ ದಾಖಲೆ ಪತ್ರ ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಎಫ್ ಐಆರ್ ಹಾಕಿದ್ದಾರೆ.

ರಜನಿಕಾಂತ್ ಅವರ ಕೊಚಾಡಿಯಾನ್ ಚಿತ್ರದ ಸೋಲು, ಅದರಿಂದ ಉಂಟಾದ ಆರ್ಥಿಕ ನಷ್ಟ ಇನ್ನೂ ರಜನಿಕಾಂತ್ ಕುಟುಂಬವನ್ನು ಕಾಡುತ್ತಿದೆ. ಈ ಚಿತ್ರಕ್ಕೆ ಸಂಬಂಧಿಸಿದಂತೆ ವಿತರಕರಿಗೆ ಆಗಿರುವ ಕಷ್ಟ ನಷ್ಟಗಳ ಕುರಿತು ಕೋರ್ಟಿಗೆ ಲತಾ ಅವರು ವಿವರಣೆ ನೀಡುವ ಸಂದರ್ಭದಲ್ಲಿ ನಕಲಿ ಲೆಟರ್ ಹೆಡ್ ದಾಖಲೆ ಒದಗಿಸಿದ್ದಾರೆ ಎಂದು ಆರೋಪಿಸಲಾಗಿದೆ.

2014ರ ನವೆಂಬರ್ ತಿಂಗಳಿನಲ್ಲಿ ಆಡ್ ಬ್ಯೂರೋ ಮೊಟ್ಟ ಮೊದಲಿಗೆ ಲತಾ ಅವರು ನೀಡಿದ್ದ ಲೆಟರ್ ಹೆಡ್ ನಕಲಿ ಎಂದು ಆರೋಪಿಸಿತು. ಕೊಚಾಡಿಯಾನ್ ಸಿನಿಮಾದ ಹಕ್ಕುಗಳನ್ನು ಎರಡು ಬಾರಿ ಮಾರಾಟ ಮಾಡಿದ್ದು, ಆರ್ಥಿಕ ವ್ಯವಹಾರದ ವಿವರಗಳ ಬಗ್ಗೆ ಪ್ರಶ್ನಿಸಲಾಗಿತ್ತು. ಇದನ್ನು ನಂತರ ಎಲ್ಲಾ ಟಿವಿ, ವೆಬ್ ಸೈಟ್ ಹಾಗೂ ದಿನಪತ್ರಿಕೆಗಳಲ್ಲಿ ದೊಡ್ಡ ಸುದ್ದಿ ಮಾಡಲಾಯಿತು.

Bengaluru police files FIR against Latha Rajinikanth

ಕೊಚಾಡಿಯನ್ ಆರ್ಥಿಕ ಸಂಕಷ್ಟದ ಬಗ್ಗೆ ಸುದ್ದಿ ಪ್ರಸಾರ ಮಾಡದಂತೆ ತಡೆ ಒಡ್ಡುವಂತೆ ಬೆಂಗಳೂರಿನ ಕೋರ್ಟಿನಿಂದ gag order(ಏನಿದು ಇಲ್ಲಿ ಓದಿ) ಪಡೆಯುವಲ್ಲಿ ಲತಾ ಯಶಸ್ವಿಯಾದರು. ಅದರೆ, ನಂತರ ಮದ್ರಾಸ್ ಹೈಕೋರ್ಟಿನಲ್ಲಿ ಇದೇ ಆದೇಶಕ್ಕೆ ತಡೆಯಾಜ್ಞೆ ಸಿಕ್ಕಿತ್ತು. ಅಲ್ಲಿನ ಮಾಧ್ಯಮಗಳು ಸುದ್ದಿ ಪ್ರಸಾರ ಮಾಡಿದ ಮೇಲೆ ಇಲ್ಲೂ ಅದು ಮುಂದುವರೆಯಿತು.

ಬೆಂಗಳೂರಿನ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಜೂ.9ರಂದು ಲತಾ ವಿರುದ್ಧ ನಕಲಿ ದಾಖಲೆ ಒದಗಿಸಿದ (ಬೆಂಗಳೂರಿನ ಕೋರ್ಟಿಗೆ) ಆರೋಪದ ಮೇಲೆ ಪ್ರಕರಣ ದಾಖಲಿಸಿ, ಎಫ್ ಐಆರ್ ಹಾಕುವಂತೆ ಪೊಲೀಸರಿಗೆ ಆದೇಶ ನೀಡಲಾಗಿತ್ತು.

ಆಡ್ ಬ್ಯೂರೋ ಕಂಪನಿ ನೆರವಿನಿಂದ ಕೋಚಾಡಿಯಾನ್ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಪೂರ್ತಿಗೊಳ್ಳಲು ಸಾಧ್ಯವಾಯಿತು. ಸುಮಾರು 10 ಕೋಟಿ ರು ಗೂ ಅಧಿಕ ನೆರವು ಲತಾ ರಜನಿಕಾಂತ್ ಅವರಿಗೆ ಸಿಕ್ಕಿದೆ.

ಆಡ್ ಬ್ಯೂರೋ ಕಂಪನಿಯ ಅಭಿರ್ ಚಂದ್ ನಹಾರ್ ಗೆ ಕೊಚಾಡಿಯನ್ ನಿರ್ಮಾಣ ಸಂಸ್ಥೆ ಮೀಡಿಯಾ ಒನ್ ಎಂಟರ್ ಟೇನ್ಮೆಂಟ್ ಲಿ ಸಂಸ್ಥೆ 6.84 ಕೋಟಿ ರು ಬಾಕಿ ಉಳಿಸಿಕೊಂಡಿದೆ. ಕೊಚಾಡಿಯಾನ್ ಚಿತ್ರ ರಜನಿ ಕುಟುಂಬವನ್ನು ಎಡಬಿಡದೆ ಕಾಡುತ್ತಿದೆ.

English summary
Bengaluru police registering an FIR against super star Rajinikanth's wife Latha for allegedly producing fake documents in a court in Bengaluru to get a gag order on the media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X