• search

ಅನಾಥ ಶವಕ್ಕೆ ಪೋಷಕರಾದ ಬಾಗಲೂರು ಪೊಲೀಸರು

By Nayana
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಬೆಂಗಳೂರು, ಆಗಸ್ಟ್‌ 2: ಬೆಂಗಳೂರನಂತಹ ಜನನಿಬಿಡ ನಗರದಲ್ಲಿ ನಿತ್ಯ ಹಲವು ಅನಾಥ ಶವಗಳು ಹೇಳ ಹೆಸರಿಲ್ಲದೆ ಮರೆಯಾಗಿ ಹೋಗುತ್ತದೆ.

  ಬದುಕಿನ ಜಂಜಾಟಕ್ಕೆ ಸಿಲುಕಿ ಎಲ್ಲರೂ ಇದ್ದೂ ನಿಜಕ್ಕೂ ಯಾರೂ ಇಲ್ಲದವರು ಕೂಡ ಅನಾಥರಾಗಿ ಸತ್ತು ಹೋಗುತ್ತಾರೆ ಅಂತಹ ಅನಾಥ ಶವಕ್ಕೆ ಅಂತ್ಯಕ್ರಿಯೆ ನೆರವೇರಿಸುವ ಮೂಲಕ ಪೊಲೀಸಲು ಮಾನವೀಯತೆ ಮೆರೆದಿದ್ದಾರೆ.

  ಹೀಗೂ ಉಂಟೆ! ಒಂದೇ ಸ್ಕೂಟರ್ ಮೇಲಿದೆ 635 ಕೇಸ್, 63,500 ದಂಡ

  ಬಾಗಲೂರು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಪತ್ತೆಯಾಗಿದ್ದ ಪೊಲೀಸ್‌ ಠಾಣೆಯ ಸಿಬ್ಬಂದಿ ಶಾಸ್ತ್ರೋಕ್ತವಾಗಿ ಅಂತ್ಯಕ್ರಿಯೆ ನೆರವೇರಿಸುವ ಮೂಲಕ ಮೃತ ವ್ಯಕ್ತಿ ಆತ್ಮಕ್ಕೆ ಶಾಂತಿ ಕೋರಿ ಸಾವಿನ ಬಳಕವೂ ಆತನೊಂದಿಗೆ ತಾವಿದ್ದೇವೆ ಎಂದು ಭರವಸೆ ಮೂಡಿಸುವ ಪ್ರಯತ್ನ ಮಾಡಿದ್ದಾರೆ.

  Bengaluru police does funeral for orphans corpse

  ಬಾಗಲೂರು ಪೊಲೀಸರ ಈ ಕಾರ್ಯ ಶ್ಲಾಘಿಸಿ ಬೆಂಗಳೂರು ನಗರ ಪೊಲೀಸ್‌ ಆಯುಕ್ತರು ಟ್ವಿಟ್ಟರ್‌ನಲ್ಲಿ ಭಾವಚಿತ್ರದ ಸಹಿತ ಪ್ರಶಂಸೆ ವ್ಯಕ್ತಪಡಿಸಿದ್ದು, ಇದಕ್ಕ ನೂರಾರು ಸಾರ್ವಜನಿಕರಿಂದ ಮೆಚ್ಚುಗೆ ಕೂಡ ವ್ಯಕ್ತವಾಗದಿದೆ.

  ನಾಗರಿಕರೊಬ್ಬರು ಬಾಗಲೂರು ಪೊಲೀಸರು ಈ ಹಿಂದೆಯೂ ಇಂತಹ ಮಾನವೀಯ ಹಾಗೂ ಹೃದಯಸ್ಪರ್ಶಿ ಕೆಲಸವನ್ನು ಮಾಡಿದ್ದನ್ನು ಸ್ಮರಿಸಿ ಎಲ್ಲಾ ಪೊಲೀಸ್‌ ಸಿಬ್ಬಂದಿಗಳಲ್ಲಿ ಇಂತಹ ಸಹೃದಯತೆ ಇರಬೇಕು ಎಂದು ಆಶಿಸಿದ್ದಾರೆ.

  ಇದೇ ವೇಳೆ ಪ್ರಜ್ಞಾವಂತ ನಾಗರಿಕರಿಬ್ಬರು, ಅನಾಥ ಶವವನ್ನು ವೈದ್ಯಕೀಯ ಕಾಲೇಜಿಗೆ ದಾನ ಮಾಡುವ ಮೂಲಕ ಇನ್ನಷ್ಟು ಅರ್ಥಪೂರ್ಣವಾಗಿ ಅಂತ್ಯಕ್ರಿಯೆ ನೆರವೇರಿಸಬಹುದಿತ್ತು ಎಂದು ಸಲಹೆ ಮಾಡಿದ್ದಾರೆ. ಈ ಮೂರು ದಿನದ ಬದುಕಲ್ಲಿ ಯಾರೂ ಅನಾಥರಲ್ಲ, ಎಲ್ಲರೂ ನಮ್ಮವರು! ಮಾಸಿತು ಜೀವದ ಬಣ್ಣ, ಜೊತೆಯಿತ್ತು ಖಾಕಿ ಋಣ ಎಂದು ಟ್ವೀಟ್‌ ಮಾಡಿದ್ದಾರೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Bagalur police of Bangalore have ensured funeral for an orphan's corpse and shown their humanity and commitment towards concern about the society. Many people have appreciated this act in social media.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more