ಹೊಸ ವರ್ಷಾಚರಣೆ: ಬೆಂಗಳೂರು ಮದ್ಯಪ್ರಿಯರಿಗೆ ಸಿಹಿಸುದ್ದಿ

Written By:
Subscribe to Oneindia Kannada

ಬೆಂಗಳೂರು, ಡಿ 24: ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲು ನಗರದ ಮದ್ಯಪ್ರಿಯರಿಗೆ ಪೊಲೀಸ್ ಇಲಾಖೆ ಸಿಹಿಸುದ್ದಿಯೊಂದನ್ನು ಪ್ರಕಟಿಸಿದೆ.

ಡಿಸೆಂಬರ್ 31 ಮತ್ತು ಜನವರಿ 1ರಂದು ಮಧ್ಯರಾತ್ರಿ 2 ಗಂಟೆಯವರೆಗೆ ಬಾರ್ ಮತ್ತು ರೆಸ್ಟೋರೆಂಟುಗಳು (ವೈನ್ ಸ್ಟೋರ್ ಹೊರತು ಪಡಿಸಿ) ಕಾರ್ಯ ನಿರ್ವಹಿಸಬಹುದು ಎಂದು ನಗರ ಪೊಲೀಸ್ ಆಯುಕ್ತ ಎನ್ ಎಸ್ ಮೇಘರಿಕ್ ಆದೇಶ ನೀಡಿದ್ದಾರೆ. (ಸುಪ್ರೀಂ ಮದ್ಯ ಆದೇಶ, ಸರ್ಕಾರಕ್ಕೆ ತಲೆನೋವು)

Bengaluru Police Commissioner granted permission to keep the business till 2AM on Dec 31 and Jan1

ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮನೋರಂಜನಾ ಕ್ಲಬ್, ಬಾರ್ ಮತ್ತು ರೆಸ್ಟೋರೆಂಟ್ ಗಳು ಮೇಲಿನ ಎರಡು ದಿನ ರಾತ್ರಿ 2 ಗಂಟೆಗಳ ವರೆಗೂ ಕಾರ್ಯ ನಿರ್ವಹಿಸಬಹುದು ಎಂದು ಬೆಂಗಳೂರು ಸಿಟಿ ಪೊಲೀಸ್ ತಮ್ಮ ಟ್ವಿಟ್ಟರ್ ಅಕೌಂಟ್ ಮೂಲಕವೂ ತಿಳಿಸಿದೆ.

ನಗರದ ವಿವಿಧ ಹೋಟೇಲ್, ಬಾರುಗಳ ಮಾಲೀಕರು ನೀಡಿದ ಮನವಿಯ ಪ್ರಕಾರ, ಕರ್ನಾಟಕ ಪೊಲೀಸ್ ಕಾಯ್ದೆ ಸೆಕ್ಷನ್ 1963, 31(W)ಯಡಿಯಲಿ ಬೆಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಬರುವ ಬಾರ್, ಕ್ಲಬ್, ಹೋಟೇಲುಗಳಿಗೆ ಆಯುಕ್ತರು ಈ ಆದೇಶ ಹೊರಡಿಸಿದ್ದಾರೆ.

ಆದಾಗ್ಯೂ, ಮಧ್ಯರಾತ್ರಿ ಎರಡು ಗಂಟೆಯವರಿಗೆ ಕಾರ್ಯ ನಿರ್ವಹಿಸುವವರು ಅಬಕಾರಿ ಇಲಾಖೆ ಮತ್ತು ಸರಕಾರದಿಂದ ಪ್ರತ್ಯೇಕ ಅನುಮತಿ ಪಡೆಯಬೇಕೆಂದು, ಪೊಲೀಸ್ ಆಯುಕ್ತರು ಸ್ಪಷ್ಟ ಪಡಿಸಿದ್ದಾರೆ.

ಸಂಭ್ರಮಾಚರಣೆ ಹೆಸರಿನಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ಅಸಭ್ಯವಾಗಿ ನಡೆದುಕೊಳ್ಳುವುದು, ಸಾರ್ವಜನಿಕರಿಗೆ ತೊಂದರೆ ನೀಡುವುದು ಮುಂತಾದ ಕಾನೂನಿಗೆ ವಿರುದ್ದವಾಗಿ ನಡೆದುಕೊಳ್ಳುವವರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಮೇಘರಿಕ್ ಎಚ್ಚರಿಕೆ ನೀಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bengaluru Police Commissioner N S Megharikh granted permission to Bar and Restaurants, Recreation Clubs, Eating houses to keep the business till 2AM on Dec 31 and Jan 1, 2017.
Please Wait while comments are loading...