ಬೆಂಗಳೂರು: ಮಾದಕ ವಸ್ತು ಮಾರುತ್ತಿದ್ದ ವ್ಯಕ್ತಿಯ ಬಂಧನ

Subscribe to Oneindia Kannada

ಬೆಂಗಳೂರು, ಫೆಬ್ರವರಿ 3: ಸ್ಯಾಟಲೈಟ್ ಬಸ್ ನಿಲ್ದಾಣದ ಪಕ್ಕ ಮಾದಕ ಪದಾರ್ಥ 'ಓಪಿಯಂ' ಮಾರುತ್ತಿದ್ದ ವ್ಯಕ್ತಿಯೋರ್ವನನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ರಾಜಸ್ಥಾನ ಮೂಲದ ಲಾಲ್ ರಾಮ್ ಎಂದು ಗುರುತಿಸಲಾಗಿದೆ.

ಬ್ಯಾಟರಾಯನಪುರ ಪೊಲೀಸ್ ಠಾಣಾ ಸರಹದ್ದಿಗೆ ಒಳಪಡುವ ಸ್ಯಾಟಲೈಟ್ ಬಸ್ ನಿಲ್ದಾಣದ ಪಕ್ಕದ ಮೆನ್ಸ್ ಬ್ಯೂಟಿ ಸೆಲೂನ್ ಮುಂಭಾಗ ವ್ಯಕ್ತಿಯೊಬ್ಬ ಮಾದಕ ವಸ್ತು ಮಾರುತ್ತಿದ್ದಾನೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಗುರುವಾರ ಬಂದಿತ್ತು. ಮಾಹಿತಿ ಮೇಲೆ ದಾಳಿ ನಡೆಸಿದ ಪೊಲೀಸರು ಆರೋಪಿ 19 ವರ್ಷದ ಲಾಲಾರಾಮ್ ನನ್ನು ಬಂಧಿಸಿದ್ದಾರೆ. ಈತ ರಾಜಸ್ಥಾನದ ಜೋದ್‍ಪುರದವನು ಎಂದು ತಿಳಿದು ಬಂದಿದೆ.

 Bengaluru: Police arrested opium seller

ಬಂಧಿತನಿಂದ 108 ಗ್ರಾಂ ಓಪಿಯಂ, 1 ಮೊಬೈಲ್ ಫೋನ್ ಮತ್ತು 500ರೂ ನಗದು ಹಣ ಹಾಗೂ ಒಂದು ತೂಕದ ಯಂತ್ರವನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಯ ಬಳಿ ಇದ್ದ ಓಪಿಯಂ ಬೆಲೆ ಸುಮಾರು 50,000 ರೂಪಾಯಿ ಎಂಂದು ಅಂದಾಜು ಮಾಡಲಾಗಿದೆ.

ಆರೋಪಿ ಲಾಲಾರಾಮ್ ಓಪಿಯಂ ಅನ್ನು ಪರಿಚಯವಿರುವ ರಾಜಸ್ಥಾನ ಮೂಲದ ವ್ಯಕ್ತಿಯಿಂದ ಪಡೆದುಕೊಂಡು, ಚಿಕ್ಕ ಚಿಕ್ಕ ಪ್ಯಾಕ್ ಮಾಡಿ ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿರುವುದು ವಿಚಾರಣೆಯಿಂದ ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Police arrested Rajastan based Opium seller near Satellite bus stand Byatarayanapura, Bengaluru, who allegedly trying to sell opium to customers.
Please Wait while comments are loading...