ವರ್ಷಕ್ಕೆ ಇನ್ನೂರು ಕೋಟಿ ಉಳಿಸಲು ಬೆಂಗಳೂರು ಪೂರ್ತಿ ಎಲ್ ಇಡಿ ದೀಪ

Posted By:
Subscribe to Oneindia Kannada

ಬೆಂಗಳೂರು, ಮೇ 18: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸದ್ಯಕ್ಕೆ ಇರುವ ಬೀದಿ ಬದಿ ದೀಪಗಳನ್ನು ಬದಲಿಸಿ, ಎಲ್ ಇಡಿ ಬಲ್ಬ್ ಗಳನ್ನು ಅಳವಡಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಹೆಚ್ಚುತ್ತಿರುವ ವಿದ್ಯುತ್ ಬಿಲ್, ಸದ್ಯಕ್ಕೆ ಇರುವ ವಿದ್ಯುತ್ ದೀಪಗಳು ಸರಿಯಾದ ಬೆಳಕು ಬೀರದ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಾಗಿದೆ.

ಈ ಬಗ್ಗೆ ಬೆಂಗಳೂರ್ ಮಿರರ್ ನಲ್ಲಿ ವರದಿ ಪ್ರಕಟವಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಐದು ಲಕ್ಷ ಬೀದಿ ದೀಪಗಳಿವೆ. ಮುಂದಿನ ವಾರ ಯೋಜನೆ ವಿಚಾರವಾಗಿ ಟೆಂಡರ್ ಕರೆಯಲಾಗುವುದು. ಸದ್ಯಕ್ಕೆ ಈ ದೀಪಗಳಿಗೆ ತಿಂಗಳಿಗೆ ಹದಿನೆಂಟು ಕೋಟಿ ರುಪಾಯಿ ವಿದ್ಯುತ್ ಬಿಲ್ ಕಟ್ಟಲಾಗುತ್ತಿದೆ. ಅಂದರೆ ವರ್ಷಕ್ಕೆ ಇನ್ನೂರು ಕೋಟಿ ರುಪಾಯಿಗೂ ಹೆಚ್ಚು ಮೊತ್ತವಾಗುತ್ತದೆ.[ಬೆಂಗಳೂರಿಗೆ 'ಪಾಡ್ ಕಾರ್', ಟ್ರಾಫಿಕ್ ನಿಯಂತ್ರಣಕ್ಕೆ ಹೊಸ ತಂತ್ರ]

Bengaluru plans to replace all existing street lights with LED lights

ಇದರ ಜತೆಗೆ ಬೀದಿ ದೀಪಗಳ ವಾರ್ಷಿಕ ನಿರ್ವಹಣೆ ಐವತ್ತು ಕೋಟಿಯಾಗುತ್ತದೆ. ಎಲ್ ಇಡಿ ಬಳಸುವುದರಿಂದ ವಿದ್ಯುತ್ ಬಿಲ್ ಶೇ ಐವತ್ತರಿಂದ ಅರವತ್ತರಷ್ಟು ಕಡಿತವಾಗುವ ಸಾಧ್ಯತೆ ಇದೆ. ಅಂದಹಾಗೆ ಈ ಯೋಜನೆಗೆ ಬಿಬಿಎಂಪಿ ಯಾವುದೇ ಹಣ ಹೂಡುವುದಿಲ್ಲ. ಆದರೆ ಈ ಯೋಜನೆಯಿಂದ ಉಳಿತಾಯ ಆಗುವ ಹಣವನ್ನು ಗುತ್ತಿಗೆದಾರರು ಬಿಬಿಎಂಪಿ ಜತೆಗೆ ಹಂಚಿಕೊಳ್ಳುತ್ತಾರೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.

ಎಲ್ ಇಡಿ ದೀಪವು ಹತ್ತು ಸಾವಿರ ರುಪಾಯಿ ಖರ್ಚು ಬೀಳುತ್ತದೆ. ಗುತ್ತಿಗೆದಾರರು ಇದಕ್ಕಾಗಿ ಐನೂರು ಕೋಟಿ ರುಪಾಯಿ ಹೂಡುತ್ತಾರೆ. ನಗರದಲ್ಲಿ ದೀಪಗಳ ಬದಲಾವಣೆಗೆ ಒಂದು ವರ್ಷ ಸಮಯ ಆಗುತ್ತದೆ. ಈಗಾಗಲೇ ಕಾರ್ಯ ನಿರ್ವಹಿಸದ ಬೀದಿ ದೀಪಗಳನ್ನು ಈ ಯೋಜನೆ ಅಡಿಯಲ್ಲಿ ಸರಿಪಡಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.[ಬೆಂಗಳೂರು: ರಸ್ತೆಯಲ್ಲಿ ವಾಹನ ಪಾರ್ಕ್ ಮಾಡೋದಾದ್ರೆ ಹಣ ತೆರಬೇಕಾಗುತ್ತೆ!]

ಸದ್ಯಕ್ಕೆ ಸಿಬ್ಬಂದಿ ಕೊರತೆಯಿಂದ ಬೀದಿ ದೀಪಗಳ ನಿರ್ವಹಣೆ ಪರಿಣಾಮಕಾರಿಯಾಗಿಲ್ಲ. ಆದ್ದರಿಂದ ಅದಕ್ಕಾಗಿಯೇ ಕಂಟ್ರೋಲ್ ರೂಂ ಸ್ಥಾಪನೆ ಮಾಡುವುದಾಗಿ ಅವರು ಹೇಳಿದ್ದಾರೆ. ಈಗ ಬೀದಿ ದೀಪಗಳು ಇನ್ನೂರೈವತ್ತು ವಾಟ್ಸ್ ನದು. ಅದನ್ನು ಎಲ್ ಇಡಿಯ ತೊಂಬತ್ತು ವಾಟ್ಸ್ ನಿಂದ ಬದಲಿಸಿದರೆ ಬಹಳ ವಿದ್ಯುತ್ ಉಳಿತಾಯ ಮಾಡಬಹುದು. ಈಗಿರುವ ಬಲ್ಬ್ ಗಳಿಗೆ ಮೂರು ಯೂನಿಟ್ ವಿದ್ಯುತ್ ಬೇಕಾದರೆ, ಎಲ್ ಇಡಿಗೆ ಒಂದು ಯೂನಿಟ್ ಸಾಕು ಎಂದು ಬೆಸ್ಕಾಂ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
There are five lakh street lights in the BBMP limits. The BBMP will float a tender for the project next week. At present, the civic body pays close to Rs 18 crore for electricity- that is over Rs 200 crore per year. The BBMP also spends an additional Rs 50 crore for the street lights' maintenance. With LED, it hopes to cut its bill by 50 to 60 per cent.
Please Wait while comments are loading...