ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಜ್ಞಾನ ಓದಿ, ಮೂಢನಂಬಿಕೆ ತೊಲಗಿಸಿ : ಸಿದ್ದರಾಮಯ್ಯ

ನಾನು ಖಗೋಳ ಶಾಸ್ತ್ರವನ್ನು ಹೆಚ್ಚು ಓದಿಲ್ಲ. ಆದರೆ ವಿಜ್ಞಾನದ ವಿದ್ಯಾರ್ಥಿ. ಪಿಯುಸಿಯಲ್ಲಿ ಜೀವಶಾಸ್ತ್ರ , ಭೌತಶಾಸ್ತ್ರದಂತಹ ವಿಷಯವನ್ನು ಅಧ್ಯಯನ ಮಾಡಿದ್ದೇನೆ, ಹೀಗಾಗಿ ನನ್ನಲ್ಲಿ ವೈಜ್ಞಾನಿಕ ಮನೋಭಾವ ಬೆಳೆದಿದೆ : ಸಿದ್ದರಾಮಯ್ಯ

By Mahesh
|
Google Oneindia Kannada News

ಬೆಂಗಳೂರು, ಜನವರಿ 18: 'ನಾನು ಖಗೋಳ ಶಾಸ್ತ್ರವನ್ನು ಹೆಚ್ಚು ಓದಿಲ್ಲ. ಆದರೆ ವಿಜ್ಞಾನದ ವಿದ್ಯಾರ್ಥಿ. ಪಿಯುಸಿಯಲ್ಲಿ ಜೀವಶಾಸ್ತ್ರ , ಭೌತಶಾಸ್ತ್ರದಂಥ ವಿಷಯವನ್ನು ಅಧ್ಯಯನ ಮಾಡಿದ್ದೇನೆ, ಹೀಗಾಗಿ ನನ್ನಲ್ಲಿ ವೈಜ್ಞಾನಿಕ ಮನೋಭಾವ ಬೆಳೆದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೂತನ ತಾರಾಲಯವನ್ನು ಉದ್ಘಾಟಿಸಿ ಮಾತನಾಡಿದರು.

ಮೂಢನಂಬಿಕೆ, ಕಂದಾಚಾರಗಳನ್ನು ಅವಿದ್ಯಾವಂತರಿಗಿಂತ ವಿದ್ಯಾವಂತರೇ ಹೆಚ್ಚಾಗಿ ನಂಬುತ್ತಿದ್ದು , ಅದನ್ನು ಬಿಟ್ಟು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದರು. ನಗರದ ನೆಹರು ಪ್ಲಾನೆಟೋರೀಯಂನಲ್ಲಿ ಹೈಬ್ರಿಡ್ಜ್ ಪ್ರೊಕ್ಷಷನ್ ವ್ಯವಸ್ಥೆಯ ನವೀಕರಣ ತಾರಾಲಯವನ್ನು ಉದ್ಘಾಟಿಸಿ, ಶಾಲಾ ಮಕ್ಕಳು, ವಿಜ್ಞಾನಿಗಳ ಜತೆ ಖಗೋಳ ವಿಸ್ಮಯವನ್ನು ವೀಕ್ಷಿಸಿದರು.

ಮಕ್ಕಳಿಗೆ ವಿಜ್ಞಾನದಲ್ಲಿ ಆಸಕ್ತಿ ಬೆಳೆಸಬೇಕು, ವಿಜ್ಞಾನಿಯಾಗುವ ಕನಸು ಕಟ್ಟಬೇಕು, ಇತ್ತೀಚೆಗೆ ವಿಜ್ಞಾನ ಕಲಿಯುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಮಾಹಿತಿ ತಂತ್ರಜ್ಞಾನ , ವೈದ್ಯಕೀಯ ಇಂಜಿನಿಯರ್ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ತೋರುತ್ತಿದ್ದಾರೆ. ಮೂಲ ವಿಜ್ಞಾನದ ಕಡೆ ಹೆಚ್ಚು ಗಮನಹರಿಸಬೇಕೆಂದು ಸಲಹೆ ನೀಡಿದರು.

ಜರ್ಮನಿಯ ಕಾರ್ಲ್ ಝೈಸ್ ಡಾ.ಮಾರ್ಟಿನ್ ವಿಮನ್ ಮತ್ತು ಬೇಸ್ ಆಡಳಿತ ಮಂಡಳಿ ಅಧ್ಯಕ್ಷ ಪ್ರೊ.ಯು.ಆರ್.ರಾವ್, ನೆಹರು ತಾರಾಲಯದ ನಿರ್ದೇಶಕಿ ಬಿ. ಎಸ್.ಶೈಲಜಾ, ಜಂಟಿ ನಿರ್ದೇಶಕ ಪ್ರಮೋದ್ ಜಿ.ಗಲಿಗಲಿ,ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಂ.ಆರ್.ಸೀತಾರಾಮ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಮಕ್ಕಳಿಗೆ ಸಿಎಂ ಸಿದ್ದರಾಮಯ್ಯ ಕರೆ

ಮಕ್ಕಳಿಗೆ ಸಿಎಂ ಸಿದ್ದರಾಮಯ್ಯ ಕರೆ

ಮಕ್ಕಳಿಗೆ ವಿಜ್ಞಾನದಲ್ಲಿ ಆಸಕ್ತಿ ಬೆಳೆಸಬೇಕು, ವಿಜ್ಞಾನಿಯಾಗುವ ಕನಸು ಕಟ್ಟಬೇಕು, ಇತ್ತೀಚೆಗೆ ವಿಜ್ಞಾನ ಕಲಿಯುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಮಾಹಿತಿ ತಂತ್ರಜ್ಞಾನ , ವೈದ್ಯಕೀಯ ಇಂಜಿನಿಯರ್ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ತೋರುತ್ತಿದ್ದಾರೆ. ಮೂಲ ವಿಜ್ಞಾನದ ಕಡೆ ಹೆಚ್ಚು ಗಮನಹರಿಸಬೇಕೆಂದು ಸಲಹೆ ನೀಡಿದರು.

ಸೂರ್ಯ ಗ್ರಹಣ, ಚಂದ್ರಗ್ರಹಣ

ಸೂರ್ಯ ಗ್ರಹಣ, ಚಂದ್ರಗ್ರಹಣ

ಸೂರ್ಯ ಗ್ರಹಣ, ಚಂದ್ರಗ್ರಹಣ ದಿನದಂದು ಯಾರೂ ಹೊರಗೆ ಬರಬಾರದೆಂದು ಹೇಳುತ್ತಾರೆ. ಅವಿದ್ಯಾವಂತರು ಯಾವ ಗ್ರಹಣವಿದ್ದರೂ ಸಹ ತಮ್ಮ ಪಾಡಿಗೆ ತಾವು ಕೂಲಿ ಕೆಲಸ ಮಾಡುತ್ತಾರೆ. ಅವರಿಗೆ ಏನೂ ಆಗಿರುವುದಿಲ್ಲ ಎಂದರು.

ಮೂಢನಂಬಿಕೆ ಬಿಡಿ

ಮೂಢನಂಬಿಕೆ ಬಿಡಿ

ಮಂಗಳವಾರಗಳಂದು ತಲೆ ಕೂದಲು ಕತ್ತರಿಸಬಾರದು ಎಂದು ಹೇಳುತ್ತಾರೆ. ಅದಕ್ಕೆ ಪೂರಕವಾಗಿ ಕಟಿಂಗ್ ಶಾಪ್ ಗಳು ಮುಚ್ಚುತ್ತವೆ. ಇಂಥ ನಂಬಿಕೆಗಳಿಗೆ ಯಾವುದೇ ವೈಜ್ಞಾನಿಕ ದೃಢೀಕರಣಗಳಿಲ್ಲ ಎಂದು ಹೇಳಿದರು.

ಗ್ರಹಗಳನ್ನು ಪೂಜೆ ಮಾಡುತ್ತಿದ್ದೇವೆ

ಗ್ರಹಗಳನ್ನು ಪೂಜೆ ಮಾಡುತ್ತಿದ್ದೇವೆ

ವಿಜ್ಞಾನ ಮುಂದು ವರೆದು ಮಂಗಳಗ್ರಹದ ಮೇಲೆ ನಡೆದಾಡಿ ಬಂದರೂ ನಾವಿನ್ನೂ ಗ್ರಹಗಳನ್ನು ಪೂಜೆ ಮಾಡುತ್ತಿದ್ದೇವೆ. ಜ್ಯೋತಿಷಿಗಳು ನಿಮ್ಮ ರಾಶಿಗೆ ಶನಿಗ್ರಹ ಬಂದಿದೆ ಎಂದು ನಂಬಿಸುತ್ತಾರೆ. ಮಾಧ್ಯಮಗಳು ಇಂತಹ ನಂಬಿಕೆಗಳಿಗೆ ಉತ್ತೇಜನ ನೀಡುತ್ತಿವೆ

ನೆಹರು ತಾರಾಲಯ ಹೈಬ್ರಿಡ್ ಪ್ರೊಜೆಕ್ಷನ್ ಸಿಸ್ಟಮ್

ನೆಹರು ತಾರಾಲಯ ಹೈಬ್ರಿಡ್ ಪ್ರೊಜೆಕ್ಷನ್ ಸಿಸ್ಟಮ್

27 ವರ್ಷಗಳ ಹಿಂದೆ ಪ್ರಾರಂಭವಾದ ನೆಹರು ತಾರಾಲಯ ಹೈಬ್ರಿಡ್ ಪ್ರೊಜೆಕ್ಷನ್ ಸಿಸ್ಟಮ್ ಅಳವಡಿಸಿಕೊಂಡು ಆಧುನೀಕರಣಗೊಂಡಿದೆ. ವಿಜ್ಞಾನದ ಬೆಳವಣಿಗೆಗೆ ರಾಜ್ಯ ಸರ್ಕಾರ ಎಲ್ಲ ನೆರವು ನೀಡಲಿದೆ.

ನೆಹರು ಅವರು ವಿಜ್ಞಾನಕ್ಕೆ ತಳಹದಿ ಹಾಕಿದವರು

ನೆಹರು ಅವರು ವಿಜ್ಞಾನಕ್ಕೆ ತಳಹದಿ ಹಾಕಿದವರು

ನೆಹರು ಅವರು ವಿಜ್ಞಾನಕ್ಕೆ ತಳಹದಿ ಹಾಕಿದವರು. ವಿಜ್ಞಾನದಲ್ಲಿ ಭವಿಷ್ಯವಿದೆ ಎಂದು ಘೋಷಿಸಿದ್ದರು ಎಂದು ಹೇಳಿದರು. 12 ಕೋಟಿ ವೆಚ್ಚದಲ್ಲಿ ನೆಹರು ತಾರಾಲಯವನ್ನು ನವೀಕರಣಗೊಳಿಸಲಾಗಿದೆ.
ಸಾರ್ವಜನಿಕರು ವಿಶೇಷವಾಗಿ ಮಕ್ಕಳು ಇದನ್ನು ಬಳಸಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ನೆಹರು ತಾರಾಲಯಕ್ಕೆ ವರ್ಷಕ್ಕೆ 2-3 ಲಕ್ಷ ಜನ ಭೇಟಿ

ನೆಹರು ತಾರಾಲಯಕ್ಕೆ ವರ್ಷಕ್ಕೆ 2-3 ಲಕ್ಷ ಜನ ಭೇಟಿ

ನೆಹರು ತಾರಾಲಯಕ್ಕೆ ವರ್ಷಕ್ಕೆ 2-3 ಲಕ್ಷ ಜನ ಭೇಟಿ ನೀಡುತ್ತಿದ್ದಾರೆ. ತಾರಾಲಯದ ನವೀಕರಣದ ಕಾಮಗಾರಿ 10 ತಿಂಗಳಿನಿಂದ ನಡೆದು ಇಂದು ಉದ್ಘಾಟನೆಯಾಗಿದೆ. ಇದರ ಜೊತೆಗೆ ಮಂಗಳೂರಿನ ಪಿಳಿಕುಲದಲ್ಲಿ 35 ಕೋಟಿ ವೆಚ್ಚದಲ್ಲಿ, ಹುಬ್ಬಳ್ಳಿಯಲ್ಲಿ 22 ಕೋಟಿ ರೂ. ವೆಚ್ಚದಲ್ಲಿ ಹೊಸ ತಾರಾಲಯ ನಿರ್ಮಿಸಲಾಗುತ್ತಿದೆ

ನವೀಕೃತ ತಾರಾಲಯ ಇಂದಿನಿಂದ ಪ್ರದರ್ಶನ

ನವೀಕೃತ ತಾರಾಲಯ ಇಂದಿನಿಂದ ಪ್ರದರ್ಶನ

ಬೆಳಗ್ಗೆ 11.30 ಮತ್ತು ಮಧ್ಯಾಹ್ನ 3.30ಕ್ಕೆ ಕನ್ನಡ ಪ್ರದರ್ಶನಗೊಳ್ಳಲಿದ್ದು, ಮಧ್ಯಾಹ್ನ 12.30 ಮತ್ತು ಸಂಜೆ 4.30ಕ್ಕೆ ಆಂಗ್ಲ ಪ್ರದರ್ಶನಗೊಳ್ಳಲಿದೆ. ಪ್ರತಿ ಸೋಮವಾರ ಮತ್ತು 2ನೇ ಮಂಗಳವಾರದಂದು ವಾರದ ರಜೆ ಇರುತ್ತದೆ. ವಯಸ್ಕರಿಗೆ 35 ಹಾಗೂ ಮಕ್ಕಳಿಗೆ 20 ರೂ. ಎಂಬಂತೆ ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ ಎಂದು ನೆಹರು ತಾರಾಲಯದ ನಿರ್ದೇಶಕಿ ಬಿ. ಎಸ್.ಶೈಲಜಾ ಹೇಳಿದರು.

English summary
The Jawaharlal Nehru Planetarium reopened here on Tuesday with a hybrid projector system. Karnataka Chief Minister Siddaramaiah inaugurated the renovated sky theatre. Space scientist U.R. Rao, Science & Technology Minister M.R. Seetharam and several students from schools and colleges from the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X