ಬೆಂಗಳೂರಿಗರೇ ಗಮನಿಸಿ, ಮುಂದಿನ ವಾರ ಪೆಟ್ರೋಲ್ ಸಿಗಲ್ಲ

Written By:
Subscribe to Oneindia Kannada

ಬೆಂಗಳೂರು, ಜೂನ್ 03 : ಮೂಲಸೌಕರ್ಯಕ್ಕೆ ಒತ್ತಾಯಿಸಿ ತೈಲ ಸಾಗಣೆ ಟ್ಯಾಂಕರ್​ ಚಾಲಕರು ಮತ್ತು ಕ್ಲೀನರ್​ಗಳು ಜೂನ್ 6 ರಂದ ಮೂರು ದಿನ ಕಾಲ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

ಒಂದು ವೇಳೆ ಪ್ರತಿಭಟನೆ ಆರಂಭವಾದರೆ ಮಹಾನಗರದಲ್ಲಿ ಪೆಟ್ರೋಲ್ ಗೆ ಹಾಹಾಕಾರ ಉಂಟಾಗಲಿದೆ. ಬೆಂಗಳೂರಿಗೆ ದಿನವೊಂದಕ್ಕೆ 700 ಟ್ಯಾಂಕರ್ ತೈಲ ಬೇಕಾಗುತ್ತದೆ.[ಸಿದ್ದರಾಮಯ್ಯ ಅವ್ರೇ, ಪೆಟ್ರೋಲ್ ಮೇಲೆ ವ್ಯಾಟ್ ಇಳಿಕೆ ಮಾಡ್ರಿ]

petrol

ದೇವನಗುಂದಿಯಿಂದ ಇಂಧನ ಸಾಗಾಣಿಕಾ ಕೇಂದ್ರದಲ್ಲಿನ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಬೆಂಗಳೂರು ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ (ಬಿಪಿಡಿಎ) ಜೂನ್ 6ರಿಂದ ಮುಷ್ಕರ ನಡೆಸಲು ನಿರ್ಧರಿಸಿದೆ.[ಲೀಟರ್ ಪೆಟ್ರೋಲ್‌ಗೆ ಎಷ್ಟು ಕೊಡ್ತಾ ಇದೀರಿ? ಈ ಲೆಕ್ಕ ನೋಡಿ]

ಟ್ಯಾಂಕರ್ ಚಾಲಕರು ತಮ್ಮ ವೇತನ ಹೆಚ್ಚಳ ಸೇರಿದಂತೆ ಹಲವು ಬೇಡಿಕೆ ಮುಂದಿಟ್ಟಿದ್ದಾರೆ. ಪೆಟ್ರೋಲಿಯಂ ಕಂಪನಿಗಳು ಪ್ರತಿ ಕಿಲೋಮೀಟರ್ ಟ್ಯಾಂಕರ್ ಬಾಡಿಗೆ ದರವನ್ನು ಹೆಚ್ಚಳ ಮಾಡಬೇಕು ಎಂಬ ಬೇಡಿಕೆಯನ್ನು ಇಟ್ಟಿದ್ದಾರೆ. ಈ ಹಿಂದೆ ಮೂರು ಸಾರಿ ಚಾಲಕರು ಪ್ರತಿಭಟನೆ ನಡೆಸಿ ಭರವಸೆ ಹಿನ್ನೆಲೆಯಲ್ಲಿ ಹಿಂದಕ್ಕೆ ಪಡೆದುಕೊಂಡಿದ್ದರು.[ಇರಾನ್ ಜತೆ ಮೋದಿ ಕರಾರು, ಈಗ ಪಾಕ್ ಮಾಡಲಿ ತಕರಾರು?]

ದೇವನಗುಂದಿಯಿಂದಲೇ ಬೆಂಗಳೂರು, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಪೆಟ್ರೋಲ್-ಡೀಸೆಲ್ ಪೂರೈಕೆಯಾಗುತ್ತಿದೆ. ಹೊಸಕೋಟೆಯಿಂದ ದೇವನಗುಂದಿಗೆ ಸಾಗುವ ರಸ್ತೆಗಳು ಚೆನ್ನಾಗಿಲ್ಲ. ಹೊಸ ರಸ್ತೆ ನಿರ್ಮಿಸಿದರೂ ಕಿತ್ತು ಹೋಗುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಬೇಕು. ರಾಜ್ಯ ಸರ್ಕಾರ ಅನುದಾನ ನೀಡದಿದ್ದರೆ ಕಂಪನಿಗಳೇ ನಿರ್ಮಿಸಬೇಕು ಎಂಬ ಬೇಡಿಕೆಯನ್ನು ಮುಂದೆ ಇಟ್ಟಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Demanding better wages and basic amenities at the Devangonthi Terminal, members of the Karnataka Petroleum Transports Drivers' and Cleaners' Association have decided to go on strike from June 6. Bengaluru requires every day 600-700 loads of petrol.
Please Wait while comments are loading...