ಮಸೀದಿ ಮೈದಾನದ ಮೇಲೆ ಮೆಟ್ರೋ : ಸ್ಥಳೀಯರ ವಿರೋಧ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 11: ಬೆಂಗಳೂರಿನ ಹೆಮ್ಮೆಯ ನಮ್ಮ ಮೆಟ್ರೋ ಮೊದಲ ಹಂತ ಮುಗಿದು, ಪ್ರತಿ ದಿನ ಮೂರೂವರೆ ಲಕ್ಷ ಜನ ಅದರ ಉಪಯೋಗ ಪಡೆಯುತ್ತಿದ್ದಾರೆ. ಬಿಎಂಆರ್ ಸಿಎಲ್ ಇದೀಗ ನಮ್ಮ ಮೆಟ್ರೋ ಎರಡನೇ ಹಂತದಲ್ಲಿ ಗೊಟ್ಟಿಗೆರೆಯಿಂದ ನಾಗಾರವರದವರೆಗಿನ 21.41 ಕಿ.ಮೀ.ಮಾರ್ಗದಲ್ಲಿ ಮೆಟ್ರೋ ರೈಲು ಮಾರ್ಗ ನಿರ್ಮಿಸುವ ಕೆಲಸಕ್ಕೆ ಕೈಹಾಕಿದೆ.

ಆರ್ಥಿಕ ಸಂಕಷ್ಟ: ಕೆ.ಆರ್. ಪುರಂ- ಸಿಲ್ಕ್ ಜಂಕ್ಷನ್ ಮತ್ತಷ್ಟು ವಿಳಂಬ

ಆದರೆ ಒಳ್ಳೆ ಕೆಲಸಕ್ಕೆ ನೂರೆಂಟು ವಿಘ್ನ ಎಂಬಂತೆ, ಇಲ್ಲಿನ ಕಂಟೋನ್ಮೆಂಟ್ ರೈಲ್ವೇ ಸ್ಟೇಷನ್ ರಸ್ತೆಯಲ್ಲಿರುವ ಬ್ಯಾಂಬೂ ಬಜಾರ್ ನ ಮದಿನಾ ಮಸೀದಿ ಮೈದಾನ ಬಳಿಯಲ್ಲಿ ಮೆಟ್ರೋ ಸ್ಟೇಷನ್ ನಿರ್ಮಾಣಕ್ಕೆ ಇಲ್ಲಿನ ಜನರೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ!

ಮೆಟ್ರೋ ಸ್ಟೇಷನ್ ಗಳಿರುವ ಕಡೆಗಳಲ್ಲಿ ಮನೆ-ಸೈಟುಗಳ ರೇಟು ಗಗನಕ್ಕೇರುತ್ತಿರುವ ಹೊತ್ತಲ್ಲಿ, ಬೆಂಗಳೂರಿನಂಥ ಟ್ರಾಫಿಕ್ ನಗರಿಗಳಿಗೆ ಮೆಟ್ರೋಕ್ಕಿಂತ ಉತ್ತಮ ಸಾರ್ವಜನಿಕ ಸಾರಿಗೆ ಇಲ್ಲ ಎಂದು ಜನರೆಲ್ಲ ಮೆಚ್ಚುತ್ತಿರುವ ಸಮಯದಲ್ಲಿ

ಇಲ್ಲಿ ಮೆಟ್ರೋ ಸ್ಟೇಷನ್ ಬೇಕೇ ಬೇಡವೇ ಎಂಬುದನ್ನು ನಿರ್ಧರಿಸಬೇಕಾದವರು ನಾವು, ನಮ್ಮನ್ನು ಒಂದೂ ಮಾತು ಕೇಳದೇ ಇಲ್ಲಿ ಮೆಟ್ರೋ ನಿಲ್ದಾಣ ನಿರ್ಮಿಸುವುದಕ್ಕೆ ನೀವು ಹೇಗೆ ನಿರ್ಧಾರ ಮಾಡಿದಿರಿ? ಎಂದು ಸ್ಥಳೀಯರು ಬಿಎಂಆರ್ ಸಿಎಲ್ ಅಧಿಕಾರಿಗಳನ್ನು ಪ್ರಶ್ನಿಸುತ್ತಿದ್ದಾರೆ. ಇದರಿಂದಾಗಿ ಮೆಟ್ರೋ ಸ್ಟೇಷನ್ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
After huge success of Namma Metro Phase 1, BMRCL is ready for 2nd phase. But The construction of the Cantonment Metro Station for the Phase II of the Namma Metro on a public ground is facing stiff opposition from residents of the area. Locals at Bamboo Bazaar are opposing the construction of a metro station on the Madina Masjid grounds.
Please Wait while comments are loading...