ಅತಿ ಹೆಚ್ಚು ಸಂಬಳ ನೀಡುವ ನಗರ ಬೆಂಗಳೂರು: ಸಮೀಕ್ಷೆ

Posted By: Nayana
Subscribe to Oneindia Kannada

ಬೆಂಗಳೂರು, ಏಪ್ರಿಲ್ 17: ಬೆಂಗಳೂರಿಗೆ ಯಾಕೆ ಅಷ್ಟೊಂದು ಜನರು ವಲಸೆ ಬರುತ್ತಿದ್ದಾರೆ ಎನ್ನುವ ಕುರಿತು ಸಾಕಷ್ಟು ಸಮೀಕ್ಷೆಗಳು ನಡೆಯುತ್ತಲೇ ಇದೆ. ವಿದ್ಯಾಭ್ಯಾಸ, ಕೆಲಸಕ್ಕಾಗಿ ಬರುವವರ ಸಂಖ್ಯೆ ಹೆಚ್ಚು ಆದರೆ ದೇಶದಲ್ಲೇ ಬೆಂಗಳೂರು ಅತಿ ಹೆಚ್ಚು ಸಂಬಲ ನೀಡುವ ನಗರ ಎನ್ನುವ ಮಾಹಿತಿ ಲಭ್ಯವಾಗಿದೆ.

ಪರಪ್ಪನ ಅಗ್ರಹಾರ ಕೈದಿಗಳಿಗೆ ಒಂದೂವರೆ ವರ್ಷದ ಬಳಿಕ ಸಂಬಳ

ರಾಂಡ್ ಸ್ಟಾಡ್ ಇಂಡಿಯಾ ಎಂಬ ಸಂಶೋಧನಾ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ನೌಕರ ವರ್ಗಕ್ಕೆ ಬೆಂಗಳೂರು ನಮ್ಮ ದೇಶದಲ್ಲೇ ಅತಿ ಹೆಚ್ಚು ವೇತನ ಪಾವತಿಸುವ ನಗರ ಎಂಬ ಸಂಗತಿ ಬೆಳಕಿಗೆ ಬಂದಿದೆ. ಬೆಂಗಳೂರಿನ ಕಂಪನಿಗಳು ಸರಾಸರಿ ಒಬ್ಬ ನೌಕರನಿಗೆ ವರ್ಷವೊಂದಕ್ಕೆ 10.8 ಲಕ್ಷ ರೂ. ವೇತನ ಪಾವತಿಸುತ್ತವೆ.

ಏಪ್ರಿಲ್‌ನಿಂದ ಸರ್ಕಾರಿ ನೌಕರರ ವೇತನ ಹೆಚ್ಚಳ:ಸಿಎಂ

ಅಂದರೆ, ತಿಂಗಳಿಗೆ 90 ಸಾವಿರ ರೂ. ಸಂಬಳ ನೀಡುತ್ತವೆ. ಇದರಲ್ಲೂ ಅತಿ ಹೆಚ್ಚು ಸಂಬಳವಿರುವುದು ಫಾರ್ಮಾ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಸಂಸ್ಥೆಗಳಲ್ಲಿ ಎಂದೂ ಸಮೀಕ್ಷೆ ಹೇಳಿದೆ.

Bengaluru pays good salary in various fields!

ಬೆಂಗಳೂರಿನ ನಂತರ ದೇಶದಲ್ಲಿ ಅತಿ ಹೆಚ್ಚು ಸಂಬಂ ನೀಡುವ ನಗರಗಳ ಪಟ್ಟಿಯಲ್ಲಿ ಕ್ರಮವಾಗಿ ಪುಣೆ, ದೆಹಲಿ, ಮುಂಬೈ, ಚೆನ್ನೈ, ಹೈದರಾಬಾದ್ ಹಾಗೂ ಕೊಲ್ಕತ್ತ ಇವೆ. ಇನ್ನು, ಬೆಂಗಳೂರಷ್ಟೇ ಅಲ್ಲ, ದೇಶಾದ್ಯಂತ ಫಾರ್ಮಾ ಹಾಗೂ ಹೆಲ್ತ್ ಕೇರ್ ಕಂಪನಿಗಳು ಸರಾಸರಿ ಒಬ್ಬ ನೌಕರನಿಗೆ ವರ್ಷಕ್ಕೆ 9.6ಲಕ್ಷ ರೂ. ಸಂಬಳ ನೀಡುವುದರೊಂದಿಗೆ ಅತಿ ಹೆಚ್ಚು ಸಂಬಳ ನೀಡುವ ಕಂಪನಿಗಳು ಎನ್ನಿಸಿಕೊಂಡಿವೆ.

ಪ್ರೊಫೆಷನಲ್ ಸೇವೆ ಒದಗಿಸುವ ಕಂಪನಿಗಳು ಎರಡನೇ ಅತಿ ಹೆಚ್ಚು ಸಂಬಳ ಪಾವತಿಸುತ್ತವೆ. ಅಲ್ಲಿ ವರ್ಷಕ್ಕೆ 9.4 ಲಕ್ಷ ರೂ. ಸಂಬಳವಿದೆ. ಮೂರನೇ ಸ್ಥಾನದಲ್ಲಿ ಎಫ್ ಎಂಸಿಜಿ ವರ್ಷಕ್ಕೆ 9.2 ಲಕ್ಷ ಸಂಬಳ ನೀಡುತ್ತಿದೆ. ವೈದ್ಯರು-18.4, ವಾಸ್ತುಶಿಲ್ಪ ತಜ್ಞರು 15.1, ಎಂಜಿನಿಯರ್ ಗಳು 14.8ರಂತೆ ಅತಿ ಹೆಚ್ಚು ಸಂಬಳವನ್ನು ಪಡೆಯುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Employees who were working in Bangalore with pharma, health, IT and various industries getting better salary than other cities or states in the country. Randstod India, a research organisation has also said in its survey that Bengaluru employees getting salary of ₹10.8 lakhs average per annum.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ