ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಕ್ಕಿನ ಮೇಲ್ಸೇತುವೆ ವಿರುದ್ಧದ ಪ್ರತಿಭಟನೆ ಭರ್ಜರಿ ಯಶಸ್ವಿ

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಅಕ್ಟೋಬರ್ 16: ಸ್ಟೀಲ್ ಫ್ಲೈ ಓವರ್ ವಿರುದ್ಧದ ಚಾಲುಕ್ಯ ವೃತ್ತ, ಕಾವೇರಿ ವೃತ್ತ, ಮೇಕ್ರಿ ವೃತ್ತ ಹಾಗೂ ಹೆಬ್ಬಾಳದಲ್ಲಿ ನಡೆದ ಪ್ರತಿಭಟನೆ, ಮಾನವ ಸರಪಳಿ #SteelFlyoverBeda ಅಭಿಯಾನ ಸಂಪೂರ್ಣವಾಗಿ ಯಶಸ್ವಿಗೊಂಡಿದೆ. ಸುಮಾರು 3,000ಕ್ಕೂ ಅಧಿಕ ಬೆಂಗಳೂರಿಗರು ರಸ್ತೆಗಿಳಿದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಸ್ಟೀಲ್ ಫ್ಲೈ ಓವರ್ ನಿರ್ಮಾಣವನ್ನು ವಿರೋಧಿಸಿ ಜನಸಾಮಾನ್ಯರು ಹಮ್ಮಿಕೊಂಡಿದ್ದ ಈ ಅಭಿಯಾನಕ್ಕೆ ಸುರೇಶ್ ಕುಮಾರ್ ಸೇರಿದಂತೆ ಬಿಜೆಪಿಯ ಕೆಲ ಮುಖಂಡರು, ಆಮ್ ಆದ್ಮಿ ಪಾರ್ಟಿ- ಬೆಂಗಳೂರಿನ ಕಾರ್ಯಕರ್ತರು ಕೂಡ ಬೆಂಬಲ ವ್ಯಕ್ತಪಡಿಸಿದರು.[ಏನಿದು ಉಕ್ಕಿನ ಮೇಲ್ಸೇತುವೆ ಯೋಜನೆ? ಏಕೆ ವಿರೋಧ?]

ಬೆಳಗ್ಗೆ 8 ಗಂಟೆಯಿಂದಲೇ ಚಾಲುಕ್ಯ ವೃತ್ತದಿಂದ ಮಾನವ ಸರಪಳಿ ಆರಂಭವಾಗಿತ್ತು. ಮಾನವ ಸರಪಳಿ ನಿರ್ಮಿಸಿ ಕೈಯಲ್ಲಿ ಪ್ಲೇಕಾರ್ಡ್ ಹಿಡಿದುಕೊಂಡು 'ನೋ' ಎಂದು ಸರ್ಕಾರದ ಉದ್ದೇಶಿತ ಯೋಜನೆಗೆ ಧಿಕ್ಕಾರ ಕೂಗಲಾಯಿತು.[ಉಕ್ಕಿನ ಮೇಲ್ಸೇತುವೆ ಪರ್ಯಾಯವಾಗಿ ಏನ್ಮಾಡ್ಬಹುದು?]

Bengaluru opposes steel flyover- Massive human chain formed
ರಾಜ್ಯ ಸರ್ಕಾರ ನಿರ್ಮಿಸಲು ಹೊರಟಿರುವ ಈ ಉಕ್ಕಿನ ಸೇತುವೆ ನಿರ್ಮಾಣವೇ ಅವೈಜ್ಞಾನಿಕವಾಗಿದೆ. ಪರಿಸರ ಹಾಗೂ ತೆರಿಗೆ ಹಣ ಲೂಟಿಯಾಗಲಿದೆ ಎಂದು ಹತ್ತು ಹಲವು ಜನಪರ್ ಸಂಘಟನೆಗಳು ವಿರೋಧಿಸಿ ಪ್ರತಿಭಟನೆಯಲ್ಲಿ ತೊಡಗಿಕೊಂಡಿದ್ದು ಕಂಡು ಬಂದಿತು.ಒಟ್ಟಾರೆ, ಪ್ರತಿಭಟನೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು.[ಫ್ಲೈ ಓವರ್ ವಿರುದ್ದದ ಪ್ರತಿಭಟನೆಗೆ ಆಮ್ ಆದ್ಮಿ ಪಾರ್ಟಿ ಬೆಂಬಲ]

10ಕ್ಕೂ ಹೆಚ್ಚು ಸಂಘನೆಗಳು, ಸ್ವಯಂ ಸೇವಾ ಸಂಸ್ಥೆಗಳು, ಟೆಕ್ಕಿಗಳು ಭಾಗವಹಿಸಿ ಉಕ್ಕಿನ ಸೇತುವೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದರು. ಚಾಲುಕ್ಯ ವೃತ್ತದಿಂದ ಗುಟ್ಟಹಳ್ಳಿ ವರೆಗೆ ಮಾನವ ಸರಪಳಿ ನಿರ್ಮಿಸಿ ಘೋಷಣೆಗಳನ್ನು ಕೂಗಿ, ಶಾಂತಿಯುತವಾಗಿ ಪ್ರತಿಭಟಿಸಿದರು.

ಸಂಸದ ಪಿ.ಸಿ.ಮೋಹನ್, ಶಾಸಕಾಂಗದ ಸುರೇಶ್ ಕುಮಾರ್, ರಾಜ್ಯ ಸಭಾ ಸದಸ್ಯ ರಾಜೀವ್ ಚಂದ್ರಶೇಖರ್, ಮಾಜಿ ಲೋಕಾಯುಕ್ತ ಸಂತೋಷ ಹೆಗ್ಡೆ, ನಿರ್ದೇಶಕ ಪವನ್ ಕುಮಾರ್, ನಟಿ ಸಂಯುಕ್ತ ಹೊರನಾಡ್, ಸುಧಾ ಬೆಳವಾಡಿ, ಸಾಮಾಜಿಕ ಕಾರ್ಯಕರ್ತ ಅಶ್ವಿನ್ ಮಹೇಶ್ ಮತ್ತಿತರರು ಭಾಗವಸಿದ್ದರು.

English summary
The human chain protest against the proposed steel flyover in Bengaluru has received massive support. At least 3,000 people came out on the streets between the Chalukya circle and Mekhri circle to protest against the construction of the flyover.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X