• search

ಶಿವಣ್ಣನ ಮನವಿಗೆ ಸರ್ಕಾರದ ಸ್ಪಂದನೆ, ಮಾನ್ಯತಾ ಬಳಿ ಟ್ರಾಫಿಕ್ ಒನ್ವೇ!

By Mahesh
Subscribe to Oneindia Kannada
For Quick Alerts
ALLOW NOTIFICATIONS
For Daily Alerts
    ಶಿವಣ್ಣನ ಮನವಿಗೆ ಸರ್ಕಾರದ ಸ್ಪಂದನೆ | Oneindia Kannada

    ಬೆಂಗಳೂರು, ನವೆಂಬರ್ 14: ಹೆಬ್ಬಾಳ ಸಮೀಪದ ಮಾನ್ಯತಾ ಟೆಕ್ ಪಾರ್ಕ್ ಬಳಿ ಸಂಚಾರ ದಟ್ಟಣೆಗೆ ತಾತ್ಕಾಲಿಕ ಪರಿಹಾರ ಸಿಕ್ಕಿದೆ. ನಟ ಶಿವರಾಜ್ ಕುಮಾರ್ ಅವರು ಮಾಡಿಕೊಂಡ ಮನವಿಗೆ ತಕ್ಷಣವೇ ಸರ್ಕಾರ ಸ್ಪಂದಿಸಿದೆ.

    ಮಾನ್ಯತಾ ಟೆಕ್ ಪಾರ್ಕ್ ಟ್ರಾಫಿಕ್ ಗೆ ಹೈರಾಣಾದ ಶಿವಣ್ಣ ಮಾಡಿದ್ದೇನು?

    ಮೂರು ದಿನಗಳ ಹಿಂದೆ ನಟ ಶಿವರಾಜ್ ಕುಮಾರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರನ್ನು ಭೇಟಿ ಮಾಡಿ, ಮಾನ್ಯತಾ ಟೆಕ್ ಪಾರ್ಕ್ ಸಮೀಪದ ನಿವಾಸಗಳ ಅಸೋಸಿಯೇಷನ್ ಪರವಾಗಿ ಟ್ರಾಫಿಕ್ ಸಮಸ್ಯೆ ಬಗ್ಗೆ ವಿವರಿಸಿದ್ದರು.

    ಇದಾದ ಬಳಿಕ ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರು ಈ ಪ್ರದೇಶಕ್ಕೆ ಭೇಟಿ ನೀಡಿ, ಇಲ್ಲಿನ ಸಮಸ್ಯೆಯನ್ನು ಪರಿಶೀಲಿಸಿದ್ದರು. ಈಗ ನಗರ ಟ್ರಾಫಿಕ್ ಪೊಲೀಸರು, ಈ ಭಾಗದಲ್ಲಿಸಂಜೆ 5.30 ರಿಂದ 8.30ರ ಅವಧಿಯಲ್ಲಿ ಏಕಮುಖ ಸಂಚಾರವನ್ನು ನಿಗದಿ ಪಡಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಟಿ ಸುನೀಲ್ ಕುಮಾರ್ ಹೇಳಿದರು.

    ಭರವಸೆ ನೀಡಿದ್ದ ಗೃಹಸಚಿವ ರಾಮಲಿಂಗಾ ರೆಡ್ಡಿ

    ಭರವಸೆ ನೀಡಿದ್ದ ಗೃಹಸಚಿವ ರಾಮಲಿಂಗಾ ರೆಡ್ಡಿ

    ಶಿವರಾಜ್ ಕುಮಾರ್ ದಂಪತಿ ಹಾಗೂ ಸ್ಥಳೀಯ ನಿವಾಸಿಗಳ ಮನವಿಗೆ ಸ್ಪಂದಿಸಿದ್ದ ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರು ಎರಡು ದಿನಗಳ ಹಿಂದೆ ಈ ಭಾಗದಲ್ಲಿ ಪರಿಶೀಲನೆ ನಡೆಸಿದ್ದರು. ನಂತರ ನಗರಾಭಿವೃದ್ಧಿ ಸಚಿವ ಕೆಜೆ ಜಾರ್ಜ್ ಮತ್ತು ಕೃಷ್ಣ ಬೈರೇಗೌಡ ಅವರೊಂದಿಗೆ ಚರ್ಚಿಸಿದ್ದರು.
    ''ರಸ್ತೆಯ ಅಗಲಿಕರಣ ಮಾಡಬಹುದು. ಬ್ರಿಡ್ಜ್ ನಿರ್ಮಾಣ ಮಾಡಿದ್ರೆ ಅನುಕೂಲವಾಗಬಹುದು. ಸಂಜೆ ವೇಳೆ ಒನ್ ವೇ ಮಾಡಿದ್ರೆ ಸಹಕಾರಿ ಆಗಬಹುದು ಎಂಬ ಸಲಹೆಯನ್ನ ಅಧಿಕಾರಿಗಳು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

    ಶಿವರಾಜ್ ಕುಮಾರ್ ಮಾತನಾಡಿ

    ಶಿವರಾಜ್ ಕುಮಾರ್ ಮಾತನಾಡಿ

    ಶಿವರಾಜ್ ಕುಮಾರ್ ಮಾತನಾಡಿ ''ಇದು ನಮ್ಮ ವೈಯಕ್ತಿಕ ವಿಚಾರವಲ್ಲ. ಯಾರಿಗೂ ತೊಂದರೆಯಾಗದಂತೆ ಎಲ್ಲರೂ ಆರಾಮಾಗಿ ಇರಬೇಕು ಎನ್ನುವುದು ನಮ್ಮ ದೃಷ್ಟಿ. ಮಾನ್ಯತಾ ಟೆಕ್ ಪಾರ್ಕ್ ವಿರುದ್ಧ ಯಾವುದು ಆರೋಪ ಮಾಡ್ತಿಲ್ಲ. ಟೆಕ್ ಪಾರ್ಕಿನಿಂದ ಬರುವ ವಾಹನಗಳು ಇಲ್ಲಿ ಕೆಲವು ಗಂಟೆಗಳ ಕಾಲ ಸಂಚರಿಸುತ್ತವೆ. ಸಂಚಾರ ದಟ್ಟಣೆಯಿಂದ ಜನರಿಗೆ ಸಮಸ್ಯೆಯಾಗಬಾರದು ಎಂಬ ಉದ್ದೇಶ ಅಷ್ಟೇ'' ಎಂದು ಪ್ರತಿಕ್ರಿಯಿಸಿದ್ದರು.

    ಈ ಭಾಗದಲ್ಲಿ ಟ್ರಾಫಿಕ್ ಸಮಸ್ಯೆ ಬಗ್ಗೆ

    ಈ ಭಾಗದಲ್ಲಿ ಟ್ರಾಫಿಕ್ ಸಮಸ್ಯೆ ಬಗ್ಗೆ

    ಈ ಭಾಗದಲ್ಲಿ ಟ್ರಾಫಿಕ್ ಸಮಸ್ಯೆ ಬಗ್ಗೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಟಿ ಸುನೀಲ್ ಕುಮಾರ್, ಮಾನ್ಯತಾ ಟೆಕ್ ಪಾರ್ಕಿನಲ್ಲಿ ಸುಮಾರು 53 ಕಂಪನಿಗಳಿದ್ದು, ಸಾವಿರಾರು ಉದ್ಯೋಗಿಗಳು ದಿನನಿತ್ಯ ಇಲ್ಲಿ ಸಂಚರಿಸುತ್ತಾರೆ. 19,787 ದ್ವಿಚಕ್ರ ವಾಹನಗಳು,9,387 ಕಾರುಗಳು, 4,499 ಕ್ಯಾಬ್ಸ್, 303 ಟೆಂಪೋ ಟ್ರಾವೆಲ್ಲರ್ಸ್, 24 ಕಂಪನಿ ಬಸ್ ಗಳು, 95 ಬಿಎಂಟಿಸಿ ಸೇರಿದಂತೆ 5 ರಿಂದ 9 ಗಂಟೆ ಅವಧಿಯಲ್ಲಿ ಒಟ್ಟು 34,095ಕ್ಕೂ ಅಧಿಕ ವಾಹನಗಳು ಓಡಾಡುತ್ತವೆ ಎಂದರು.

    ಮಾನ್ಯತಾ ಟೆಕ್ ಪಾರ್ಕಿನ ಗೇಟ್

    ಮಾನ್ಯತಾ ಟೆಕ್ ಪಾರ್ಕಿನ ಗೇಟ್

    ಮಾನ್ಯತಾ ಟೆಕ್ ಪಾರ್ಕಿನ ಗೇಟ್ ನಂ. 1,2 ಹಾಗೂ 3ರಿಂದ ಹಾದು ಗೇಟ್ 05ರಿಂದ ಹೊರ ಹೋಗುತ್ತವೆ. ಗೇಟ್ 3 ಹಾಗೂ 05ರ ಭಾಗದಲ್ಲಿ ವಸತಿ ಸಮುಚ್ಚಯಗಳಿವೆ. ಪ್ರತಿನಿತ್ಯ ಸಂಚಾರ ದಟ್ಟಣೆಯಿಂದ ಸ್ಥಳೀಯರಿಗೆ ಭಾರಿ ತೊಂದರೆಯಾಗುತ್ತಿದೆ. ಗೇಟ್ 03 ಹಾಗೂ 05 ರ ಭಾಗದಲ್ಲಿ ಸಂಜೆ 5.30 ರಿಂದ 8.30ರ ಅವಧಿಯಲ್ಲಿ ಏಕಮುಖ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದ್ದು, ಇದು ತಾತ್ಕಾಲಿಕ ವ್ಯವಸ್ಥೆಯಾಗಿದೆ.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    Just three days after Kannada superstar Shivarajkumar met the Home Minister and complained about the traffic woes, city police have issued orders implementing one-way traffic in the locality

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more