'ದ್ರೌಪದಿ ಸಿರಿಮುಡಿ ಪರಿಕ್ರಮಣ' ವೀರಪ್ಪ ಮೊಯ್ಲಿ ವಿಚಾರ ಸಂಕಿರಣ

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಜನವರಿ, 13: ಬೆಂಗಳೂರು ನಾರ್ತ್ ಎಜುಕೇಷನ್ ಸೊಸೈಟಿ ಮತ್ತು ಬಸವೇಶ್ವರ ನಗರದ ಡೆವಲಪ್ ಮೆಂಟ್ ಫೋರಂ ಸಂಯುಕ್ತಾಶ್ರಯದಲ್ಲಿ ಜನವರಿ 16ರ ಶನಿವಾರ 'ವೀರಪ್ಪ ಮೊಯಿಲಿಯವರ ದ್ರೌಪದಿ ಸಿರಿಮುಡಿ ಪರಿಕ್ರಮಣ ನೆಲೆಗಳು' ಎಂಬ ವಿಷಯದ ಬಗ್ಗೆ ಒಂದು ದಿನದ ವಿಚಾರ ಸಂಕಿರಣವು ನಗರದ ಕುಮಾರಪಾರ್ಕ್ ಗಾಂಧಿ ಭವನದಲ್ಲಿ ನಡೆಯಲಿದೆ.

'ವೀರಪ್ಪ ಮೊಯಿಲಿಯವರ ಸಾಹಿತ್ಯದ ನೆಲೆಗಳು' ಎಂಬ ವಿಚಾರ ಸಂಕಿರಣವನ್ನು ಮೈಸೂರು ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಡಾ.ದೇ ಜವರೇಗೌಡ ಉದ್ಘಾಟಿಸುವರು. ಸಿನಿಮಾ ನಿರ್ದೇಶಕ ಡಾ.ನಾಗತಿಹಳ್ಳಿ ಚಂದ್ರಶೇಖರ ಉದ್ಘಾಟನಾ ಭಾಷಣ ಮಾಡಲಿದ್ದಾರೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪಮೊಯಿಲಿ ಉಪಸ್ಥಿತರಿರುವರು.[ವೀರಪ್ಪ ಮೊಯ್ಲಿ ಅವರಿಗೆ ಸರಸ್ವತಿ ಸಮ್ಮಾನ್ ಪುರಸ್ಕಾರ]

Veerappa moily

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಡಾ. ಮಲ್ಲೆಪುರಂ ಜಿ. ವೆಂಕಟೇಶ, ಡಾ. ಮೊಯಿಲಿಯವರೊಂದಿಗೆ ಸಾಹಿತ್ಯ ಸಂವಾದ ನಡೆಸಲಿದ್ದಾರೆ. ಡಾ.ಎ.ವಿ.ನಾವಡ, ಡಾ.ಎಚ್.ಎಲ್.ಪುಷ್ಪ, ಡಾ.ಗಣನಾಥಶೆಟ್ಟಿ ಯೆಕ್ಕಾರು, ಡಾ.ಕಬ್ಬಿನಾಲೆ ವಸಂತ ಭಾರಧ್ವಾಜ, ಡಾ.ಬಿ.ಆರ್.ಸತ್ಯನಾರಾಯಣ ಪ್ರಬಂಧ ಮಂಡಿಸಲಿದ್ದಾರೆ.[ಕರ್ನಾಟಕ ವಿವಿಯಲ್ಲಿ ಜ.22ರಿಂದ 'ಧಾರವಾಡ ಸಾಹಿತ್ಯ ಸಂಭ್ರಮ]

ಸಂಜೆ 4.30ಕ್ಕೆ ಸಮಾರೋಪ ಸಮಾರಂಭ ಜರುಗಲಿದ್ದು, ಅಧ್ಯಕ್ಷತೆಯನ್ನು ಹಿರಿಯ ವಿದ್ವಾಂಸರು ಮತ್ತು ಸಂಶೋಧಕರಾದ ಡಾ.ಹಂಪ ನಾಗರಾಜಯ್ಯ ವಹಿಸಲಿದ್ದಾರೆ. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಡಾ.ಪದ್ಮಾಶೇಖರ್ ಸಮಾರೋಪ ಭಾಷಣ ಮಾಡಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bengaluru North Education Society and Development forum organizes Veerappa moily seminar at Karnataka Gandhismaraka Nidhi, Gandhi Bhavana, Kumarakrupa road, Shivananda Circle, Bengaluru on Saturday, January 16th.
Please Wait while comments are loading...