ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೆಸರಘಟ್ಟದಲ್ಲಿ ಅನಾವರಣಗೊಂಡ ಮಕ್ಕಳ ಸುಪ್ತಪ್ರತಿಭೆ

|
Google Oneindia Kannada News

ಬೆಂಗಳೂರು, ಜನವರಿ 25: ಬೆಂಗಳೂರಿನ ಹೆಸರಘಟ್ಟ ರಸ್ತೆ ಸಿಡೇದಹಳ್ಳಿಯ ಇತ್ತೀಚೆಗೆ ನಿಸರ್ಗ ವಿದ್ಯಾನಿಕೇತನದಲ್ಲಿ ಹಮ್ಮಿಕೊಂಡಿದ್ದ ನಿಸರ್ಗೋತ್ಸವ ಶಿಶಿರ-2018 ಮಕ್ಕಳ ಪ್ರತಿಭೆ ಅನಾವರಣಕ್ಕೆ ಸಾಕ್ಷಿಯಾಗುವುದರೊಂದಿಗೆ ಮಾನವತೆಯ ಸಾರ ಸಾರುವ ವೇದಿಕೆಯಾಯಿತು. ಚಿಣ್ಣರಿಂದ ಮೂಡಿಬಂದ ರೂಪಕ, ದೇಶಭಕ್ತಿ ಗೀತೆ-ಗಾಯನ, ಆಧುನಿಕ ಸಮಾಜದ ಸಮಸ್ಯೆ ಪ್ರತಿಬಿಂಬಿಸುವ ನಾಟಕ, ನೃತ್ಯ ರೂಪಕ, ಮೂಕಾಭಿನಯ, ಭಜನೆ, ವಚನಗಳು ಇತಿಹಾಸವನ್ನು ಮತ್ತೆ ನೆನಪಿಸುವುದೊಂದಿಗೆ ಉದಾತ್ತ ಧ್ಯೇಯಗಳನ್ನು ಕಣ್ಣ ಮುಂದೆ ತಂದು ನಿಲ್ಲಿಸಿದವು.

ಕರುನಾಳು ಬಾ ಬೆಳಕೆ.... ಸ್ವಾಗತ ಗೀತೆಯೊಂದಿಗೆ ಆರಂಭಗೊಂಡು, ಹಾರುತಿರಲಿ-ನಲಿಯುತಿರಲಿ....., ಉಪ್ಪು ನನಗೆ ಸಿಹಿನೀರು ನಿಮಗಿರಲಿ..., ಎಲ್ಲರೂ ನಮ್ಮವರೇ..., ಸಂಸಾರದಲ್ಲಿ ರಾಜಕೀಯ.... ಏನೆಂದು ನಾ ಹೇಳಲಿ..., ಪುನರಪಿ ಚಿಗುರಲಿ..., ಬನ್ನಿ ಮುಂದಕ್ಕೆ ಬನ್ನಿ.. ನೃತ್ಯ ರೂಪಕ ಎಲ್ಲರ ಮನಸೂರೆಗೊಂಡವು.

ಜ.28ರಂದು 3 ನಾಟಕಗಳ ರಸದೌತಣ ನೀಡಲಿದೆ 'ಲೋಕಚರಿತ'ಜ.28ರಂದು 3 ನಾಟಕಗಳ ರಸದೌತಣ ನೀಡಲಿದೆ 'ಲೋಕಚರಿತ'

ಮತ್ತೆ, ಭಗವಂತ ಕೈ ಕೊಟ್ಟ..., ತಂದೆಯಾ... ತಾಯಿಯಾ..., ಹಳ್ಳಿಯಾದರೇನು ಶಿವ.!? ಒಳಿತು ಮಾಡು ಮನುಷ್ಯ ...ಈ ಗೀತೆಗಳಿಂತೂ ಮಕ್ಕಳು ಮನೋಜ್ಞವಾಗಿ ಹೆಜ್ಜೆ ಹಾಕಿ, ಸಮಾಜ ಮತ್ತು ಮಾನವೀಯತೆ' ಸಾರ ಸಾರಿದರು. ಜಾತಿ, ಧರ್ಮ ಸಂಕೋಲೆಯಿಂದ ದೂರವಾಗಿ ಸ್ವಚ್ಛಂದ ಸಮಾಜ ಕಟ್ಟೋಣ ಬನ್ನಿ ಎಂಬ ಸಂದೇಶ ಮೊಳಗಿಸಿದರು.

Bengaluru: Nisargptsava Shishira event shows children's talent

ಇಂದಿನ ಮಕ್ಕಳಿಗೆ ಸಂಸ್ಕಾರ ಶಿಕ್ಷಣ ಅಗತ್ಯ
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ, ವಿಶ್ರಾಂತ ಕುಲಪತಿ, ಸಾಹಿತಿ ಡಾ. ಮಲ್ಲೇಪುರಂ ಜಿ.ವೆಂಕಟೇಶ್, ಇಂದಿನ ದಿನಮಾನಗಳಲ್ಲಿ ಮಾನವೀಯ ಮೌಲ್ಯಗಳು ಕಣ್ಮರೆಯಾಗುತ್ತಿವೆ. ಹಣ-ಅಂತಸ್ತು-ಅಧಿಕಾರ ಮೇಲಾಗುತ್ತಿದೆ. ಮಾನವೀಯತೆ ದೂರವಾಗುತ್ತಿದೆ ಎಂದು ಅವರು ತೀವ್ರ ಆತಂಕ ವ್ಯಕ್ತಪಡಿಸಿದರು.

ಇಂದಿನ ಮಕ್ಕಳಿಗೆ ಸಂಸ್ಕಾರ ಶಿಕ್ಷಣ ಅಗತ್ಯ ಎಂದ ಅವರು, ಮೊಬೈಲ್, ಕಂಪ್ಯೂಟರ್ ನಿಂದಾಗಿ ಮಕ್ಕಳು ಹೆತ್ತವರನ್ನೇ , ಮರೆಯುವ ಸ್ಥಿತಿ ಬಂದೊಗಿದೆ. ಮಕ್ಕಳು ಪ್ರಮಾಣಪತ್ರಕ್ಕಾಗಿ ಶಿಕ್ಷಣ ಪಡೆಯುತ್ತಿದ್ದಾರೆಯೇ ವಿನಃ ಸಂಸ್ಕಾರ ಶಿಕ್ಷಣ ಪಡೆಯುತ್ತಿಲ್ಲ. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕ ಶಿಕ್ಷಣ ಬೇಕಿದೆ ಎಂದು ಹೇಳಿದರು.

Bengaluru: Nisargptsava Shishira event shows children's talent

ವಿಚಾರವಾದಿ ಬಸವರಾಜ್, ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆ ಬೆಳೆಸಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಗ್ರೀನ್ ವ್ಯಾಲಿ ಫೌಂಡೇಶನ್ ನಿರ್ದೇಶಕ ಶಿವಕುಮಾರ್ ಪಾಟೀಲ್, ಮಕ್ಕಳ ಜ್ಞಾನ ವಿಕಸನಕ್ಕೆ ಪೂರಕ ವಾತಾವರಣ ನಿರ್ಮಿಸುವ ಜವಾಬ್ದಾರಿ ಪೋಷಕರ ಮತ್ತು ಶಿಕ್ಷಕರ ಮೇಲಿದೆ ಎಂದು ಹೇಳಿದರು.

ಎನ್.ಎಂ.ಎಚ್. ಇನ್ ಸ್ಟ್ಯೂಟ್ ಪಬ್ಲಿಕ್ ಶಾಲೆಯ ಸಂಸ್ಥಾಪಕ ಸಿಡೇದಹಳ್ಳಿಯ ಅಶ್ವತ್ತಪ್ಪ ಚಿಂತಕ ಮತ್ತು ನಿಸರ್ಗ ವಿದ್ಯಾನಿಕೇತನ ಸಂಸ್ಥೆಯ ಸಂಸ್ಥಾಪಕ ಉದಯರತ್ನಕುಮಾರ್, ಆಡಳಿತ ಮಂಡಳಿ ನಿರ್ದೇಶಕ ಧನುಷ್ ಮೊದಲಾದ ಗಣ್ಯರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಕಳೆದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಪ್ರತಿಭಾವಂತ ಮಕ್ಕಳನ್ನು ಪುರಸ್ಕರಿಸಲಾಯಿತು.

English summary
An event named Nisorgotsava Shishira 2018 took place recently in Sidedahalli Nisarga Vidyanikethan school in Hesaraghatta, Bengaluru. The evnent creates opportunity to many children to show their talent
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X