ನಮ್ಮ ಮೆಟ್ರೋ ಟಿಕೆಟ್ ದರ ಜೂನ್ 19 ರಿಂದ ಹೆಚ್ಚಳ

Posted By:
Subscribe to Oneindia Kannada

ಬೆಂಗಳೂರು, ಜೂನ್ 19: ಬೆಂಗಳೂರು ನಮ್ಮ ಮೆಟ್ರೊ ಟಿಕೇಟ್ ದರ ಜೂನ್ 19 ರಿಂದ ಶೇ.15 ರಷ್ಟು ಹೆಚ್ಚಾಗಲಿದೆ. ಇನ್ನೇನು ಮೆಟ್ರೋ ಲೋಕಾರ್ಪಣೆಯಾಗುತ್ತಿದೆ ಎಂದು ಸಂತಸ ಪಡುತ್ತಿರುವವರಿಗೆ ಈ ಸುದ್ದಿ ಕೊಂಚ ಬೇಸರವನ್ನುಂಟುಮಾಡಿದೆ.

'ನಮ್ಮ ಮೆಟ್ರೋ' ಟೋಕನ್ ಮತ್ತು ಕಾರ್ಡ್ ಪಡೆಯುವುದು ಹೇಗೆ?

ಈಗಾಗಲೇ ಮೆಟ್ರೋ ಕಾಮಗಾರಿಗಾಗಿ ವೆಚ್ಚ ಮಾಡಿದ ಹಣವನ್ನು ಭರಿಸಿಕೊಳ್ಳುವುದಕ್ಕೆ ಸರ್ಕಾರಕ್ಕೆ ಇದಲ್ಲದೆ ಬೇರೆ ದಾರಿ ಇಲ್ಲ. ಅದೂ ಅಲ್ಲದೆ, 2011 ರಂದು ಮೊದಲ ಬಾರಿಗೆ, ಮೈಸೂರು ರಸ್ತೆ-ಬೈಯಪ್ಪನಹಳ್ಳಿ 18 ಕಿ.ಮೀ. ಉದ್ದರ ಮೆಟ್ರೋ ಮಾರ್ಗದಲ್ಲಿ ಸಂಚಾರ ಆರಂಭವಾದಾಗಿನಿಂದ ಟಿಕೆಟ್ ದರವನ್ನು ಹೆಚ್ಚಿಸಿರಲಿಲ್ಲ.

Bengaluru Namma Metro ticket fair will be hiked from June 19th: BMRCL

ಆದರೆ ಇದೀಗ ಟಿಕೆಟ್ ದರ ಹೆಚ್ಚಿಸುವುದು ಸರ್ಕಾರಕ್ಕೆ ಅನಿವಾರ್ಯವಾಗಿದ್ದು, ಶೇ.15 ರಷ್ಟು ಟಿಕೆಟ್ ದರ ಹೆಚ್ಚಾಗಲಿದೆ ಎಂದು ಬಿಎಂಆರ್ ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟಿನಲ್ಲಿ ನಮ್ಮ ಮೆಟ್ರೋ ಲೋಕಾರ್ಪಣೆ ಹೆಚ್ಚು ಸಿಹಿ, ಸ್ವಲ್ಪ ಕಹಿ ಎಂಬುದಂತೂ ಸತ್ಯ!

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Bengaluru Namma Metro ticket fair will be hiked from June 19th. The fair will be hiked to 15%, Bengaluru Metro Rail Corporation Ltd (BMFRCL) officials said.
Please Wait while comments are loading...