ಆದಿಶೇಷನ ಕೃಪೆಗೆ ಪಾತ್ರರಾಗಲು ನಿಮಗೊಂದು ಅವಕಾಶ

Subscribe to Oneindia Kannada

ಬೆಂಗಳೂರು, ಆಗಸ್ಟ್, 04: ಹಬ್ಬಗಳ ಮಾಸ ಆರಂಭವಾಗುತ್ತಿದೆ. ನಾಡಿಗೆ ದೊಡ್ಡದು ಎಂದು ಕರೆಸಿಕೊಳ್ಳುವ ನಾಗರ ಪಂಚಮಿಯೂ ಆಗಸ್ಟ್ 7 ಭಾನುವಾರ ಎದುರಾಗಿದೆ.

ಆಗಸ್ಟ್ 7 ರಂದು ನಗರದ ವಿವಿಧೆಡೆ ನಾಗರ ಪಂಚಮಿ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಬೆಂಗಳೂರಿನ ಗಿರಿನಗರದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ (ಕಾರ್ಯಸಿದ್ಧಿ ವಿನಾಯಕ ದೇವಾಲಯ) ನಾಗರ ಪಂಚಮಿ ನಿಮಿತ್ತ ಆಶ್ಲೇಷಾ ಬಲಿ, ನಾಗ ತನು ತರ್ಪಣ, ನಾಗ ಸುಬ್ರಹ್ಮಣ್ಯಾರಾಧನೆ ನಡೆಯಲಿದೆ.[ನಾಗನನ್ನು ಪೂಜಿಸುವುದು ಮೂಢನಂಬಿಕೆಯಾಗಲು ಸಾಧ್ಯವೇ?]

Bengaluru: Nagara Panchami religious events on August 7, 2016

ದೃಷ್ಟಿ ದೋಷ, ಚರ್ಮ ರೋಗ, ಸಂತಾನ ಹೀನತೆ, ಕುಟುಂಬದ ಸಾಮರಸ್ಯ, ಸಂಪತ್ತು ವೃದ್ಧಿ ಮುಂತಾದ ಕಾರಣಗಳ ಪರಿಹಾರಕ್ಕೋಸ್ಕರ ಭಕ್ತರು ಆದಿಶೇಷನ ಕೃಪೆಗೆ ಪಾತ್ರರಾಗಬಹುದು.[ಸರ್ಪದೋಷ ಪರಿಹಾರ ಪೂಜೆ ಯಾವ ದೇವಾಲಯಗಳಲ್ಲಿ?]

Bengaluru: Nagara Panchami religious events on August 7, 2016

ಬೆಳಗ್ಗೆ 8 ಗಂಟೆಯಿಂದ ಧಾರ್ಮಿಕ ಕಾರ್ಯಕ್ರಮ ಆರಂಭವಾಗಲಿದೆ. ಭಕ್ತರು ನಾಗ ದೇವತೆಯ ಕೃಪೆಗೆ ಪಾತ್ರರಾಗಲು ನೋಂದಣಿ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಪ್ರಧಾನ ಆಚಾರ್ಯ ರಾಘವೇಂದ್ರ ಹೆಗಡೆ 90667 58881 ಮತ್ತು 9611478178ನ್ನು ಸಂಪರ್ಕಿಸಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bengaluru: Nagara Panchami a festival of the worship of snakes will celebrate on August 07. 2016. On the occasion of Nagara Panchami number of religious events will held at Bengaluru.
Please Wait while comments are loading...