ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾಗರ ಪಂಚಮಿ ನಿಮಿತ್ತ ಆಶ್ಲೇಷ ಬಲಿ, ನಾಗ ತನು ತರ್ಪಣ

|
Google Oneindia Kannada News

ಬೆಂಗಳೂರು, ಆಗಸ್ಟ್. 15: ಆಷಾಢ ಮಾಸ ಮುಗಿದಿದ್ದು ಶ್ರಾವಣ ಮಾಸ ಆರಂಭವಾಗಿದೆ. ನಾಡಿಗೆ ದೊಡ್ಡದು ಎಂದು ಕರೆಸಿಕೊಳ್ಳುವ ನಾಗರ ಪಂಚಮಿಯೂ ಎದುರಾಗಿದೆ.

ಆಗಸ್ಟ್ 19ರಂದು ನಗರದ ವಿವಿಧೆಡೆ ನಾಗರ ಪಂಚಮಿ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಹೊಸಕೆರೆಹಳ್ಳಿ ದತ್ತಾತ್ರೇಯನಗರದ ಅನಸೂಯ ಹಾಲ್ ನಲ್ಲಿ ನಾಗರ ಪಂಚಮಿ ನಿಮಿತ್ತ ಆಶ್ಲೇಷ ಬಲಿ, ನಾಗ ತನು ತರ್ಪಣ, ನಾಗ ಸುಬ್ರಹ್ಮಣ್ಯಾರಾಧನೆ ನಡೆಯಲಿದೆ.[ಮಂಜೇಶ್ವರದಲ್ಲಿ ಸಂಭ್ರಮದ ನಾಗರ ಪಂಚಮಿ ಆಚರಣೆ]

bengaluru

ದೃಷ್ಟಿ ದೋಷ, ಚರ್ಮ ರೋಗ, ಸಂತಾನ ಹೀನತೆ, ಕುಟುಂಬದ ಸಾಮರಸ್ಯ, ಸಂಪತ್ತು ವೃದ್ಧಿ ಮುಂತಾದ ಕಾರಣಗಳನ್ನು ಇಟ್ಟುಕೊಂಡು ಆದಿಶೇಷನ ಕೃಪೆಗೆ ಪಾತ್ರರಾಗಬಹುದು. ಹೊಸಕೆರೆಹಳ್ಳಿ ದತ್ತಪೀಠದ ಸ್ವಾಮೀಜಿ ಗಗನ ದತ್ತ ಗುರುಗಳಿಂದ ಆಶೀರ್ವಚನ ಕಾರ್ಯಕ್ರಮ ಇರುತ್ತದೆ.

ಬೆಳಗ್ಗೆ 8 ಗಂಟೆಯಿಂದ ಧಾರ್ಮಿಕ ಕಾರ್ಯಕ್ರಮ ಆರಂಭವಾಗಲಿದೆ. ಭಕ್ತರು ನಾಗನ ಕೃಪೆಗೆ ಪಾತ್ರರಾಗಲು ನೋಂದಣಿ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ರಾಘವೇಂದ್ರ ಹೆಗಡೆ 9986201603 ಮತ್ತು 9611478178ನ್ನು ಸಂಪರ್ಕಿಸಬಹುದು.

bengaluru
English summary
Bengaluru: Nagara Panchami a festival of the worship of snakes will celebrate on August 19. Regarding this festival number of religious events organized in the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X