ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು-ಮೈಸೂರು ರೈಲು ದರೋಡೆ: ಐವರ ಬಂಧನ

|
Google Oneindia Kannada News

ಬೆಂಗಳೂರು, ಡಿಸೆಂಬರ್ 26: ಬೆಂಗಳೂರು-ಮೈಸೂರು ರೈಲ್ವೆ ಮಾರ್ಗ ಚನ್ನಪಟ್ಟಣ ಸಮೀಪ ಇತ್ತೀಚೆಗೆ ನಡೆದ ರೈಲು ದರೋಡೆಗೆ ಸಂಬಂಧಿಸಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಈ ಮಾರ್ಗದಲ್ಲಿ ನಡೆದ ಎರಡು ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದರು, ಸ್ಥಳೀಯರ ಮೇಲೆ ಶಂಕೆ ವ್ಯಕ್ತಪಡಿಸಿದ್ದರು. ಇದೀಗ ಐವರನ್ನು ಬಂಧಿಸಿದ್ದಾರೆ.

ಬೆಂಗಳೂರು-ಮೈಸೂರು ರೈಲಿನಲ್ಲಿ ದರೋಡೆ, ರೈಲು ಹತ್ತಲು ಆತಂಕಬೆಂಗಳೂರು-ಮೈಸೂರು ರೈಲಿನಲ್ಲಿ ದರೋಡೆ, ರೈಲು ಹತ್ತಲು ಆತಂಕ

ಎಲ್ಲಾ ಆರೋಪಿಗಳು ಬೆಂಗಳೂರು ಮೂಲದವರು ಎಂದು ತಿಳಿದುಬಂದಿದ್ದು, ರಾತ್ರಿ ವೇಳೆ ಸಂಚರಿಸುವ ರೈಲುಗಳನ್ನೇ ಟಾರ್ಗೆಟ್ ಮಾಡುತ್ತಿದ್ದರು. ಚನ್ನಪಟ್ಟಣ ಅಥವಾ ರಾಮನಗರದಲ್ಲಿ ಪ್ರಯಾಣಿಕರ ಸೋಗಿನಲ್ಲಿ ರೈಲು ಹತ್ತಿದ ಅವರು, ಬಿಡದಿ-ಮೆಜೆಸ್ಟಿಕ್ ನಡುವೆ ಚಾಕು ತೋರಿಸಿ ದರೋಡೆ ಮಾಡುತ್ತಿದ್ದರು. ಚೈನ್ ಎಳೆದು ರೈಲು ನಿಲ್ಲಿಸಿ, ಕತ್ತಲಲ್ಲಿ ಪರಾರಿಯಾಗುತ್ತಿದ್ದರು.

Bengaluru-Mysuru train robbery: Five arrested

ಬೆಂಗಳೂರಿನ ನಾಯಂಡಹಳ್ಳಿ ಸಮೀಪದ ನಿವಾಸಿ ಕೀರ್ತಿರಾಜ್, ಚಂದ್ರಾಲೇಔಟ್‌ನ ಸ್ಕೈಲೈನ್ ಅಪಾರ್ಟ್‌ಮೆಂಟ್ ನಿವಾಸಿ ಸುನಿಲ್, ಬನಶಂಕರಿಯ ನಿವಾಸಿ ಗುಣ ಮಂಜ, ಭರತ್ ಬಂಧಿತ ಆರೋಪಿಗಳು.

ನಾಯಂಡಹಳ್ಳಿ ಪಕ್ಕದಲ್ಲೇ ಇರುವ ಸ್ಲಂನ ಮಕ್ಕಳನ್ನು ದರೋಡೆ ಅಪರಾಧ ಕೃತ್ಯಕ್ಕೆ ಬಳಸಿಕೊಳ್ಳಲು ಈ ಗ್ಯಾಂಗ್ ಪಳಗಿಸುತ್ತಿತ್ತು. ಮಾದಕ ವಸ್ತು ವ್ಯಸನಿಗಳಾಗಿರುವ ಆರೋಪಿಗಳು ಚನ್ನಪಟ್ಟಣ ಅಥವಾ ರಾಮನಗರದಲ್ಲಿ ರೈಲು ಹತ್ತಿಕೊಳ್ಳುತ್ತಿದ್ದರು. ಬಿಡದಿ ಸಮೀಪಿಸುತ್ತಿದ್ದಂತೆ ದರೋಡೆಗೆ ಇಳಿಯುತ್ತಿದ್ದರು. ಆರೋಪಿಗಳಿಂದ ಗ್ರಾಂ ತೂಕದ ಚಿನ್ನದ ಸರ, ಮೂರು ಉಂಗುರಗಳು, ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

English summary
Channapattana police arrested five accused in Train robbery. Last week two robbery incident reported in Bengaluru-Mysuru train.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X