ಡಿಸೆಂಬರ್ ನಿಂದ ಬೆಂಗಳೂರು-ಮೈಸೂರು 6 ಪಥ ರಸ್ತೆ ನಿರ್ಮಾಣ

Posted By:
Subscribe to Oneindia Kannada

ಬೆಂಗಳೂರು, ಸೆ. 23: ಬೆಂಗಳೂರು ಹಾಗೂ ಮೈಸೂರು 6 ಪಥ ರಸ್ತೆ ನಿರ್ಮಾಣಕ್ಕೆ ಶೀಘ್ರದಲ್ಲೇ ಟೆಂಡರ್ ಕರೆಯಲಾಗುವುದು ನವೆಂಬರ್ ಅಂತ್ಯಕೆಕ್ ಟೆಂಡರ್ ಪ್ರಕ್ರಿಯೆ ಮುಗಿಸಿ, ಡಿಸೆಂಬರ್ ತಿಂಗಳಿನಲ್ಲಿ ಕಾಮಗಾರಿ ಆರಂಭವಾಗಲಿವೆ ಎಂದು ಲೋಕೋಪಯೋಗಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ತಿಳಿಸಿದ್ದಾರೆ. ಈ ಕಾಮಗರಿ ಪೂರ್ಣಗೊಂಡರೆ ಎರಡು ನಗರಗಳ ನಡುವಿನ ದೂರವನ್ನು 90 ನಿಮಿಷಗಳಲ್ಲಿ ಕ್ರಮಿಸಬಹುದಾಗಿದೆ.

ಸವೀ೯ಸ್ ರಸ್ತೆಗಳು ಸೇರಿ 10 ಪಥಗಳ ಮ್ಯೆಸೂರು-ಬೆ೦ಗಳೂರು ಹೆದ್ದಾರಿ ಕಾಮಗಾರಿಯನ್ನು 2017 ರ ಮಾರ್ಚ್ ನಲ್ಲಿ ಆರ೦ಭಿಸಲಾಗುತ್ತದೆ. ಟೆ೦ಡರ್ ಪ್ರಕ್ರಿಯೆ ಮುಗಿದ ತಕ್ಷಣ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಗುತ್ತದೆ.

Bengaluru-Mysuru highway 6-lane work to begin from December

ದೇಶದ ಎರಡನೇ ಅತಿದೊಡ್ಡ ರಾಷ್ಟ್ರೀಯ ಹೆದ್ದಾರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗುವ 706 ಕಿ.ಮೀ. ದೂರದ ಬೀದರ್‍- ಚಾಮರಾಜನಗರ ಹೆದ್ದಾರಿಯ ಯೋಜನಾ ವರದಿ ಸಿದ್ಧವಾಗುತ್ತಿದೆ. ಇದು ಕೂಡಾ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎ೦ದು ತಿಳಿಸಿದರು.

ರಾಜ್ಯದಲ್ಲಿ ಅತ್ಯುತ್ತಮ ಗುಣಮಟ್ಟದ ರಸ್ತೆಗಳನ್ನು ನಿಮಾ೯ಣ ಮಾಡಿರುವುದಕ್ಕೆ ಎರಡು ರಾಷ್ಟ್ರೀಯ ಪ್ರಶಸ್ತೀಗಳು ಸಿಕ್ಕಿವೆ. ಇದೇ ಗುಣಮಟ್ಟವನ್ನು ಉಳಿಸಿಕೊ೦ಡು ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಕೊ೦ಡೊಯ್ಯಲು ಲೋಕೋಪಯೋಗಿ ಇಲಾಖೆ ಇ೦ಜಿನಿಯರ್‍ ಗಳು ಶ್ರಮಿಸಬೇಕೆ೦ದು ಕರೆ ನೀಡಿದರು

ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ(ಎನ್ ಎಚ್ ಎಐ) ಹೆದ್ದಾರಿ ಸುಧಾರಣೆ ಯೋಜನೆ ಕೈಗೆತ್ತಿಕೊಂಡಿದ್ದು, 1,150 ಕೋಟಿ ರು ವೆಚ್ಚದಲ್ಲಿ 1400 ಕಿಮೀ ಮೊದಲ ಹಂತದಲ್ಲಿ ಮುಗಿಸಲಿದೆ. ರಾಜ್ಯಕ್ಕೆ 4,315 ಕಿ.ಮೀ ಅಭಿವೃದ್ಧಿಗೆ 3,500ಕೋಟಿ ರು ಮಂಜೂರಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The National Highways Authority of India (NHAI) has launched the third stage of the state and national highway upgradation projects ­ Rs 1,150 crore for 1400km road ­ in Karnataka. The NHAI has sanctioned Rs 3,500 crore for developing 4,315-km roads in the state. National Highway-275, linking Bengaluru and Mysuru, is likely to reduce travel time between the two cities to 90 minutes.
Please Wait while comments are loading...