ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಇನ್ನೂ 150 ಕಿ.ಮೀ ರಸ್ತೆಗೆ ವೈಟ್ ಟಾಪಿಂಗ್

|
Google Oneindia Kannada News

ಬೆಂಗಳೂರು, ಫೆಬ್ರವರಿ13 : ನಗರದಲ್ಲಿ150 ಕಿ.ಮೀ ಉದ್ದದ ಮುಖ್ಯ ಹಾಗೂ ಉಪಮುಖ್ಯ ರಸ್ತೆಗಳ ವೈಟ್ ಟಾಪಿಂಗ್ ಕಾಮಗಾರಿಯನ್ನು ಪ್ರಾರಂಭಿಸಲು ಬಿಬಿಎಂಪಿ ಆಲೋಚಿಸಿದೆ.

ನಗರೋತ್ಥಾನ ಯೋಜನೆಯಡಿ 2018-19 ನೇ ಸಾಲಿನಲ್ಲಿ500 ಕಿ.ಮೀ ಉದ್ದದ ರಸ್ತೆಗಳನ್ನು ವೈಟ್ ಟಾಪಿಂಗ್ ರಸ್ತೆಗಳನ್ನಾಗಿ ಪರಿವರ್ತಿಸಲು 4 ಕೋಟಿ ರೂ ಅನುದಾನ ನೀಡುವಂತೆ ಪಾಲಿಕೆ ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತವಾನೆ ಸಲ್ಲಿಸಿತ್ತು.

ನಗರಾಭಿವೃದ್ಧಿಗೆ ಮೀಸಲಿಟ್ಟಿರುವ ಅನುದಾನವನ್ನು ಎಲ್ಲ ಯೋಜನೆಗಳಿಗೆ ಹಂಚಿಕೆ ಮಾಡಿದ ಬಳಿಕ ಉಳಿದ ಹಣದಲ್ಲಿ ವೈಟ್‌ಟಾಪಿಂಗ್‌ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಹೀಗಾಗಿ, ಈಗ ಉದ್ದೇಶಿಸಿರುವ ಯೋಜನಾ ಮೊತ್ತಕ್ಕಿಂತ ಹೆಚ್ಚಿನ ಅನುದಾನ ಸಿಗಬಹುದು ಅಥವಾ ಸಿಗದೇ ಇರಬಹುದು. ಇದರ ಬಗ್ಗೆ ಈಗಲೇ ನಿಖರವಾಗಿ ಹೇಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

Bengaluru: more pain coming your way, another 150 km roads will get White topping

ಕಡಿಮೆ ನಿರ್ವಹಣಾ ವೆಚ್ಚ ಹಾಗೂ ದೀರ್ಘ ಬಾಳಿಕೆಯ ಕಾರಣದಿಂದ ನಗರದ ಆಯ್ದ ಮುಖ್ಯರಸ್ತೆಗಳನ್ನು ವೈಟ್‌ಟಾಪಿಂಗ್ ರಸ್ತೆಗಳನ್ನಾಗಿ ಮಾಡಲು ಸರ್ಕಾರ ನಿರ್ಧರಿಸಿತ್ತು. ನಗರೋತ್ಥಾನ ಯೋಜನೆಯಡಿ 93.47 ಕಿ.ಮೀ ಉದ್ದದ 29 ರಸ್ತೆಗಳು ಹಾಗೂ ಆರು ಜಂಕ್ಷನ್‌ಗಳಲ್ಲಿ ವೈಟ್‌ ಟಾಪಿಂಗ್ ಮಾಡುವ ಕಾಮಗಾರಿಗೆ 2017ರ ಅಕ್ಟೋಬರ್‌ 9ರಂದು ಚಾಲನೆ ನೀಡಲಾಗಿತ್ತು.

ಕಾಮಗಾರಿ ಎಲ್ಲೆಲ್ಲಿ ಪೂರ್ಣಗೊಂಡಿದೆ: ರಾಜ್ ಕುಮಾರ್ ಸಮಾಧಿಯಿಂದ 900 ಮೀ, ಗೊರಗುಂಟೆ ಪಾಳ್ಯದ ಬಳಿ 450 ಮೀ, ಹೊರವರ್ತುಲ ರಸ್ತೆಯ ಹೆಣ್ಣುರು ಸೇತುವೆಯಿಂದ ಕಸ್ತೂರಿನಗರದ ವರೆಗೆ ಒಂದು ಪಾರ್ಶ್ವದಲ್ಲಿ 3ಕಿ.ಮೀ, ಮೈಸೂರು ರಸ್ತೆಯಲ್ಲಿ ಬ್ರಿಯಾಂಡ್ ಚೌಕದಿಂದ ವೃಷಭಾವತಿ ಕಾಲುವೆವರೆಗೆ 3 ಕಿ.ಮೀ, ಮಾಗಡಿ ರಸ್ತೆಯ ವಿಜಯನಗರದ ಬಳಿ 1.50 ಕಿ.ಮೀ, ಕೋರಮಂಗಲ 20ನೇ ಮುಖ್ಯರಸ್ತೆಯಲ್ಲಿ 1.50ಕಿ.ಮೀ ವ್ಯಾಪ್ತಿಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಪೂರ್ಣಗೊಂಡಿದೆ.

English summary
In the eye of election BBMP decides to have White topping for another 150 km stretch if roads. Because of delay in project white topping is already getting lot of criticism in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X