ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಮ್ಮನಹಳ್ಳಿ ಪ್ರಕರಣದ ಆರೋಪಿಗಳನ್ನು ಗುರುತಿಸಿದ ಸಂತ್ರಸ್ತೆ

By ಅನುಷಾ ರವಿ
|
Google Oneindia Kannada News

ಬೆಂಗಳೂರು, ಮಾರ್ಚ್ 1: ಕಮ್ಮನಹಳ್ಳಿ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ತನಿಖಾಧಿಕಾರಿಗಳು ನೀಡಿದ ಧೈರ್ಯದಿಂದ ಅಂತೂ ಸಂತ್ರಸ್ತೆ ದಾಳಿಕೋರರನ್ನು ಗುರುತಿಸಿದ್ದಾರೆ. ಈ ಮೂಲಕ ಬೆಂಗಳೂರು ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ. ಮಹಿಳೆಯ ಧೈರ್ಯವನ್ನು ಮೆಚ್ಚಿದ್ದಾರೆ.

ದಾಳಿಕೋರರನ್ನು ಸಂತ್ರಸ್ತೆಯು ಗುರುತಿಸದೆ ಚಾರ್ಜ್ ಶೀಟ್ ಮಾಡುವುದು ಕಷ್ಟ. ಹೊಸ ವರ್ಷದ ದಿನವೇ ಬೆಂಗಳೂರಿನ ಕಮ್ಮನಹಳ್ಳಿಯಲ್ಲಿ ದುಷ್ಕರ್ಮಿಗಳು ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದರು. ಅದರ ಸಿಸಿಟಿವಿ ದೃಶ್ಯಾವಳಿಗಳು ಸಿಕ್ಕಿದ್ದವು. ಜತೆಗೆ ಖಾಸಗಿ ದೂರು ಕೂಡ ದಾಖಲಾಗಿತ್ತು.[ಕಮ್ಮನಹಳ್ಳಿ ಪುಂಡರನ್ನು ಪೊಲೀಸರು ಬಂಧಿಸಿದ್ದು ಹೇಗೆ?]

Bengaluru molestation survivor identifies attackers

ಆದರೆ, ದಾಳಿಕೋರರನ್ನು ಗುರುತಿಸಲು ಪೊಲೀಸರ ತಂಡಕ್ಕೆ ಸಹಕರಿಸಲು ಸಂತ್ರಸ್ತೆ ನಿರಾಕರಿಸಿದ್ದರು. ಐಡೆಂಟಿಫಿಕೇಷನ್ ಪರೇಡ್ ಗೂ ಕಳೆದ ಎರಡು ಬಾರಿ ಆಕೆ ಬಂದಿರಲಿಲ್ಲ. ಆ ನಂತರ ಆಕೆಯ ನೆರವಿನ ಅಗತ್ಯದ ಬಗ್ಗೆ ಪೊಲೀಸರು ಮನದಟ್ಟು ಮಾಡಿ ಕೊಟ್ಟ ಮೇಲೆ ಮಂಗಳವಾರ ಆಕೆ ಬಂದಿದ್ದರು.[ಕಮ್ಮನಹಳ್ಳಿ ಪುಂಡರನ್ನು ಪೊಲೀಸರು ಬಂಧಿಸಿದ್ದು ಹೇಗೆ?]

ಕಮ್ಮನಹಳ್ಳಿ ಪ್ರಕರಣದಲ್ಲಿ ಆರು ಮಂದಿಯನ್ನು ಬಂಧಿಸಲಾಗಿತ್ತು. ಆ ನಂತರ ಬೆದರಿದ ಸಂತ್ರಸ್ತೆ ನಗರ ಬಿಟ್ಟು ಹೋಗಿದ್ದರು. ಇದೀಗ ಮಂಗಳವಾರ ಐಡೆಂಟಿಫಿಕೇಷನ್ ಪರೇಡ್ ನಲ್ಲಿ ಸಂತ್ರಸ್ತೆಯು ಆರೋಪಿಗಳನ್ನು ಗುರುತಿಸಿರುವುದರಿಂದ ತನಿಖಾಧಿಕಾರಿಗಳಿಗೆ ನೆರವಾಗಲಿದೆ.

English summary
In the horrific Kammanahalli molestation case, the survivor finally arrived in person to identify the attackers. The Bengaluru police breathed a sigh of relief and appreciated the woman's courage to identify the assaulters without which filing a charge sheet against those arrested would have been difficult.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X