ಬೆಂಗಳೂರು ಲೈಂಗಿಕ ದೌರ್ಜನ್ಯ : ತಪ್ಪಿತಸ್ಥರ ವಿರುದ್ಧ ಎಫ್ಐಆರ್

By: ಅನುಷಾ ರವಿ
Subscribe to Oneindia Kannada

ಬೆಂಗಳೂರು, ಜನವರಿ 04 : ಹೊಸವರ್ಷಾಚರಣೆಯ ಸಂದರ್ಭದಲ್ಲಿ ಯುವತಿಯರನ್ನು ಲೈಂಗಿಕ ದೌರ್ಜನ್ಯಕ್ಕೆ ಒಳಪಡಿಸಿದ ಕಿಡಿಗೇಡಿಗಳ ವಿರುದ್ಧ ಕಡೆಗೂ ಎಫ್ಐಆರ್ ದಾಖಲಿಸಲಾಗಿದೆ.

ಈ ವಿಷಯವನ್ನು ಟ್ವಿಟ್ಟರ್ ನಲ್ಲಿ, ಹೊಸದಾಗಿ ಅಧಿಕಾರ ಸ್ವೀಕರಿಸಿರುವ ಬೆಂಗಳೂರು ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಅವರು ತಿಳಿಸಿದ್ದು, ಯಾವುದೇ ತಪ್ಪಿತಸ್ಥರನ್ನು ಬಿಡುವುದಿಲ್ಲ. ಎಫ್ಐಆರ್ ದಾಖಲಿಸಿರುವುದು ಟೀಕಾಕಾರರನ್ನು ಮೆಚ್ಚಿಸುವುದಕ್ಕಲ್ಲ, ಕಿಡಿಗೇಡಿಗಳನ್ನು ಶಿಕ್ಷಿಸಲು ಎಂದು ಹೇಳಿದ್ದಾರೆ.

Bengaluru molestation: Police finally file FIR

ಬೆಂಗಳೂರಿನ ಮಹಾತ್ಮಾ ಗಾಂಧಿ ರಸ್ತೆ ಮತ್ತು ಬ್ರಿಗೇಡ್ ರಸ್ತೆಯಲ್ಲಿ ಡಿಸೆಂಬರ್ 31ರ ರಾತ್ರಿ ಭಾರೀ ಜನಸಾಗರ ಸೇರಿದಂಥ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ಯುವತಿಯ ಮೇಲೆರಗಿ ಲೈಂಗಿಕವಾಗಿ ಹಿಂಸಿಸಿದ್ದರು. ಆದರೆ, ಮೂರು ದಿನಗಳಾದರೂ ಯಾರ ಮೇಲೆಯೂ ಪೊಲೀಸರು ಕ್ರಮ ಜರುಗಿಸಿರಲಿಲ್ಲ.

ಒಟ್ಟು 45 ಸಿಸಿಟಿವಿ ಕ್ಯಾಮೆರಾಗಳ ಫುಟೇಜ್ ಗಳನ್ನು ಪರಿಶೀಲಿಸಲಾಗಿದ್ದು, ಡಿಸಿಪಿ ಕ್ರಮಾಂಕದ ಅಧಿಕಾರಿಗಳಿಂದ ತನಿಖೆ ನಡೆಸಲಾಗಿದ್ದು, ನಮಗೆ ಬಲವಾದ ಸಾಕ್ಷ್ಯ ದೊರೆತಿದೆ. ದೌರ್ಜನ್ಯ ಎಸಗಿದ ಯಾವುದೇ ವ್ಯಕ್ತಿಯನ್ನು ಬಂಧಿಸದೆ ಬಿಡುವುದಿಲ್ಲ ಎಂದು ಪ್ರವೀಣ್ ಸೂದ್ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Bengaluru police finally registered an FIR and initiated action into allegations of molestation and assault during New Year's revelry on M G Road and Brigade Road of the city. The newly appointed commissioner of Police, Praveen Sood took to twitter to announce action.
Please Wait while comments are loading...