ಇಂದು ಬಿಇಎಂಎಲ್ ನಿಂದ ಮೂರು ಮೆಟ್ರೋ ಬೋಗಿಗಳ ಹಸ್ತಾಂತರ

Posted By: Nayana
Subscribe to Oneindia Kannada

ಬೆಂಗಳೂರು, ಫೆಬ್ರವರಿ 14 : ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್(ಬಿಇಎಂಎಲ್) ತಯಾರಿಸಿರುವ 3 ಮೆಟ್ರೋ ರೈಲು ಬೋಗಿಗಳನ್ನು ಬುಧವಾರ (ಫೆ.14 ) ಬಿಎಂಆರ್ ಸಿಎಎಲ್ ಗೆ ಹಸ್ತಾಂತರಿಸಲಿದೆ.

ಬಿಎಂಆರ್ ಸಿಎಲ್ ಪರವಾಗಿ ಸಚಿವ ಕೆ.ಜೆ. ಜಾರ್ಜ್ ಬೋಗಿಗಳನ್ನು ಸ್ವೀಕರಿಸಲಿದ್ದಾರೆ. ನಗರದಲ್ಲಿ ಸಂಚರಿಸುತ್ತಿರುವ 3 ಬೋಗಿಯ ರೈಲುಗಳನ್ನು 6 ಬೋಗಿ ರೈಲುಗಳನ್ನಾಗಿ ಪರಿವರ್ತಿಸಲು ನಿರ್ಧರಿಸಿದ್ದ ಬಿಎಂಆರ್ ಸಿ ಎಲ್, 150 ಬೋಗಿಗಳ ಖರೀದಿಗೆ ಮುಂದಾಗಿದೆ. ಟೆಂಡರ್ ಪಡೆದಿರುವ ಬಿಇಎಂಎಲ್, 1,451 ಕೋಟಿ ರೂ. ವೆಚ್ಚದಲ್ಲಿ ಬೋಗಿಗಳನ್ನು ನಿರ್ಮಿಸಲಿದೆ. ಮೊದಲ ಹಂತದಲ್ಲಿ 3 ಬೋಗಿಗಳನ್ನು ಹಸ್ತಾಂತರಿಸಲಿದೆ.

Bengaluru Metro to receive new coaches Wednesday

2019ರೊಳಗೆ ಎಲ್ಲಾ 150 ಬೋಗಿಗಳನ್ನು ನೀಡಲಿದೆ.

ತಾಂತ್ರಿಕ ದೋಷ: ಯಲಚೇನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ವ್ಯತ್ಯಯ

ಬುಧವಾರವೇ 3 ಬೋಗಿಗಳು ಹಸ್ತಾಂತರವಾದರೂ1,500 ಕಿ.ಮೀ ಪರೀಕ್ಷಾರ್ಥ ಸಂಚಾರ ನಡೆಸಿದ ಬಳಿಕ ರೈಲ್ವೆ ಸುರಕ್ಷತಾ ಆಯುಕ್ತರ ಒಪ್ಪಿಗೆ ಪಡೆಯಲಿದೆ. ಆ ನಂತರವೇ ಪ್ರಯಾಣಿಕರ ಓಡಾಟಕ್ಕೆ ಮುಕ್ತಗೊಳ್ಳಿದೆ. ಮಾರ್ಚ್ ಅಥವಾ ಏಪ್ರಿಲ್ ನಲ್ಲಿ 6 ಬೋಗಿಯ ಒಂದು ಮೆಟ್ರೋ ರೈಲು ಓಡಾಟ ಪ್ರಾರಂಭವಾಗುವ ನಿರೀಕ್ಷೆ ಇದೆ. ಈ ವೇಳೆ ಬೋಗಿಯನ್ನು ಮಹಿಳೆಯರಿಗಾಗಿ ಮೀಸಲಿಡುವ ಸಾಧ್ಯತೆ ಇದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Namma Metro is all set for a date with its new coaches on Wednesday as BEML, the coach manufacturer, will hand over the first set of 3 coaches to the Bengaluru Metro Rail Corporation on Wednesday.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ