ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಮೆಟ್ರೋ ರೈಲು ಎಂಬ ಅದ್ಭುತ ಜಗತ್ತು, ಅಪರಿಚಿತ ಮುಖಗಳು....

By ಸ್ವಾತಿ ನೆಂಪೆ
|
Google Oneindia Kannada News

ಬೆಂಗಳೂರಲ್ಲಿ ಮೊದಲ ಸಲ ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡಿದ ನನ್ನ ಅನುಭವವನ್ನು ನಿಮ್ಮ ಹತ್ತಿರ ಹಂಚಿಕೊಳ್ಳಬೇಕು. ಮೊನ್ನೆಮೊನ್ನೆ ಅಂದರೆ ಶನಿವಾರ ಮುಳಬಾಗಲಿಗೆ ಹೋಗಿದ್ದೆ. ಅಲ್ಲಿಂದ ಬರುವಾಗ ಬೈಯಪ್ಪನಹಳ್ಳಿಯಲ್ಲಿ ಇಳಿದುಕೊಂಡು ಮೆಟ್ರೋದಲ್ಲಿ ಮೈಸೂರು ರಸ್ತೆವರೆಗೆ ಬಂದೆ.

ಮೆಟ್ರೋ ನಿಲ್ದಾಣದೊಳಗೂ ಹೋದ ಸಮಯವನ್ನೂ ಲೆಕ್ಕ ಹಿಡಿದು ಹೇಳುವುದಾದರೆ ಒಂದು ಗಂಟೆಯೊಳಗೆ ಬನಶಂಕರಿ ಮೂರನೇ ಹಂತದಲ್ಲಿರುವ ನಮ್ಮನೆಗೆ ಬಂದುಬಿಟ್ಟಿದ್ದೆ. ವಾಹ್, ಆ ವೇಗ-ಏಸಿ, ಆಗಾಗ ಇದಿಂಥ ನಿಲ್ದಾಣ, ಎಡಕ್ಕೆ ಇಳಿಯಿರಿ ಅಥವಾ ಬಲಕ್ಕೆ ಇಳಿಯಿರಿ ಎಂದು ಉಲಿಯುತ್ತಿದ್ದ ಧ್ವನಿ...ಇದೆಲ್ಲ ಇಷ್ಟು ಬೇಗ ಬೆಂಗಳೂರಿನಲ್ಲಿ ಸಾಧ್ಯವಾಗಬಹುದು ಅಂತ ನಾನಂತೂ ಅಂದುಕೊಂಡಿರಲಿಲ್ಲ.

ನಮ್ಮ ಮೆಟ್ರೋ ಹಂತ 1: ಉಪಯೋಗ ಪಡೆಯಲಿದ್ದಾರೆ 5 ಲಕ್ಷ ಜನ!ನಮ್ಮ ಮೆಟ್ರೋ ಹಂತ 1: ಉಪಯೋಗ ಪಡೆಯಲಿದ್ದಾರೆ 5 ಲಕ್ಷ ಜನ!

ಮೆಟ್ರೋ ರೈಲು ಬೆಂಗಳೂರಿನವರ ಪಾಲಿಗೆ ಡಾರ್ಲಿಂಗ್ ಆಗುವುದರಲ್ಲಿ ಅನುಮಾನವೇ ಇಲ್ಲ. ಕಾರು-ಸ್ಕೂಟರ್-ಬೈಕ್-ಆಟೋ...ಉಹುಂ, ಯಾವುದೂ ಬೇಕಾಗಿಲ್ಲ. ಮನೆಯಲ್ಲಿ ಅವುಗಳನ್ನು ನಿಲ್ಲಿಸಿ, ನೆಮ್ಮದಿಯಾಗಿ ಮೆಟ್ರೋದಲ್ಲಿ ಓಡಾಡಬಹುದು. ಇದೇನು ಮೊದಲ ಸಲ ಓಡಾಡಿದ ಎಕ್ಸೈಟ್ ಮೆಂಟ್ ನಲ್ಲಿ ಹೀಗೆ ಮಾತನಾಡ್ತಿದೀನಿ ಅಂತೀರಾ?

ನಿಮಗೆ ನನ್ನ ಮಾತಲ್ಲಿ ಅನುಮಾನವಿದ್ದರೆ ಒಂದು ಸಲ ಮೆಟ್ರೋದಲ್ಲಿ ಮೈಸೂರು ರಸ್ತೆಯಿಂದ ಬೈಯಪ್ಪನಹಳ್ಳಿಗೆ ಮೆಟ್ರೋದಲ್ಲಿ ಹೋಗಿ. ಆ ಕಡೆಯಿಂದ ಬರುವಾಗ ಬಸ್ಸು, ಆಟೋ ಅಥವಾ ಕ್ಯಾಬ್...ನಿಮಗೆ ಯಾವುದು ಅನುಕೂಲವೋ ಅದರಲ್ಲಿ ವಾಪಸ್ ಬನ್ನಿ. ಆಗ ವ್ಯತ್ಯಾಸ ಗೊತ್ತಾಗುತ್ತದೆ.

ನಮ್ಮ ಮೆಟ್ರೋ : ಶೀಘ್ರದಲ್ಲೇ ಮಹಿಳೆಯರಿಗಾಗಿ ಪ್ರತ್ಯೇಕ ಬೋಗಿನಮ್ಮ ಮೆಟ್ರೋ : ಶೀಘ್ರದಲ್ಲೇ ಮಹಿಳೆಯರಿಗಾಗಿ ಪ್ರತ್ಯೇಕ ಬೋಗಿ

ಇಡೀ ಬೆಂಗಳೂರಿನಲ್ಲಿ ಮೆಟ್ರೋ ರೈಲು ಓಡಾಟ ಶುರುವಾದರೆ, ಅದನ್ನು ಜನ ಬಳಸುವುದಕ್ಕೆ ಶುರು ಮಾಡಿದರೆ ಆಗ ವ್ಯತ್ಯಾಸ ಇನ್ನೂ ಸ್ಪಷ್ಟವಾಗಿ ಗೊತ್ತಾಗುತ್ತದೆ.

ಆದರೆ, ಈ ವಿಚಾರದಲ್ಲಿ ಕೆಲವು ಸವಾಲುಗಳಿವೆ. ಅವುಗಳನ್ನು ನಿಮ್ಮೆದುರು ಪಟ್ಟಿ ಮಾಡ್ತೀನಿ. ಸಂಬಂಧಪಟ್ಟವರು ಗಮನಿಸಿ, ಆ ಬಗ್ಗೆ ಏನಾದರೂ ಕ್ರಮ ತೆಗೆದುಕೊಂಡರೆ ಅನ್ನೋ ಸಣ್ಣ ಆಸೆ.

ಮೆಟ್ರೋ ರೈಲಿನಲ್ಲಿದವರೆಲ್ಲ ಹೀಗಿದ್ದರು

ಮೆಟ್ರೋ ರೈಲಿನಲ್ಲಿದವರೆಲ್ಲ ಹೀಗಿದ್ದರು

ಮೆಟ್ರೋ ರೈಲಿನ ತುಂಬ ಬೂಟು ತೊಟ್ಟು, ತೋಳಿಗೆ ಬ್ಯಾಗು, ಕಂಕುಳಲ್ಲಿ ವ್ಯಾನಿಟಿ ಬ್ಯಾಗ್ ಹಾಕಿಕೊಂಡಿದ್ದವರ ಸಂಖ್ಯೆಯೇ ಜಾಸ್ತಿ ಇತ್ತು.

ನಮ್ಮಂಥವರಿಗಲ್ಲ ಅನಿಸಿದೆಯಾ

ನಮ್ಮಂಥವರಿಗಲ್ಲ ಅನಿಸಿದೆಯಾ

ನಮ್ಮೂರಿನ ಕಾಳಪ್ಪ, ಬೋರಮ್ಮ, ಅಬ್ದುಲ್ ನಜೀರ್ ಯಾರೂ ಕಾಣಲೇ ಇಲ್ಲ. ಅಂದರೆ ಮೆಟ್ರೋ ನಮ್ಮಂಥವರಿಗಿಲ್ಲ ಅಂತೇನಾದರೂ ಒಂದು ವರ್ಗ ಅಂದುಕೊಂಡಿದೆಯಾ?

ಟಿಕೆಟ್ ರೇಟ್ ಜಾಸ್ತಿಯಾಯ್ತು

ಟಿಕೆಟ್ ರೇಟ್ ಜಾಸ್ತಿಯಾಯ್ತು

ಉದಾಹರಣೆ ಅನ್ನೋ ಹಾಗೆ ಹೇಳ್ತಿದೀನಿ, ಬೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆಗೆ ನಲವತ್ತು ರುಪಾಯಿ ಒಬ್ಬರಿಗೆ. ಈ ದರ ಎಲ್ಲ ಲೆಕ್ಕಾಚಾರ ಹಾಕಿದ ಮೇಲೆ ನಿಗದಿ ಮಾಡಿರ್ತಾರೆ. ಆದರೆ ಎಲ್ಲ ವರ್ಗಕ್ಕೂ ಇದು ಕೈಗೆಟುಕುವ ದರ ಅಲ್ಲ.

ಓದು-ಬರಹ ಗೊತ್ತಿಲ್ಲದವರಿಗೆ ಮೆಟ್ರೋ ಅಲ್ವಾ?

ಓದು-ಬರಹ ಗೊತ್ತಿಲ್ಲದವರಿಗೆ ಮೆಟ್ರೋ ಅಲ್ವಾ?

ಮೆಟ್ರೋ ನಿಲ್ದಾಣಗಳಲ್ಲಿ ಯಾವ ಪ್ಲಾಟ್ ಫಾರ್ಮ್ ಗೆ ಹೋಗಬೇಕು, ಯಾವ ರೈಲಿಗೆ ಯಾವ ಕಡೆ ಎಂಬ ಮಾಹಿತಿ ಕನ್ನಡ-ಇಂಗ್ಲಿಷ್ ನಲ್ಲಿ ಇದೆ. ಅಂದರೆ ಓದು-ಬರಹ ಗೊತ್ತಿದ್ದರಷ್ಟೇ ಒಳಗೆ ಪ್ರವೇಶ. ಇದರ ಜತೆಗೆ ಯಾರಿಗೆ ಬೇಕಾದರೂ ತಿಳಿಯುವಂಥ ವ್ಯವಸ್ಥೆ ಆಗಬೇಕು.

ಮೆಟ್ರೋ ಅಭ್ಯಾಸ ಮಾಡಿಸಬೇಕು

ಮೆಟ್ರೋ ಅಭ್ಯಾಸ ಮಾಡಿಸಬೇಕು

ಇಡೀ ಬೆಂಗಳೂರಿನಲ್ಲಿ ಮೆಟ್ರೋ ರೈಲು ಜಾಲ ಆಗುವ ಮುಂಚೆ ಜನರಿಗೆ ನಿಲ್ದಾಣವನ್ನು, ರೈಲು ಪ್ರಯಾಣವನ್ನು ಚೆನ್ನಾಗಿ ಅಭ್ಯಾಸ ಮಾಡಿಸಬೇಕು. ಅದರ ಮೇಲೆ ಪ್ರೀತಿ ಬೆಳೆಸಬೇಕು. ಅದಕ್ಕೋಸ್ಕರ ಈಗಿನಿಂದಲೇ ಪ್ರಯತ್ನ ಶುರು ಮಾಡಬೇಕು.

ಒಂದೊಳ್ಳೆ ಶಾರ್ಟ್ ಮೂವೀ ಮಾಡಿಸಬೇಕು

ಒಂದೊಳ್ಳೆ ಶಾರ್ಟ್ ಮೂವೀ ಮಾಡಿಸಬೇಕು

ಬೆಂಗಳೂರಿನ ಮೆಟ್ರೋ ಬಗ್ಗೆ ಒಂದೊಳ್ಳೆ ಸಿನಿಮಾ (ಶಾರ್ಟ್ ಮೂವೀ) ಮಾಡಬೇಕು. ಮಾಹಿತಿ ಇರಬೇಕು, ಆಸಕ್ತಿ, ಮೆಟ್ರೋ ಪ್ರಯಾಣದ ಬಗ್ಗೆ ಪ್ರೀತಿ ಮೂಡಿಸುವ ಹಾಗಿರಬೇಕು.
ಅದನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶನ ಮಾಡಬೇಕು

English summary
Bengaluru metro journey experience shared by Swathi Nempe with Oneindia Kannada readers. And she has given some suggestions on the basis of her experience.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X