ಶೀಘ್ರದಲ್ಲೇ ಬೆಂಗಳೂರಲ್ಲಿ ಯುಎಸ್ ರಾಯಭಾರ ಕಚೇರಿ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 13: ಬೆಂಗಳೂರಲ್ಲಿ ಅಮೆರಿಕ ರಾಯಭಾರ ಕಚೇರಿ ಶೀಘ್ರದಲ್ಲೇ ಆರಂಭಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಈ ಕುರಿತಂತೆ ಸದ್ಯದಲ್ಲೆ ಕ್ರಮ ಜರುಗಿಸಲಾಗುವುದು ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.

ಬೆಂಗಳೂರಿನಲ್ಲೇ ಯುಎಸ್ಎ ರಾಯಭಾರ ಕಚೇರಿ ಸ್ಥಾಪನೆಯಾದರೆ ಅಮೆರಿಕಕ್ಕೆ ತೆರಳುವ ರಾಜ್ಯದ ಪ್ರವಾಸಿಗರು ವೀಸಾ ಪಡೆಯಲು ಇನ್ಮುಂದೆ ಚೆನ್ನೈಗೆ ಹೋಗಬೇಕಿಲ್ಲ. [ಪ್ರವಾಸೋದ್ಯಮಕ್ಕೆ ಉತ್ತೇಜನ, 36 ದೇಶಗಳಿಗೆ ಇ ವೀಸಾ?]

ಬೆಂಗಳೂರಲ್ಲೇ ಅಮೆರಿಕ ವೀಸಾ ಸಿಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ಬಿ.ಎಸ್. ಯಡಿಯೂರಪ್ಪ ಅವರಿಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಬರೆದಿರುವ ಪತ್ರದಲ್ಲಿ ಈ ವಿಷಯ ತಿಳಿಸಿದ್ದಾರೆ. [ಬೆಂಗಳೂರಿನಲ್ಲಿ ಯುಎಸ್ ವೀಸಾ ಕೇಂದ್ರ ಸ್ಥಾಪನೆಗೆ ಮನವಿ]

Bengaluru may get a USA consulate soon : Sushma Swaraj

ಜೂನ್​ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡಿದ್ದ ವೇಳೆ ಭಾರತ ಮತ್ತು ಅಮೆರಿಕ ನಡುವೆ ಹೆಚ್ಚುವರಿಯಾಗಿ ರಾಯಭಾರ ಕಚೇರಿಗಳನ್ನು ತೆರೆಯಲು ಪರಸ್ಪರ ಸಮ್ಮತಿಸಿವೆ ಎಂದು ಸುಷ್ಮಾ ಸ್ವರಾಜ್ ಅವರು ಹೇಳಿದ್ದಾರೆ.

ಯಡಿಯೂರಪ್ಪ ಅವರು ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಪತ್ರ ಅಮೆರಿಕ ರಾಯಭಾರ ಕಚೇರಿಯನ್ನು ತೆರೆಯುವಂತೆ ಮನವಿ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಸುಷ್ಮಾ ಅವರು ಪತ್ರದ ಮೂಲಕವೇ ಉತ್ತರಿಸಿ, ಭಾರತ ತನ್ನ ರಾಯಭಾರ ಕಚೇರಿಯನ್ನು ಅಮೆರಿಕಾದ ಸಿಯಾಟೆಲ್ ನಗರದಲ್ಲಿ ತೆರೆಯಲಿದೆ. ಅದೇ ರೀತಿ ಅಮೆರಿಕ ರಾಯಭಾರ ಕಚೇರಿಯನ್ನು ತೆರೆಯಲು ಬೆಂಗಳೂರನ್ನು ಪರಿಗಣಿಸಬಹುದಾಗಿದೆ ಎಂದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
External affairs minister Sushma Swaraj has hints at Bengaluru may get a United States of America (USA) consulate.Swaraj in her letter to Yeddyurappa said that during Prime Minister Narendra Modi's recent visit to the US in June, India and US committed to open additional consulates in each other's country.
Please Wait while comments are loading...