ಬೆಂಗಳೂರು: 112 ಮರ ಉಳಿಸಲು ನಾಳೆ (ಫೆ. 11) ಬೃಹತ್ ಮಾನವ ಸರಪಳಿ

Subscribe to Oneindia Kannada

ಬೆಂಗಳೂರು, ಫೆಬ್ರವರಿ 10: ಬಸವೇಶ್ವರ ವೃತ್ತ ಮತ್ತು ಹೆಬ್ಬಾಳ ನಡುವಿನ ಸ್ಟೀಲ್ ಫ್ಲೈ ಓವರ್ ಗಾಗಿ ಧರೆಗುರುಳಲಿರುವ ಮೊದಲ ಹಂತದ 112 ಮರಗಳನ್ನು ಉಳಿಸಿಕೊಳ್ಳಲು ನಾಳೆ (ಫೆ. 11) ಬೃಹತ್ ಮಾನವ ಸರಪಳಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಸ್ಟೀಲ್ ಫ್ಲೈ ಓವರ್ ಗಾಗಿ ಮೊದಲ ಹಂತದಲ್ಲಿ ಅರಮನೆ ಮೈದಾನದ ಮುಂಭಾಗದಲ್ಲಿರುವ ಜಯಮಹಲ್ ರಸ್ತೆಯ 112 ಮರಗಳನ್ನು ಕಡಿಯಲು ಬಿಬಿಎಂಪಿ ನಿರ್ಧರಿಸಿದ್ದು ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. 'ಮರ ಕಡಿ ಬೇಡಿ' ಹೆಸರಿನಲ್ಲಿ ಶನಿವಾರ ಬೆಳಿಗ್ಗೆ 9 ಗಂಟೆಗೆ ಫನ್ ವರ್ಲ್ಡ್ ನಿಂದ ಮೇಕ್ರಿ ವೃತ್ತದವರೆಗೆ ಪ್ರತಿಭಟನಾಕಾರರು ಮಾನವ ಸರಪಳಿ ರಚಿಸಲಿದ್ದಾರೆ. ಈ ಮೂಲಕ ಮರ ಕಡಿಯದಂತೆ ಒತ್ತಾಯಿಸಲಿದ್ದಾರೆ. [ಸ್ಟೀಲ್ ಫ್ಲೈ ಓವರ್ ನಿಂದ ತೆರಿಗೆ ಹಣ ಲೂಟಿ : ಎಎಪಿ]

Bengaluru: ‘Mara Kadi Bedi’ a human chain protest against chop of 112 trees

ಬಿಬಿಎಂಪಿ ಈಗಾಗಲೇ 112 ಮರಗಳನ್ನು ಕಡಿಯಲು ನಿರ್ಧರಿಸಿದ್ದು, ಇದಕ್ಕೆ ಆಕ್ಷೇಪಗಳೇನಾದರೂ ಇದ್ದರೆ ಫೆಬ್ರವರಿ 15ರ ಮೊದಲು ಸಲ್ಲಿಸಲು ಸೂಚಿಸಿದೆ. ತಮ್ಮ ಆಕ್ಷೇಪ ಮತ್ತು ದೂರುಗಳನ್ನು acfsubdivision1bbmp@gmail.com ಗೆ ಈ-ಮೇಲ್ ಮಾಡಬಹುದು. ಫೋನ್ ಮೂಲಕ ದೂರು ಸಲ್ಲಿಸುವವರು 9480685381 ಗೆ ದೂರುಗಳನ್ನು ಸಲ್ಲಿಸಬಹುದು. [ಬೆಂಗಳೂರು: ಈ 112 ಮರಗಳನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಿಮ್ಮ ಮೇಲಿದೆ]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The first phase of chopping 112 trees for proposed steel flyover between Basaveshwara Circle and Hebbal will begin on Jayamahal Road near Palace Grounds. But people objected this and hold a human chain protest on Saturday in the name of ‘Mara Kadi Bedi’.
Please Wait while comments are loading...