ಟಾಯ್ಲೆಟ್ ಕ್ಲೀನರ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಬೆಂಗಳೂರಿನ ಖೈದಿ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಮೇ 20: ಕಳ್ಳತನದ ಆರೋಪದ ಮೇಲೆ ಪೊಲೀಸರ ವಶದಲ್ಲಿದ್ದ ಖೈದಿಯೊಬ್ಬ ಪೊಲೀಸ್ ಠಾಣೆಯಲ್ಲಿ ಟಾಯ್ಲೆಟ್ ಕ್ಲೀನರ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರಿನ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ನಡೆದಿದೆ.

ರಾಮೂರ್ತಿನಗರದ ನಿವಾಸಿಯಾಗಿದ್ದ ರಾಜಾ (23), ಆಟೋ ಡ್ರೈವರ್ ಆಗಿದ್ದು, ಆತನ ಮೇಲೆ ಕಳ್ಳತನದ ದೂರು ದಾಖಲಾಗಿತ್ತು. ಆದ್ದರಿಂದ ರಾಮಮೂರ್ತಿನಗರದ ಪೊಲೀಸರು ಆತನನ್ನು ಬಂಧಿಸಿದ್ದರು.[ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಬೆಂಗಳೂರಿನ ಕರಾಟೆ ಗುರು!]

Bengaluru man in police custody attempts to commit suicide

ವಿಚಾರಣೆಯ ನಂತರ ಕೋರ್ಟು ಆತನನ್ನು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ವಹಿಸಿತ್ತು. ಪೊಲೀಸ್ ಕಸ್ಟಡಿಯಲ್ಲಿದ್ದ ಈತ ಶೌಚಾಲಯಕ್ಕೆ ಹೋಗಿ, ಅಲ್ಲಿದ್ದ ಟಾಯ್ಲೆಟ್ ಕ್ಲೀನರ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಹೊಟ್ಟೆ ನೋವು ತಾಳಲಾರದೆ ಕಿರುಚುತ್ತಿದ್ದ ಆತನನನ್ನು ಆಸ್ಪತ್ರೆಗೆ ಸೇರಿಸಿದಾಗ ಟಾಯ್ಲೆಟ್ ಕ್ಲೀನರ್ ಕುಡಿದಿದ್ದನ್ನು ಬಾಯ್ಬಿಟ್ಟಿದ್ದಾನೆ. ಸದ್ಯಕ್ಕೆ ಆತನ ಪ್ರಾಣಕ್ಕೆ ಅಪಾಯವಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಇದೀಗ ಆತನ ವಿರುದ್ಧ ಆತ್ಮಹತ್ಯೆ ಯತ್ನದ ಪ್ರಕರಣವನ್ನೂ ದಾಖಲಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A 23 year man who was in police custody for 10 days attempted to commit suicide by consuming toilet cleaner. The incident took place in Ramamurthy Nagar police station, Bengaluru. The man is hospitalized now.
Please Wait while comments are loading...