ಬೆಂಗಳೂರು: ಐಪಿಎಲ್ ಬೆಟ್ಟಿಂಗ್ ಶೂರ ಕಾನಿಷ್ಕಾದಲ್ಲಿದ್ದ!

Written By:
Subscribe to Oneindia Kannada

ಬೆಂಗಳೂರು, ಮೇ 23: ಐಪಿಎಲ್ ಪಂದ್ಯಗಳ ಆಧಾರದಲ್ಲಿ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ರಾಜಾಜಿನಗರದ ದಿನೇಶ್ ಜೈನ್ ಎಂಬಾತನನ್ನು ಬಂಧಿಸಿ 2.24 ಲಕ್ಷ ರು, ನಗದು ವಶಪಡಿಸಿಕೊಳ್ಳಲಾಗಿದೆ.

ಪಂಜಾಬ್ ಮತ್ತು ಪುಣೆ ನಡುವಿನ ಅಂತಿಮ ಲೀಗ್ ಪಂದ್ಯದ ವೇಳೆ ಬೆಟ್ಟಿಂಗ್ ನಡೆಸುತ್ತಿದ್ದಾಗ ಪೊಲೀಸರ ಬಲೆಗೆ ಆಸಾಮಿ ಬಿದ್ದಿದ್ದಾನೆ. ಮೊಬೈಲ್ ಮೂಲಕ ನಿರಂತರವಾಗಿ ಸಂಪರ್ಕ ಬೆಳೆಸಿ ಬೆಟ್ಟಿಂಗ್ ನಡೆಸುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.['ವಾಸಿಂ ಅಕ್ರಂ ಸ್ವಿಂಗ್ ಕಿಂಗ್ ಅಲ್ಲ, ಬೆಟ್ಟಿಂಗ್ ರಾಜ']

cricket

ಈತ ಬೆಟ್ಟಿಂಗ್ ನಡೆಸುತ್ತಿದ್ದದ್ದು ಕಾನಿಷ್ಕಾ ಹೋಟೆಲ್ ಕೋಣೆಯಲ್ಲಿ ಎಂಬುದನ್ನು ನಂಬಲೇಬೇಕು. ಉಪ್ಪಾರಪೇಟೆ ಪೊಲೀಸರು ಆರೋಪಿಯನ್ನು ದಸ್ತಗಿರಿ ಮಾಡಿ ಮೊಬೈಲ್ ಸೇರಿದಂತೆ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.[ಹುಬ್ಬಳ್ಳಿ ಬೆಚ್ಚಿ ಬೀಳಿಸಿದ್ದ ಬೆಟ್ಟಿಂಗ್ ದಂಧೆ]

ಬೆಂಗಳೂರು ನಗರ ಪೊಲೀಸ್ ಕಮೀಷನರೇಟ್ ಘಟಕದ ಕೇಂದ್ರ ಅಪರಾಧ ವಿಭಾಗದ ವಿಶೇಷ ವಿಚಾರಣ ದಳದ ಎಸಿಪಿ, ಪೊಲೀಸ್ ಇನ್ಸ್ ಪೆಕ್ಟರ್ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bengaluru: A person have been arrested for allegedly betting in an Indian Premier League match played between Punjab and Pune. Bengaluru Central Crime Branch police team arrested Dinesh Jain and seized 2.24 Lakh worth of money.
Please Wait while comments are loading...