ಲೈಂಗಿಕ ಕಿರುಕುಳ, ಬೆಂಗ್ಳೂರು ಮಹಾರಾಣಿ ಕಾಲೇಜ್ ಪ್ರಾಧ್ಯಾಪಕ ಅಮಾನತು

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್. 20 : ಲೈಂಗಿಕ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರಿನ ಮಹಾರಾಣಿ ಮಹಿಳಾ ಕಾಲೇಜ್ ಪ್ರಾಧ್ಯಾಪಕಬೇಗೂರು ರಾಮಲಿಂಗಪ್ಪ ಅವರನ್ನು ಕಾಲೇಜ್ ಶಿಕ್ಷಣ ಇಲಾಖೆ ಸೋಮವಾರ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.

ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ಆಂತರಿಕ ದೂರುಗಳ ಸಮಿತಿ ನೀಡಿದ ತನಿಖಾ ವರದಿಯನ್ನು ಆಧರಿಸಿ ರಾಮಲಿಂಗಪ್ಪ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಕಾಲೇಜ್ ಶಿಕ್ಷಣ ಇಲಾಖೆ ಆಯುಕ್ತ ಅಜಯ್ ನಾಗಭೂಷಣ್ ತಿಳಿಸಿದ್ದಾರೆ.[ಮತ್ತೆ ಬೆಂಗಳೂರಲ್ಲಿ ಯುವತಿಗೆ ಲೈಂಗಿಕ ಕಿರುಕುಳ?!]

bengaluru Maharani college professor suspended for alleged sexual harassment

ಕಾಲೇಜ್ ಆವರಣದಲ್ಲಿ ನಡೆದ ಕಾಲೇಜ್ ಉತ್ಸವದ ನಂತರ ರಾಮಲಿಂಗಪ್ಪ ಅವರು ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ವಿದ್ಯಾರ್ಥಿನಿಯೊಬ್ಬರು ಆರೋಪಿಸಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಯಾಂಪಸ್ ನಲ್ಲಿ ತಪ್ಪು ಮಾಹಿತಿ ನೀಡಿದ ಆರೋಪದ ಮೇಲೆ ಮಹಾರಾಣಿ ಕಾಲೇಜ್ ನ ಮತ್ತೊಬ್ಬ ಪ್ರಾಧ್ಯಾಕರನ್ನು ಸಹ ಅಮಾನತುಗೊಳಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Department of Collegiate Education has suspended Professor Begur Ramalingappa, Kannada professor in a Bengaluru Maharani college, over a sexual harassment charges made against him by a student.
Please Wait while comments are loading...