ಬೆಂಗಳೂರು: ಸೀರೆ ಬಿಚ್ಚಿಟ್ಟು ಪರಾರಿಯಾದ ಲೇಡಿ ರೌಡಿ!

Written By:
Subscribe to Oneindia Kannada

ಬೆಂಗಳೂರು, ಮೇ 13: ಮೀಟರ್ ಬಡ್ಡಿ ಕಟ್ಟದ ಮಹಿಳೆ ಮೇಲೆ ಹಲ್ಲೆ ಮಾಡಿದ್ದ ಲೇಡಿ ರೌಡಿ ಇದೀಗ ಪೊಲೀಸರಿಗೆ ಯಾಮಾರಿಸಿ ಎಸ್ಕೇಪ್ ಆಗಿದ್ದಾಳೆ. ಎದೆ ನೋವು ಎಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಲೇಡಿ ರೌಡಿ ಯಶಸ್ವಿನಿ ಆಸ್ಪತ್ರೆಯ ಕೋಣೆಯಿಂದ ಪರಾರಿಯಾಗಿದ್ದಾಳೆ.

ಗುರುವಾರ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರ ಆದ ಮೇಲೆ ಲೇಡಿ ರೌಡಿ ಬಂಧನಕ್ಕೆ ಜಾಲ ಬೀಸಲಾಗಿತ್ತು. ಆದರೆ ಎದೆ ನೋವು ನೆಪ ಹೇಳಿ ಬನ್ನೇರುಘಟ್ಟ ರಸ್ತೆಯ ಅಪೋಲೋ ಆಸ್ಪತ್ರೆ ಸೇರಿದ್ದ ಮಹಿಳೆ ಸೀರೆಯನ್ನು ಬಿಚ್ಚಿಟ್ಟು ಪರಾರಿಯಾಗಿದ್ದಾಳೆ.[ಮೀಟರ್ ಬಡ್ಡಿ ಕಟ್ಟದ ಮಹಿಳೆ ಮೇಲೆ ಹಲ್ಲೆ ಮಾಡಿದ ಲೇಡಿ ರೌಡಿ]

bengaluru

ಸಾಲ ಪಡೆದಿದ್ದ ಹಣಕ್ಕೆ ಸರಿಯಾಗಿ ಬಡ್ಡಿ ಕಟ್ಟದ ಕೊತ್ತನೂರು ದಿಣ್ಣೆಯ ತಾಯಮ್ಮ ಅವರಿಗೆ ಬೆದರಿಕೆ ಹಾಕಿ ಹಲ್ಲೆ ಮಾಡಿದ ಯಶಸ್ವಿನಿ ಎಂಬ ಲೇಡಿ ರೌಡಿಯ ಮೇಲೆ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.[ಸಕತ್ ಕಿಕ್ ಕೊಡುವ ರೌಡಿ ಶೀಟರ್ 'ಅಲಿಯಾಸ್' ಗಳು]

ತಪ್ಪಿಸಿಕೊಂಡಿದ್ದು ಹೇಗೆ?
ರಾತ್ರಿ ಆಸ್ಪತ್ರೆಯ ಕೋಣೆಗೆ ಸಂಬಂಧಿಕರನ್ನು ಕರೆಸಿಕೊಂಡ ಯಶಸ್ವಿನಿ ಪೊಲೀಸರಿಗೆ ಗೊತ್ತಾಗದಂತೆ ಬೇರೆ ಬಟ್ಟೆ ತರಿಸಿಕೊಂಡಿದ್ದಾಳೆ. ಸಂಚು ರೂಪಿಸಿ ಮಧ್ಯರಾತ್ರಿ ವೇಳೆ ಸೀರೆ ಬದಲಿಸಿ ಕಿಟಕಿ ಮುರಿದು ಪರಾರಿಯಾಗಿದ್ದಾಳೆ. ಆರೋಪಿಯ ಬಂಧನಕ್ಕೆ ಎರಡು ತಂಡ ರಚನೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.[ಪರಪ್ಪನ ಅಗ್ರಹಾರದಿಂದ ಸೈಕೋ ಶಂಕರ್ ತಪ್ಪಿಸಿಕೊಂಡಿದ್ದು ಹೇಗೆ?]

ವಂಚನೆ ಆರೋಪದಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದ್ದು ಮಹಿಳೆಪ ಪತ್ತೆಗೆ ಬಲೆ ಬೀಸಲಾಗಿದೆ. ಇಂಥ ಇನ್ನಷ್ಟು ಪ್ರಕರಣಗಳು ಬೆಳಕಿಗೆ ಬರುವ ಸಾಧ್ಯತೆ ಇದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಕುಮಾರ್ ತಿಳಿಸಿದ್ದಾರೆ.

ಆಸ್ಪತ್ರೆಯ ಕಿಟಕಿ ಸರಳುಗಳನ್ನು ಮುರಿದು, ಪೊಲೀಸರ ಕಣ್ಣು ತಪ್ಪಿಸಿ ಪರಾರಿಯಾಗುವುದು ಸುಲಭದ ಮಾತೆ? ಎಂಬ ಪ್ರಶ್ನೆ ಮಾತ್ರ ಹಾಗೆ ಉಳಿದುಕೊಳ್ಳುತ್ತದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bengaluru: Lady Rowdy-sheeter Yashaswini escaped from Bannerghatta road Apollo hospital on 12 May mid-night. Yashaswini was arrested by Subramanyapura Police on 12 May regarding meter interest case.
Please Wait while comments are loading...