ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಲಾಗ್ರಾಮದಲ್ಲಿ 'ವೀರಗಾಸೆ-ನೀರ ಒಡಪು', ನೀವು ಬರ್ತಿರಿ ತಾನೆ?

|
Google Oneindia Kannada News

ಬೆಂಗಳೂರು, ಜನವರಿ , 06: ಬೆಂಗಳೂರು ವಿಶ್ವವಿದ್ಯಾನಿಲಯದ ಕಲಾಗ್ರಾಮದಲ್ಲಿ ಜನವರಿ 10 ಮತ್ತು 11 ರಂದು ಸಂಜೆ 7ಕ್ಕೆ ನ್ಯಾಶನಲ್ ಸ್ಕೂಲ್ ಆಫ್ ಡ್ರಾಮಾ (ಎನ್ ಎಸ್ ಡಿ) ಬೆಂಗಳೂರು ಕೇಂದ್ರದ ವಿದ್ಯಾರ್ಥಿಗಳಿಂದ "ವೀರಗಾಸೆ-ನೀರ ಒಡಪು" ಕಾರ್ಯಕ್ರಮ ನಡೆಯಲಿದೆ.

ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಕೇಂದ್ರದ ಆವರಣದಲ್ಲಿ ಪ್ರದರ್ಶನ ನಡೆಯಲಿದೆ. ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಕೇಂದ್ರದಲ್ಲಿ ದಕ್ಷಿಣ ಭಾರತದ ಬೇರೆ ಬೇರೆ ಭಾಷೆಯ 20 ವಿದ್ಯಾರ್ಥಿಗಳು ಅಭಿನಯ ತರಬೇತಿ ಪಡೆಯುತ್ತಿದ್ದಾರೆ ಇವರೆಲ್ಲ ಸೇರಿ ಕಾರ್ಯಕ್ರಮ ನೀಡಲಿದ್ದಾರೆ.[ಕೃಷ್ಣಾ ಎನಬಾರದೆ?]

Bengaluru: Kalagrama will witness traditional 'Veeragase'

ಕಾರ್ಯಕ್ರಮದ ರಂಗರೂಪಕ,ವಿನ್ಯಾಸ,ನಿರ್ದೇಶನದ ಜವಾಬ್ದಾರಿಯನ್ನು ಗೋಪಾಲಕೃಷ್ಣನಾಯರಿ ವಹಿಸಿಕೊಂಡಿದ್ದಾರೆ. ರಂಗ ವಿನ್ಯಾಶ ಶಂಕರ್ ಅವರದ್ದು. ದೊಂಬಿ ದಾಸರ ಜಾನಪದೀಯ ಪ್ರಖ್ಯಾತವಾದ ಕ್ರಿಯಾವಿಧಿ ಹಾಗೂ ಗಂಗೆ- ಗೌರಿ ಪ್ರಸಂಗ ಆಧರಿಸಿದ "ವೀರಗಾಸೆ-ನೀರ ಒಡಪು" ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ಪ್ರಸ್ತುತಪಡಿಸಲಿದ್ದಾರೆ.[ಚಿತ್ರ ಸಂತೆಯಲ್ಲೊಂದು ಸುತ್ತು]

ಇದೊಂದು ವಿನೂತನ ಬಗೆಯ ಕಾರ್ಯಕ್ರಮವಾಗಿದದ್ದು ಖಂಡಿತವಾಗಿ ಜನ ಮೆಚ್ಚುಗೆಗೆ ಪಾತ್ರವಾಗಲಿದೆ ಎಂದು ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಕೇಂದ್ರದ ನಿರ್ದೇಶಕ ಸಿ. ಬಸವಲಿಂಗಯ್ಯ ತಿಳಿಸಿದ್ದಾರೆ. 50 ರು. ಪ್ರವೇಶ ದರವನ್ನು ನಿಗದಿ ಮಾಡಲಾಗಿದೆ. ನೀವು ವೀರಗಾಸೆ ಕಾರ್ಯಕ್ರಮಕ್ಕೆ ಭೇಟಿ ನೀಡುತ್ತೀರಿ ತಾನೆ?

English summary
Bengaluru: Bengaluru university near Kalagrama will witness a historical event. 'Veeragase' one of the most famous traditional form of Karnataka will stage on January 10 and 11 at Kalagrama, Near Mysuru road, Bengaluru outskirts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X