ಬೆಂಗಳೂರು: ಈ 112 ಮರಗಳನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಿಮ್ಮ ಮೇಲಿದೆ

Subscribe to Oneindia Kannada

ಬೆಂಗಳೂರು, ಫೆಬ್ರವರಿ 8: ಬಸವೇಶ್ವರ ವೃತ್ತ ಮತ್ತು ಹೆಬ್ಬಾಳ ನಡುವಿನ ಸ್ಟೀಲ್ ಫ್ಲೈ ಓವರ್ ಗಾಗಿ ಧರೆಗುರುಳಲಿರುವ 112 ಮರಗಳನ್ನು ಉಳಿಸಿಕೊಳ್ಳಲು ಕೇವಲ 8 ದಿನಗಳಷ್ಟೆ ಬಾಕಿ ಉಳಿದಿವೆ.

ಈ ಹಿಂದೆ ಫ್ಲೈ ಓವರ್ ಗಾಗಿ 800 ಹಳೆಯ ಮರಗಳು ಧರೆಗುರುಳುವುದನ್ನು ವಿರೋಧಿಸಿ ಬೆಂಗಳೂರು ಜನತೆ ಬೃಹತ್ ಪ್ರತಿಭಟನೆಗಳನ್ನು ನಡೆಸಿದ್ದರು. ಆದರೆ ಇತ್ತೀಚೆಗೆ ಅಜೀಂ ಪ್ರೇಮ್ ಜೀ ವಿಶ್ವವಿದ್ಯಾಲಯದ ಅಧ್ಯಯನದಲ್ಲಿ ಹೊಸ ವಿಚಾರ ಬೆಳಕಿಗೆ ಬಂದಿತ್ತು. ಯೋಜನೆಯ ನೀಲನಕ್ಷೆ ಮಾಡುವಾಗ ಬಿಡಿಎ ಹೇಳಿದ್ದ 812 ರ ಬದಲಿಗೆ 2,244 ಮರಗಳು ಸ್ಟೀಲ್ ಫ್ಲೈ ಓವರ್ ಗಾಗಿ ಧರೆಗುರುಳಲಿವೆ ಎಂದು ಅಧ್ಯಯನ ಹೇಳಿತ್ತು. ಈ ಮರಗಳೆಲ್ಲಾ 60-80 ವರ್ಷ ಹಳೆಯದಾಗಿವೆ.[ಸ್ಟೀಲ್ ಫ್ಲೈ ಓವರ್ ವಿರುದ್ದದ ಪ್ರತಿಭಟನೆಗೆ ಆಮ್ ಆದ್ಮಿ ಪಾರ್ಟಿ ಬೆಂಬಲ]

Bengaluru: Just 8 Days Left To Save 112 Trees

ಮೊದಲಿಗೆ ಅರಮನೆ ಮೈದಾನದ ಮುಂಭಾಗದಲ್ಲಿರುವ ಜಯಮಹಲ್ ರಸ್ತೆಯಲ್ಲಿರುವ 112 ಮರಗಳನ್ನು ಕಡಿಯಲು ಬಿಬಿಎಂಪಿ ನಿರ್ಧರಿಸಿದೆ. ಇದಕ್ಕೆ ಆಕ್ಷೇಪಗಳೇನಾದರೂ ಇದ್ದರೆ ಸಲ್ಲಿಸಲು 10 ದಿನಗಳ ಸಮಯವನ್ನು ಬಿಬಿಎಂಪಿ ನೀಡಿದೆ. ಇದೀಗ ಎರಡು ದಿನ ಕಳೆದಿದ್ದು 8 ದಿನಗಳಷ್ಟೆ ಬಾಕಿ ಉಳಿದಿವೆ.

ತಮ್ಮ ಆಕ್ಷೇಪ ಮತ್ತು ದೂರುಗಳನ್ನು acfsubdivision1bbmp@gmail.com ಗೆ ಈ-ಮೇಲ್ ಮಾಡಬಹುದು. ಫೋನ್ ಮೂಲಕ ದೂರು ಸಲ್ಲಿಸುವವರು 9480685381 ಗೆ ದೂರುಗಳನ್ನು ಸಲ್ಲಿಸಬಹುದು. ಈ ಕುರಿತು ಚೇಂಜ್ ಡಾಟ್ ಆರ್ಗ್ ನಲ್ಲಿ ಬೆಂಗಳೂರು ನಿವಾಸಿ ಸ್ಟಾನ್ಲೇ ಪಿಂಟೋ ಪಿಟಿಷನ್ ಸಲ್ಲಿಸಿದ್ದಾರೆ. ಈಗಾಗಲೇ ಇದಕ್ಕೆ ನೂರಾರು ಜನ ಬೆಂಬಲ ಸೂಚಿಸಿದ್ದು ಮರಗಳನ್ನು ಉಳಿಸಿಕೊಳ್ಳಲಿ ಇನ್ನೂ ಒಂದಷ್ಟು ಜನ ಬೆಂಬಲ ಬೇಕಾಗಿದೆ.[ಸ್ಟೀಲ್ ಫ್ಲೈ ಓವರ್ ನಿಂದ ತೆರಿಗೆ ಹಣ ಲೂಟಿ : ಎಎಪಿ]

ಈಗಾಗಲೇ ಬಿಬಿಎಂಪಿಯ ರಸ್ತೆ ನಿರ್ಮಾಣ ವಿಭಾಗವು ಅರಣ್ಯ ವಿಭಾಗಕ್ಕೆ ಮರಗಳನ್ನು ತೆರವು ಮಾಡಲು ಅನುಮತಿ ನೀಡುವಂತೆ ಕೇಳಿಕೊಂಡಿದೆ. ಇದರ ಮಧ್ಯದಲ್ಲಿ ಜನರಿಗೆ ಆಕ್ಷೇಪಣೆಗಳಿದ್ದರೆ ಸಲ್ಲಿಸಲು ಹೇಳಿದೆ. ಏನಾಗುತ್ತದೋ ನೋಡಬೇಕು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The first phase of chopping 112 trees for proposed steel flyover between Basaveshwara Circle and Hebbal will begin on Jayamahal Road near Palace Grounds. And the BBMP has given citizens only 10 days to file their objections.
Please Wait while comments are loading...