ಅಪಘಾತದಲ್ಲಿ ಪಾದಚಾರಿಗಳು ಬಲಿಯಾಗುವುದೇ ಹೆಚ್ಚು: ನಿಮ್ಹಾನ್ಸ್ ವರದಿ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಮೇ 15: ರಸ್ತೆ ಅಪಘಾತಗಳಲ್ಲಿ ವಾಹನ ಚಾಲಕರು ಮತ್ತು ವಾಹನದ ಮುಂಭಾಗದಲ್ಲಿ ಕುಳಿತವರಿಗೇ ಏಟಾಗುವುದು ಜಾಸ್ತಿ ಎಂಬ ಭಾವನೆ ಹಲವರಲ್ಲಿದೆ. ಆದರೆ ಇಂಥ ಅಪಘಾತದಲ್ಲಿ ವಾಹನ ಚಾಲಕರು ಮತ್ತು ವಾಹನದಲ್ಲಿ ಪ್ರಯಾಣಿಸುತ್ತಿರುವವರಿಗಿಂತ ಪಾದಚಾರಿಗಳು ಬಲಿಯಾಗುವುದು ಹೆಚ್ಚು ಎಂದು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತ ನರ ವಿಜ್ಞಾನ ಸಂಸ್ಥೆ(NIMHANS) ಹೇಳಿದೆ.

ಅತೀ ವೇಗ, ಕಳಪೆ ರಸ್ತೆಗಳು, ಹೆಲ್ಮೇಟ್ ಇಲ್ಲದೆ ಪ್ರಯಾಣ, ಕುಡಿದು ವಾಹನ ಚಲಾವಣೆ ಮುಂತಾದ ಕಾರಣಗಳಿಂದ ಇಂದು ರಸ್ತೆ ಅಪಘಾತಗಳು ಹೆಚ್ಚಾಗಿದ್ದು, ಈ ಕಾರಣಕ್ಕಾಗಿಯೇ ಸಾಯುವವರ ಸಂಖ್ಯೆಯೂ ದಿನೇ ದಿನೇ ಹೆಚ್ಚಾಗುತ್ತಿದೆ. ರಸ್ತೆ ಅಪಘಾತದಲ್ಲಿ ಅಮಾಯಕ ದಾರಿಹೋಕರು ಬಲಿಯಾಗುತ್ತಿರುವ ಸಂಖ್ಯೆ ಇತ್ತೀಚೆಗೆ ಜಾಸ್ತಿಗಿದೆ.[ಕೆಎಸ್ಆರ್ಟಿಸಿ ಬಸ್ ಹರಿದು ಮೈಸೂರಿನಲ್ಲಿ ಎರಡು ಬಲಿ]

ಈ ಕುರಿತು ಇತ್ತೀಚೆಗೆ ವರದಿ ತಯಾರಿಸಿದ ಪ್ರೊ.ಗುರುರಾಜ್ ನೇತೃತ್ವದ ನಿಮ್ಹಾನ್ಸ್ ವೈದ್ಯರ ತಂಡ, ಬೆಂಗಳೂರಿನಲ್ಲಿ ನಡೆಯುವ ವಾಹನಾಪಘಾತಗಳಲ್ಲಿ ದಾರಿಹೋಕರು ಬಲಿಯಾಗುವುದೇ ಹೆಚ್ಚು ಎಂದಿದೆ.

ದಾರಿಹೋಕರೇ ಹೆಚ್ಚು

ದಾರಿಹೋಕರೇ ಹೆಚ್ಚು

ಬೆಂಗಳೂರಿನಲ್ಲಿ ನಡೆಯುವ ವಾಹನಾಪಘಾತದಲ್ಲಿ ಬಲಿಯಾಗುವ ಶೇ.52 ಜನರು ದಾರಿಹೋಕರು ಎಂದು ವರದಿ ಹೇಳಿದೆ. 16 ಮತ್ತು 45 ವಯಸ್ಸಿನ ದಾರಿಹೋಕರೇ ಹೆಚ್ಚಾಗಿ ಅಪಘಾತಕ್ಕೊಳಗಾಗುತ್ತಿದ್ದಾರೆ.

ರಸ್ತೆ ದಾಟುವಾಗಲೇ ಅವಘಡ

ರಸ್ತೆ ದಾಟುವಾಗಲೇ ಅವಘಡ

ರಸ್ತೆ ದಾಟುವ ಸಮಯದಲ್ಲೇ ಇಂಥ ಅವಘಡಗಳು ಸಂಭವಿಸುತ್ತಿದ್ದು, ಅಪಘಾತಕ್ಕೆ ಬಲಿಯಾಗುವವರ ಸಂಖ್ಯೆ ಶೇ.60. ಅವಸರದಲ್ಲಿ ರಸ್ತೆ ದಾಟುವುದು ಅಥವಾ ವಾಹನ ಚಾಲಕರ ನಿರ್ಲಕ್ಷ್ಯ ದಿಂದ ಇಂಥ ಅವಘಡಗಳು ನಡೆಯುತ್ತಿವೆ.[ಸುಂಟಿಕೊಪ್ಪ ಬಳಿ ಸ್ಕಾರ್ಪಿಯೋ ಡಿಕ್ಕಿಯಾಗಿ ಬಾಲಕ ಸಾವು]

ಕಾರಿನಿಂದ ಸಾಯುವ ದಾರಿಹೋಕರು ಶೇ.26

ಕಾರಿನಿಂದ ಸಾಯುವ ದಾರಿಹೋಕರು ಶೇ.26

ಶೇ.26 ರಷ್ಟು ಜನ ಕಾರಿನಿಂದ ಬಲಿಯಾದರೆ, ಶೇ. 22 ಜನ ಬೈಕ್, ಶೇ.18 ರಷ್ಟು ಜನ ಬಸ್ ಮತ್ತು ಇತರೆ ವಾಹನಗಳಿಂದ ಶೇ.36 ಜನರು ಬಲಿಯಾಗುತ್ತಿದ್ದಾರೆ ಎಂದು ವರದಿ ಹೇಳಿದೆ.

ಚಾಲಕರ ಮೊಬೈಲ್ ಪ್ರೇಮಕ್ಕೆ ದಾರಿಹೋಕರು ಬಲಿ?

ಚಾಲಕರ ಮೊಬೈಲ್ ಪ್ರೇಮಕ್ಕೆ ದಾರಿಹೋಕರು ಬಲಿ?

ಬೆಂಗಳೂರಿನಲ್ಲಿ ಶೇ. 83% ರಷ್ಟು ಚಾಲಕರು ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಸಿದೇ, ವಾಹನಾಪಘಾತಕ್ಕೆ ಮುಖ್ಯ ಕಾರಣ ಎನ್ನಿಸಿದೆ.[ಸಾಗರದಲ್ಲಿ ಭೀಕರ ಅಪಘಾತ: ಐವರ ದುರ್ಮರಣ]

ಮಕ್ಕಳು ಇಲ್ಲವೇ ಹಿರಿಯ ನಾಗರಿಕರು

ಮಕ್ಕಳು ಇಲ್ಲವೇ ಹಿರಿಯ ನಾಗರಿಕರು

ಬೆಂಗಳೂರಿನಲ್ಲಿ ಸಂಭವಿಸುವ ಅಪಘಾತದಲ್ಲಿ ಅಸುನೀಗುವ ಪ್ರತಿ ನಾಲ್ಕರಲ್ಲಿ ಒಬ್ಬರು ಹಿರಿಯನಾಗರಿಕರಾಗಿರುತ್ತಾರೆ, ಇಲ್ಲವೇ ಚಿಕ್ಕ ಮಕ್ಕಳಾಗಿರುತ್ತಾರೆ ಎಂಬ ಅಂಶವನ್ನೂ ವರದಿ ಹೊರಹಾಕಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Recent study conducted by the National Institute of Mental Health & Neuro Sciences (NIMHANS) has revealed that, pedestrians die the most in the road accidents in Bengaluru city.
Please Wait while comments are loading...