ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫೆಬ್ರವರಿಯಲ್ಲಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ

By Prithviraj
|
Google Oneindia Kannada News

ಬೆಂಗಳೂರು, ನವೆಂಬರ್, 8: 9ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವನ್ನು ಮುಂದಿನ ಫೆಬ್ರವರಿ 2017ರಲ್ಲಿ ಆಯೋಜಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಸಭೆಯಲ್ಲಿ 2017ರ ಚಲನಚಿತ್ರೋತ್ಸವದ ಅಧಿಕೃತ ಲಾಂಛನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಬಿಡುಗಡೆ ಮಾಡಿದರು. ಫೆಬ್ರವರಿ 2ರಿಂದ 9ರವರೆಗೆ ಚಿತ್ರೋತ್ಸವ ನಡೆಯಲಿದೆ.

ಬೆಂಗಳೂರಿನ ಕೇಂದ್ರ ಭಾಗದಲ್ಲಿರುವ ವಿವಿಧ ತೆರೆಗಳ ಸಿನಿಮಾ ಸಂಕೀರ್ಣ (ಮಲ್ಟಿಫ್ಲೆಕ್ಸ್) ದಲ್ಲಿ ಚಿತ್ರಗಳನ್ನು ಪ್ರದರ್ಶಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.

Bengaluru International 9th film festival held on Feb 2017

ವಾಣಿಜ್ಯ ಉದ್ದೇಶವಿಲ್ಲದೆ ನಿರ್ಮಿಸಿದ ವಿಶ್ವದ ಅತ್ಯುತ್ತಮ ಚಲನಚಿತ್ರಗಳನ್ನು ನೋಡಲು ಅವಕಾಶ ಕಲ್ಪಿಸುವುದು ಮತ್ತು ವಿವಿಧ ದೇಶಗಳಲ್ಲಿನ ಕಲಾತ್ಮಕ ಪ್ರತಿಭೆಗಳ ಪರಿಚಯ ಮಾಡಿಕೊಡುವುದು ಚಿತ್ರೋತ್ಸವದ ಉದ್ದೇಶವಾಗಿದೆ.

ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ಸಹಯೋಗದಲ್ಲಿ ಚಲನಚಿತ್ರೋತ್ಸವವನ್ನು ಏರ್ಪಡಿಸಲಾಗುತ್ತಿದೆ.

ಚಿತ್ರೋತ್ಸವದಲ್ಲಿ ಪ್ರದರ್ಶನವಾಗುವು ಚಲನಚಿತ್ರಗಳಿಗೆ ಅತ್ಯುತ್ತಮ ಭಾರತೀಯ ಚಿತ್ರ, ಅತ್ಯುತ್ತಮ ಕನ್ನಡಚಿತ್ರ, ಅತ್ಯುತ್ತಮ ಏಷ್ಯಾ ಚಿತ್ರ ಎಂದು ಪ್ರಶಸ್ತಿ ನೀಡಲಾಗುತ್ತದೆ.

ಬೆಂಗಳೂರಿನಲ್ಲಿ ಫೆಬ್ರರಿ 2, 2017ರಂದು ಚಲನಚಿತ್ರೋತ್ಸವ ಸಮಾರಂಭ ಉದ್ಘಾಟನೆಯಾಗಲಿದ್ದು, ಫೆಬ್ರವರಿ 9ರಂದು ಮೈಸೂರಿನಲ್ಲಿ ಸಮಾರೋಪ ಸಮಾರಂಭ ನೆರವೇರಲಿದೆ.

ಸಭೆಯಲ್ಲಿ ಮಖ್ಯಮಂತ್ರಿ ಸಿದ್ದರಾಮಯ್ಯ, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಎನ್.ಆರ್. ವಿಶುಕುಮಾರ್ ಉಪಸ್ಥಿತರಿದ್ದರು.

English summary
Bengaluru international 9th film festival will be held february 2017, Chief Minister Siddaramaiah unveils the logo for Bengaluru International Film Festival. BIFF which will be held from Feb 2-9, 2017
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X