ಇಂದಿರಾ ಕ್ಯಾಂಟೀನ್ ಕುರಿತು ಟ್ವಿಟ್ಟಿಗರು ಏನಂತಾರೆ?

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 16: ಕರ್ನಾಟಕ ಸರ್ಕಾರದ ಬಹುನಿರೀಕ್ಷಿತ ಇಂದಿರಾ ಕ್ಯಾಂಟೀನ್ ಗೆ ಇಂದು (ಆಗಸ್ಟ್ 16) ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಚಾಲನೆ ನೀಡಿದರು.

ಬಡವರಿಗೆ ಅಗ್ಗದ ದರದಲ್ಲಿ ಊಟ ನೀಡುವ ಈ ಯೋಜನೆಯನ್ನು ಜಯನಗರದ ಕನಕನಪಾಳ್ಯದಲ್ಲಿ ಉದ್ಘಾಟಿಸಿದ ರಾಹುಲ್ ಗಾಂಧಿ, 'ಬೆಂಗಳೂರಿಗರ್ಯಾರೂ ಊಟವಿಲ್ಲದ ಪರಿಸ್ಥಿತಿಯಲ್ಲಿ ಬದುಕಬಾರದು ಎಂಬ ಕಾರಣಕ್ಕಾಗಿ ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಜಾರಿಗೆ ತರಲಾಗಿದೆ. ಭಾರತೀಯರೆಲ್ಲರಿಗೂ ವಸತಿ, ಆಹಾರ ಮತ್ತು ಬಟ್ಟೆ ದೊರಕುವಂತಾಗಬೇಕು ಎಂಬ ಶ್ರೀಮತಿ ಇಂದಿರಾ ಗಾಂಧಿಯರ ಇಚ್ಛೆಯನ್ನು ಕಾರ್ಯರೂಪಕ್ಕೆ ತರುವ ಕಿರುಪ್ರಯತ್ನ ಇದು' ಎಂದರು.

ಇಂದಿರಾ ಕ್ಯಾಂಟೀನ್‌ನಲ್ಲಿ ಅನ್ನ, ಸಾಂಬಾರ್ ಸವಿದ ರಾಹುಲ್

ಇಂದು 101 ಕ್ಯಾಂಟೀನ್ ಗಳು ಉದ್ಘಾಟನೆಗೊಂಡಿದ್ದು, ಬಡವರು ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

ಬಡವರ ಬಗೆಗಿನ ನೈಜ ಕಾಳಜಿಗೋ ಅಥವಾ 2018 ರ ಕರ್ನಾಟಕ ವಿಧಾನಸಭಾ ಚುನಾವಣೆಗಾಗಿ ಜನರನ್ನು ಸೆಳೆಯುವು ಉದ್ದೇಶದಿಂದಲೋ ನಿರ್ಮಾಣಗೊಂಡ ಇಂದಿರಾ ಕ್ಯಾಂಟೀನ್ ಟ್ವಿಟ್ಟರ್ ನಲ್ಲೂ ಟ್ರೆಂಡ್ ಆಗಿದ್ದು, ಕ್ಯಾಂಟೀನ್ ಕುರಿತು ಟ್ವಿಟ್ಟರ್ ನಲ್ಲಿ ಹಲವರು ತಮ್ಮ ಪರ-ವಿರೋಧ ಭಾವವನ್ನು ವ್ಯಕ್ತಪಡಿಸಿದ್ದಾರೆ.

ಪೌಷ್ಟಿಕ ಮತ್ತು ಕೈಗೆಟಕುವ ದರದ ತಿಂಡಿ,

ಪೌಷ್ಟಿಕ ಮತ್ತು ಕೈಗೆಟಕುವ ದರದ ತಿಂಡಿ, ಊಟವನ್ನು ಇಂದಿರಾ ಕ್ಯಾಂಟೀನ್ ಖಚಿತಪಡಿಸಿದೆ. ನಮ್ಮ ಬೆಂಗಳೂರಿನಲ್ಲಿರುವ ಯಾರೊಬ್ಬರೂ ಹಸಿವಿನಿಂದ ಹಾಸಗೆ ಹಿಡಿಯುವಂತಾಗಬಾರದು ಎಂಬುದು ನಮ್ಮ ಉದ್ದೇಶ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಸಾರ್ವಜನಿಕ ದುಡ್ಡು!

ಸಾರ್ವಜನಿಕ ಹಣ ಬರಿದಾಗುತ್ತಿದೆ. ಇಂದಿರಾ ಕ್ಯಾಂಟೀನ್ ನಲ್ಲಿ ಮೊದಲ ದಿನ ಉಚಿತ ಊಟ ನೀಡಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಅಷ್ಟಕ್ಕೂ ಉಚಿತವಾಗಿ ಕೊಡುತ್ತೇವೆ ಎನ್ನುವುದಕ್ಕೆ ಅದು ಯಾರ ದುಡ್ಡು? ಇದಕ್ಕೆ ಯಾರು ಹೊಣೆಗಾರರು? ಅಷ್ಟಕ್ಕೂ ಬಿಜೆಪಿ ಎಲ್ಲಿಗೆ ಹೋಗಿದೆ ಈಗ?! ಎಂದು ರೋಹಿತ್ ಚಕ್ರತೀರ್ಥ ಅವರು ಟ್ವೀಟ್ ಮಾಡಿದ್ದಾರೆ.

ಹಸಿವಿನ ನಿರ್ಮೂಲನೆಯತ್ತ ಹೆಜ್ಜೆ

ಇಂದಿರಾ ಕ್ಯಾಂಟೀನ್ ನಿರ್ಮಾಣದೊಂದಿಗೆ ಸರ್ಕಾರ ಹಸಿವು ಮುಕ್ತ ಕರ್ನಾಟಕಕ್ಕೆ ಮುನ್ನುಡಿ ಬರೆದಿದೆ. ನಿಮಗೆ ಹತ್ತಿರದ ಇಂದಿರಾ ಕ್ಯಾಂಟೀನ್ ಬಗ್ಗೆ ತಿಳಿದುಕೊಳ್ಳಲು ಇಂದಿರಾ ಕ್ಯಾಂಟೀನ್ ಆಪ್ ಬಳಸಿ ಎಂದು ಸಚಿವ ಕೆ.ಜೆ.ಜಾರ್ಜ್ ಟ್ವೀಟ್ ಮಾಡಿದ್ದಾರೆ.

ಅಭೂತಪೂರ್ವ ಯೋಜನೆ

ಕರ್ನಾಟಕ ಸರ್ಕಾರದ ಇಂದಿರಾ ಕ್ಯಾಂಟೀನ್ ಯೋಜನೆ ನಿಜಕ್ಕೂ ಅಭೂತಪೂರ್ವ ಯೋಜನೆ. ಇದು ಎಲ್ಲಾ ರಾಜ್ಯಗಳಲ್ಲೂ ಆರಂಭವಾಗಲಿ ಎಂದು ಹಸಿಬಾ ಎನ್ನುವವರು ಟ್ವೀಟ್ ಮಾಡಿದ್ದಾರೆ.

ಹಗರಣವಾಗದಿರಲಿ

ಕರ್ನಾಟಕ ಸರ್ಕಾರ ಆರಂಭಿಸಿದ ಇಂದೀರಾ ಕ್ಯಾಂಟೀನ್ ಯೋಜನೆ ಶ್ಲಾಘನೀಯ. ದಯವಿಟ್ಟು ಇದೂ ಒಂದು ಹಗರಣವಾಗದಂತೆ ನೋಡಿಕೊಳ್ಳಿ ಎಂದು ತೆಹಸೀನ್ ಪುನಾವಾಲಾ ಟ್ವೀಟ್ ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Indira canteen has launched in Bengaluru on Aug 16th by Congress vice president Rahul Gandhi. Here are some twitter statements related to inauguration of Indira canteen.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ