ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಕಾಫಿ ಹಬ್ಬ : ಪ್ರಿಯಾಂಕ್ ಖರ್ಗೆ

By Mahesh
|
Google Oneindia Kannada News

ಬೆಂಗಳೂರು, ಡಿಸೆಂಬರ್ 22: ವಿಶ್ವ ಮಾರುಕಟ್ಟೆಯಲ್ಲಿ ಭಾರತೀಯ ಕಾಫಿ ತನ್ನದೇ ಆದ ವೈಶಿಷ್ಟ್ಯತೆ ಹೊಂದಿದೆ. ಕಾಫಿಯ ವೈವಿಧ್ಯತೆ ಪರಿಚಯಿಸಲು ಸರ್ಕಾರಿ ಸ್ವಾಮ್ಯದ ಕಾಫಿ ಬೋರ್ಡ್ ನಿಂದ ಅಂತಾರಾಷ್ಟ್ರೀಯ ಕಾಫಿ ಹಬ್ಬ(ಐಐಸಿಎಫ್) ಆಚರಿಸಲಾಗುತ್ತಿದೆ.

ಕಾಫಿ ಬೋರ್ಡಿಗೆ ಅಧ್ಯಕ್ಷನಾದ ಬೆಳೆಗಾರ: ಸಂಸದೆ ಶೋಭಾ ಸಂತಸಕಾಫಿ ಬೋರ್ಡಿಗೆ ಅಧ್ಯಕ್ಷನಾದ ಬೆಳೆಗಾರ: ಸಂಸದೆ ಶೋಭಾ ಸಂತಸ

ಜನವರಿ 16 ರಿಂದ 19ರ ತನಕ ನಾಲ್ಕು ದಿನಗಳ ಕಾಲ ನಡೆಯಲಿರುವ ಈ ಹಬ್ಬದಲ್ಲಿ 100 ಕಂಪನಿಗಳು, 600ಕ್ಕೂ ಅಧಿಕ ಪ್ರತಿನಿಧಿಗಳು ಹಾಗೂ 10 ಸಾವಿರಕ್ಕೂ ಅಧಿಕ ಜನ ಭೇಟಿ ಕೊಡುವ ನಿರೀಕ್ಷೆಯಿದೆ ಎಂದು ಐಟಿ ಬಿಟಿ ಹಾಗೂ ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿದರು.

Bengaluru to host 7th international coffee fest : Priyank Kharge

ಕಾಫಿ ತಯಾರಿಸುವ ಬಗ್ಗೆ ಮಾಹಿತಿ ನೀಡುವುದು ಹಾಗೂ ಕಾಫಿ ಉದ್ಯಮದ ಮುಂದಿನ ಬೆಳವಣಿಗೆ ಬಗ್ಗೆ ಚರ್ಚಿಸಲಾಗುವುದು, ಕೊಡಗು, ಚಿಕ್ಕಮಗಳೂರು ಹಾಗೂ ಸಕಲೇಶಪುರವನ್ನು ಕಾಫಿ ಬೆಳೆಯುವ ಸ್ಥಳಗಳಾಗಿ ಮಾತ್ರ ಪರಿಚಯಿಸದೆ ಪ್ರವಾಸೋದ್ಯಮ ತಾಣಗಳಾಗಿ ಪರಿಚಯಿಸಲಾಗುತ್ತದೆ ಎಂದರು.

ಜಮ್ಮು-ಕಾಶ್ಮೀರದ ಸೈನಿಕರು ಕೂಡ ಕಾಫಿ ಕುಡಿಯುವಂತಾಗ ಬೇಕು. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಕಾಫಿ ತಲುಪಬೇಕು. ಮೋದಿ ಅವರ ಆಶಯದಂತೆ ಕಾಫಿ ರಫ್ತು ದ್ವಿಗುಣಗೊಳಿಸಲು ಶ್ರಮಿಸಲಾಗುವುದು. ಸದ್ಯ 3 ಲಕ್ಷ ಟನ್ ಇರುವ ಉತ್ಪಾದನೆಯನ್ನು 6 ಲಕ್ಷ ಟನ್ ಗೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕಾಫಿ ಬೊರ್ಡ್ ಅಧ್ಯಕ್ಷ ಬೋಜೇಗೌಡ ಹೇಳಿದ್ದಾರೆ.

ಕಾಫಿ ಸೇವನೆ ಹೆಚ್ಚಳ ಮಾಡುವುದು, ಕಾಫಿ ಪುಡಿ -ಚಕೋರಿ ಬಗ್ಗೆ ಇರುವ ಗೊಂದಲ ಪರಿಹರಿಸುವುದು, ಬರದ ಪರಿಸ್ಥಿತಿಯಲ್ಲಿ ಕಾಫಿ ಬೆಳೆಗಾರರ ಪರಿಸ್ಥಿತಿ ಅವಲೋಕನ ಸೇರಿದಂತೆ ಬೆಳೆಗಾರರ ಅನೇಕ ಸಮಸ್ಯೆಗಳನ್ನು ಬಗೆ ಹರಿಸಲು ಕಾಫಿ ಬೋರ್ಡ್ ಶ್ರಮಿಸುತ್ತಿದೆ.

English summary
The seventh edition of the India International Coffee Festival (IICF) will be held in Bengaluru from January 16-19. The four-day IICF 2018, being organised by the India Coffee Trust and State-run Coffee Board said Minister Priyank Kharge.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X