ಪುರುಷರನ್ನು ಮಂಚಕ್ಕೆ ಕರೆದು ಹನಿಟ್ರ್ಯಾಪ್ ಮಾಡುತ್ತಿದ್ದ ಖತರ್ನಾಕ್ ಜೋಡಿ ಬಲೆಗೆ

Posted By: Nayana
Subscribe to Oneindia Kannada

ಬೆಂಗಳೂರು, ಫೆಬ್ರವರಿ10 : ಬೆಂಗಳೂರಿನಲ್ಲಿ ಮತ್ತೊಂದು ಹನಿ ಟ್ರ್ಯಾಪ್ ಪ್ರಕರಣ ಬೆಳಕಿಗೆ ಬಂದಿದೆ. ರಾಜೇಂದ್ರ ಹೆಗ್ಡೆ ಎಂಬುವರ ಬಳಿ 8 ಲಕ್ಷ ಹಣ ವಸೂಲಿ ಮಾಡಿದ ವ್ಯಕ್ತಿಯನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ಧಾರೆ. ಬಂಧಿತ ಮಂಜುನಾಥ್ ಎಂದು ಗುರುತಿಸಲಾಗಿದೆ.

ರಾಜೇಂದ್ರ ಹೆಗ್ಡೆ ಜೊತೆಗೆ ಆಯೇಷಾ ದೈಹಿಕ ಸಂಪರ್ಕ ಹೊಂದಿದ್ದಳು ಎನ್ನಲಾಗಿದ್ದು, ರಾಜೇಂದ್ರ ಹೆಗ್ಡೆ ಹಾಗೂ ಆಯೇಷಾ ಜೊತೆಗಿರುವ ವಿಡಿಯೋ ಮಾಡಿದ್ದ ಮಂಜುನಾಥ್. ಹಣ ಕೊಡದಿದ್ದರೆ ತನ್ನ ಪತ್ನಿಯ ಜೊತೆ ಇರುವ ವಿಡಿಯೋ ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಬ್ಲಾಕ್ ಮೇಲ್ ಮಾಡಿ 8 ಲಕ್ಷ ಹಣ ವಸೂಲಿ ಮಾಡಿದ್ದ ಅರೋಪಿ. ಮತ್ತೊಮ್ಮೆ 8 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ.

ಆರೋಪಿ ಮಂಜುನಾಥ್ ಹೆಬ್ಬಾಳ ಪ್ಲೈ ಓವರ್ ಬಳಿ ಬಂದು ಹಣ ನೀಡುವಂತೆ ರಾಜೇಂದ್ರ ಹೆಗ್ಡೆಗೆ ತಿಳಿಸಿದ್ದ. ಈ ವೇಳೆ ಪೊಲೀಸರಿಗೆ ದೂರು ನೀಡಿದ ರಾಜೇಂದ್ರ ಹೆಗ್ಡೆ, ಪೊಲೀಸರ ಜೊತೆ ತೆರಳಿ ಹೆಬ್ಬಾಳ ಪ್ಲೈಓವರ್ ಬಳಿ ಬಂದಿದ್ದ ಅರೋಪಿ ಮಂಜುನಾಥನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

Bengaluru: Honey-trapped men arrested

ಮಿಸ್ ಕಾಲ್‌ ಕೊಟ್ಟು ಉದ್ಯಮಿಗಳನ್ನು ಸೆಳೆಯುತ್ತಿದ್ದ ಆಯಿಷಾ, ಉದ್ಯಮಿಗಳು ವಾಪಸ್ ಕರೆ ಮಾಡಿದಾಗ ನಯವಾಗಿ ಮಾತನಾಡಿ ಬುಟ್ಟಿಗೆ ಹಾಕಿಕೊಳ್ಳುತ್ತಿದ್ದಳು . ಚೆನ್ನಾಗಿ‌ ಪರಿಚಯ ಮಾಡಿಕೊಂಡು ಆಟ ಶುರು ಮಾಡುತ್ತಿದ್ದಳು. ಸುಮಾರು 19 ಜನರಿಗೆ ಈ ರೀತಿ ವಂಚಿಸಿರುವುದರ ಬಗ್ಗೆ ತನಿಖೆ ವೇಳೆ ಮಂಜುನಾಥ್ ಬಾಯ್ಬಿಟ್ಟಿದ್ದಾನೆ. ಪರಾರಿಯಾಗಿರುವ ಆಯಿಷಾಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Amruthahalli police have arrested men in honey trap case, woman absconding, Accused identified as Manjunath who were demanded Rs.80 thousand from Rajendra Hegde who alleged had sexual relationship with Ayesha.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ