ಅನಧಿಕೃತ ಬೆಂಗಳೂರು ಕಟ್ಟಡಗಳ ಢಮಾರಿಗೆ ಕೋರ್ಟ್ ಸೂಚನೆ

Subscribe to Oneindia Kannada

ಬೆಂಗಳೂರು, ಫೆಬ್ರವರಿ , 16: ಬೆಂಗಳೂರಿನ ಹುಳಿಮಾವಿನ ಅರಕೆರೆಯ ಬಿಡಿಎ ಬಡಾವಣೆಯಲ್ಲಿ ನಿರ್ಮಿಸಿರುವ 18 ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಲು ಹೈಕೋರ್ಟ್ ಸೂಚನೆ ನೀಡಿದೆ.

ಬಿಡಿಎ ನಿರ್ಮಿಸಿದ 45 ಎಕರೆ ವಿಸ್ತಾರದ ಜಾಗದಲ್ಲಿ ನಾಗರಿಕ ಸೌಲಭ್ಯ (ಸಿಎ)ಕ್ಕಾಗಿ ಮೀಸಲಿಟ್ಟಿದ್ದ 18 ನಿವೇಶನಗಳಲ್ಲಿ ಕಟ್ಟಡಗಳು ತಲೆ ಎತ್ತಿದ್ದು ಇವಕ್ಕೆ ಮಾನ್ಯತೆ ಇಲ್ಲ. ಇದನ್ನು ಪ್ರಶ್ನಿಸಿ ಶಾಂತಿನಿಕೇತನ ನಿವಾಸಿಗಳ ಸಂಘ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ವಿಭಾಗೀಯ ಪೀಠ ಅಕ್ರಮ ಕಟ್ಟಡಗಳನ್ನು ಕೂಡಲೇ ತೆರವು ಮಾಡಲು ಸೂಚನೆ ನೀಡಿದೆ.[ಬೆಂಗಳೂರು ನಗರಕ್ಕೊಂದು 10 ಪಥದ ರಸ್ತೆ]

Bengaluru: High Court Orders to clear 18 unauthorised buildings

ಬಿಬಿಎಂಪಿ ಅಧಿಕಾರಿಗಳು ಸಹಕಾರ ನೀಡದೇ ಇಷ್ಟೊಂದು ಕಟ್ಟಡಗಳು ಅಕ್ರಮವಾಗಿ ತಲೆ ಎತ್ತಲು ಹೇಗೆ ಸಾಧ್ಯ? ಬೆಂಗಳೂರು ಬೃಹತ್ ಮಹಾನಗರ ಪಾಲಿಕೆಗೆ ಇದು ಕಂಡಿಲ್ಲವೇ? ನಾಗರಿಕರ ಬಳಕೆಗೆ ಮೀಸಲಿಟ್ಟ ಜಾಗದಲ್ಲಿ ಅಕ್ರಮ ಕಟ್ಟಡ ತಲೆ ಎತ್ತಿದೆ ಎಂದು ಸಂಘ ದೂರು ನೀಡಿತ್ತು,[ಬೆಂಗಳೂರಲ್ಲಿ 25 ಸ್ಕೈವಾಕ್ ನಿರ್ಮಾಣ, ಎಲ್ಲೆಲ್ಲಿ?]

ಅಕ್ರಮ ಕಟ್ಟಡಕ್ಕೆ ನೋಟಿಸ್
ಜೆ.ಪಿ.ನಗರದ ಪುಟ್ಟೇನಹಳ್ಳಿಯಲ್ಲಿನ ಖಾಸಗಿ ಕಟ್ಟಡಕ್ಕೂ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ಇಲ್ಲಿಯೂ ಸಹ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿದ್ದು ಸಕಲ ಮಾಹಿತಿ ಕಲೆಹಾಕಿ ವರದಿ ನೀಡುವಂತೆ ಹೈ ಕೋರ್ಟ್ ಬಿಬಿಎಂಪಿಗೆ ತಿಳಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka High Court orders demolition of 18 unauthorized buildings in Hulimaavu and Arakere localities. The buildings constructed in plots meant for Civic amenities by BDA, the Bengaluru development authority.
Please Wait while comments are loading...