ಹೆಲ್ಮೆಟ್ ಕಡ್ಡಾಯ: ಬೆಂಗಳೂರಿಗರಿಗೆ ಜನವರಿ 20 ಅಂತಿಮ ಗಡುವು

Subscribe to Oneindia Kannada

ಬೆಂಗಳೂರು, ಜನವರಿ, 12: ಈಗ ಎಲ್ಲ ಕಡೆ ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯದ್ದೇ ಮಾತು. ಹೆಲ್ಮೆಟ್ ಕಡ್ಡಾಯ ನೀತಿ ಜನವರಿ 12 ರಿಂದಲೇ ರಾಜ್ಯದ ಎಲ್ಲ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜಾರಿಗೆ ಬಂದಿದೆ. ಪೊಲೀಸ್ ಇಲಾಖೆ ಕೊಂಚ ಸಡಿಲತೆ ತೋರಿಸಿದ್ದು ಜನವರಿ 20ರ ವರೆಗೆ ಕಾಲಾವಕಾಶ ನೀಡಿದೆ.

"ಜನವರಿ 20 ರ ನಂತರವೂ ಹೆಲ್ಮೆಟ್ ಧರಿಸದಿದ್ದಲ್ಲಿ ದಂಡ ವಿಧಿಸಲಾಗುತ್ತದೆ. 12 ವರ್ಷದ ಮೇಲಿನ ಮಕ್ಕಳಿಗೂ ಹೆಲ್ಮೆಟ್ ಕಡ್ಡಾಯ. ಇದು ಹೇರಿಕೆಯ ಕಾನೂನಲ್ಲ. ಜನರ ಪ್ರಾಣ ರಕ್ಷಣೆಗೆ ಮಾಡಿಕೊಳ್ಳಬೇಕಾದ ಸ್ವಯಂ ತಂತ್ರ" ಎಂದು ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್‌ ಆಯುಕ್ತ (ಸಂಚಾರ ಮತ್ತು ಭದ್ರತೆ) ಡಾ.ಎಂ.ಎ.ಸಲೀಂ ಸ್ಪಷ್ಟಪಡಿಸಿದರು.[ಥತ್ತೇರಿಕೆ ... ಹುಡುಗಿ ಡ್ರಾಪ್ ಕೇಳಿದ್ರೂ ಕೊಡಂಗಿಲ್ಲ!]

ಬೆಂಗಳೂರು ಜಯನಗರದ ಸಾಗರ್ ಆಸ್ಪತ್ರೆ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಸಲೀಂ ಮಾತನಾಡಿ, "ಬೆಂಗಳೂರು ನಾಗರಿಕರಿಗೆ ಕಾನೂನು ಪರಿಪಾಲನೆ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಕಾಯ್ದೆ ಸಮರ್ಪಕ ಅನುಷ್ಠಾನವಾಗಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು. ಟ್ರಾಫಿಕ್ ನಿಯಂತ್ರಣ, ರಸ್ತೆ ಸುರಕ್ಷತೆ ಮತ್ತು ಹೆಲ್ಮೆಟ್ ಯಾಕೆ ಧರಿಸಬೇಕು ಎಂಬ ವಿಚಾರಗಳನ್ನು ಮುಂದೆ ಇಟ್ಟರು. ಸಾಗರ್ ಆಸ್ಪತ್ರೆಯ ನ್ಯೂರೋ ಸರ್ಜನ್ ಡಾ. ಮಧುಸೂದನ್ ಹೆಲ್ಮೆಟ್ ಬಳಕೆ ಅಗತ್ಯದ ಬಗ್ಗೆ ವಿವರಣೆ ನೀಡಿದರು.[ಹೆಲ್ಮೆಟ್ ರೂಲಿಗೆ 'ಠೇಂಗಾ' ಅಂದ ಹಿಂಬದಿ ಸವಾರ!]

ಬೆಂಗಳೂರಿಗರೇ ಅದೃಷ್ಟವಂತರು!

ಬೆಂಗಳೂರಿಗರೇ ಅದೃಷ್ಟವಂತರು!

ನವದೆಹಲಿ, ಮುಂಬೈ, ಜೈಪುರದಂಥ ನಗರಗಳಲ್ಲಿ ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಮಾಡಿ ಅನೇಕ ವರ್ಷಗಳೇ ಕಳೆದು ಹೋಗಿವೆ. ದೇಶದ ಉಳಿದ ನಗರಗಳಿಗೆ ಹೋಲಿಸಿದರೆ ಬೆಂಗಳೂರ ವಾತಾವರಣ ಚೆನ್ನಾಗಿದೆ. ಸೆಕೆ ಎಂಬ ಮತ್ತಿತರ ಕಾರಣ ನೀಡುವುದು ಸಮಂಜಸವಲ್ಲ ಎಂದು ಸಲೀಂ ಹೇಳಿದರು.

ಹಿಂಬದಿ ಸವಾರಿಗೆ ಎಚ್ಚರ ಕಡಿಮೆ

ಹಿಂಬದಿ ಸವಾರಿಗೆ ಎಚ್ಚರ ಕಡಿಮೆ

ವಾಹನ ಚಲಾಯಿಸುತ್ತಿರುವವರಿಗೆ ಮುಂದೆ ಏನಾಗುತ್ತಿದೆ? ವಾಹನವನ್ನು ಯಾವ ಕಡೆ ಚಲಾಯಿಸಬೇಕು? ಎಂಬುದರ ಅರಿವಿರುತ್ತದೆ. ಅಪಾಯ ಎದುರಾದಾಗ ಪ್ರತಿಕ್ರಿಯಿಸಲು ಕೊಂಚ ಸಮಯಾವಕಾಶ ದೊರೆಯುತ್ತದೆ. ಆದರೆ ಹಿಂಬದಿ ಸವಾರರಿಗೆ ಇದಾವುದರ ಅರಿವಿರಲ್ಲ. ಹಾಗಾಗಿ ಅವರು ಹೆಲ್ಮೆಟ್ ಧರಿಸಬೇಕು.

12 ವರ್ಷ ಮೇಲ್ಪಟ್ಟ ಮಕ್ಕಳಿಗೂ ಕಡ್ಡಾಯ

12 ವರ್ಷ ಮೇಲ್ಪಟ್ಟ ಮಕ್ಕಳಿಗೂ ಕಡ್ಡಾಯ

12 ವರ್ಷ ಮೇಲ್ಪಟ್ಟ ಮಕ್ಕಳು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಇದರಲ್ಲಿ ಯಾವ ಹೊಂದಾಣಿಕೆ ಇಲ್ಲ. ನಾವು ಜನವರಿ 20 ರಿಂದ ಕಟ್ಟುನಿಟ್ಟಿನ ಕಾರ್ಯಾಚರಣೆ ನಡೆಸಲಿದ್ದೇವೆ ಎಂದು ಸಲೀಂ ತಿಳಿಸಿದರು.

ಜಾಗೃತಿ ಕಾರ್ಯಕ್ಕೆ ಕೈ ಜೋಡಿಸುತ್ತೇವೆ

ಜಾಗೃತಿ ಕಾರ್ಯಕ್ಕೆ ಕೈ ಜೋಡಿಸುತ್ತೇವೆ

ಬೆಂಗಳೂರು ಟ್ರಾಫಿಕ್ ಪೊಲೀಸರೊಂದಿಗೆ ನಾವು ಸದಾ ಸಂಪರ್ಕದಲ್ಲಿದ್ದೇವೆ. ಅವರು ಹಮ್ಮಿಕೊಂಡಿರುವ ರಸ್ತೆ ಸುರಕ್ಷಾ ಅಭಿಯಾನ ಮತ್ತು ಜಾಗೃತಿ ಕಾರ್ಯಕ್ರಮಗಳಿಗೆ ಆಸ್ಪತ್ರೆ ಕೈಜೋಡಿಸುತ್ತದೆ ಎಂದು ಸಾಗರ್ ಆಸ್ಪತ್ರೆಯ ಮುಖ್ಯ ನ್ಯೂರೋ ಸರ್ಜನ್ ಡಾ. ಮಧುಸೂದನ್ ಹೇಳಿದರು.

ಮಹಾನಗರ ಪಾಲಿಕೆಗಳು ಯಾವವು?

ಮಹಾನಗರ ಪಾಲಿಕೆಗಳು ಯಾವವು?

ಬೆಂಗಳೂರು, ಮೈಸೂರು, ಮಂಗಳೂರು, ತುಮಕೂರು, ದಾವಣಗೆರೆ, ಶಿವಮೊಗ್ಗ, ಹುಬ್ಬಳ್ಳಿ-ಧಾರವಾಢ, ಬೆಳಗಾವಿ, ಕಲಬುರಗಿ, ಬಳ್ಳಾರಿ ಮತ್ತು ವಿಜಯಪುರದಲ್ಲಿ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ಮಾಡಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The rule making helmets mandatory for pillion riders comes into force from January 12. Bengaluru traffic police will not penalise violators till January 20, Additional Commissioner of Police (Traffic) M.A. Saleem told at the press conference conducted by top neuro surgeons, at Sagar Hospitals, Jayanagar.
Please Wait while comments are loading...