ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೆಲಿ ಟ್ಯಾಕ್ಸಿಯಲ್ಲಿ ತೆರಳಬೇಕೆ? ಹಾಗಾದರೆ ಬುಕಿಂಗ್ ಹೇಗೆ?

|
Google Oneindia Kannada News

ಬೆಂಗಳೂರು, ಫೆಬ್ರವರಿ 22: ಬೆಂಗಳೂರಿನ ಬಹುನಿರೀಕ್ಷಿತ ಹೆಲಿ ಟ್ಯಾಕ್ಸಿ ಸೇವೆ ಆರಂಭಗೊಳ್ಳಲು ಕ್ಷಣಗಣನೆ ಆರಂಭಗೊಂಡಿದ್ದು ಮುಂದಿನ ವಾರದಲ್ಲಿ ಹೆಲಿ ಟ್ಯಾಕ್ಸಿ ಸೇವೆ ಲೋಕಾರ್ಪಣೆಗೊಳ್ಳಲಿದೆ.

ಥಂಬಿ ಏವಿಯೇಷನ್ ಕಂಪನಿ ಹೆಲಿ ಟ್ಯಾಕ್ಸಿ ಸೇವೆಯನ್ನು ಆರಂಭಿಸಲಿದ್ದು ಈಗಾಗಲೇ ಎರಡು ಬೆಲ್ 407ಎಎಲ್ ವಿಮಾನ ನಿಲ್ದಾಣಕ್ಕೆ ಎಲೆಕ್ಟ್ರಾನಿಕ್ ಸಿಟಿಯಿಂದ ಸೇವೆಯನ್ನು ಒದಗಿಸಲಾಗುತ್ತದೆ.

ಫೆಬ್ರವರಿ ಅಂತ್ಯದಲ್ಲಿ ಹೆಲಿಕಾಪ್ಟರ್ ಟ್ಯಾಕ್ಸಿ ಹಾರಾಟ ಆರಂಭಫೆಬ್ರವರಿ ಅಂತ್ಯದಲ್ಲಿ ಹೆಲಿಕಾಪ್ಟರ್ ಟ್ಯಾಕ್ಸಿ ಹಾರಾಟ ಆರಂಭ

ಇದರಿಂದ ಎಲೆಕ್ಟ್ರಾನಿಕ್ ಸಿಟಿಯಿಂದ ನಗರದ ಯಾವುದೇ ವಿಮಾನ ನಿಲ್ದಾಣಕ್ಕೆ ಕೇವಲ15 ನಿಮಿಷದ ಅವಧಿಯಲ್ಲಿ ತಲುಪಬಹುದಾಗಿದೆ. ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಜನಸಂದಣಿ ವೇಳೆ ಎಲೆಕ್ಟ್ರಾನಿಕ್ ಸಿಟಿಯಿಂದ ಅಂತಾರಾಷ್ಟ್ರೀಯ ನಿಲ್ದಾಣಕ್ಕೆ ಬೆಳಗ್ಗೆ 6.30 ರಿಂದ 9.30 ರ ವೇಳೆ ಮೂರು ಟ್ರಿಪ್ ಗಳಲ್ಲಿ ಹಾಗೂ ಮಧ್ಯಾಹ್ನ3 ರಿಂದ ಸಂಜೆ 6.15 ರ ನಡುವಿನ ಅವಧಿಯಲ್ಲಿ ಮೂರು ಟ್ರಿಪ್ ಗಳಲ್ಲಿ ಹೆಲಿ ಟ್ಯಾಕ್ಸಿ ಪ್ರಯಾಣಿಕರಿಗೆ ಲಭ್ಯವಾಗಲಿದೆ.

Bengaluru Heli taxi start flying next week

ಈ ಅವಧಿಯಲ್ಲಿ ಅತಿ ಹೆಚ್ಚು ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ತೆರಳುತ್ತಾರೆ ಎಂದು ಅಂದಾಜಿಸಲಾಗಿದೆ. ನಾಲ್ಕು ಬ್ಲೇಡ್ ಸಾಮರ್ಥ್ಯದ ಸಿಂಗಲ್ ಎಂಜಿನ್ ನ ಬೆಲ್ 407 ಚಾಪರ್ ಹೆಲಿ ಟ್ಯಾಕ್ಸಿ ಸೇವೆಗೆ ಬಳಸಲಾಗುತ್ತಿದೆ. ಅದರ ಒಳಾಂಗಣ ಅನುಕೂಲತೆಗಳನ್ನು ಕಲ್ಪಿಸಲಾಗಿದೆ.

ಹೆಲಿ ಟ್ಯಾಕ್ಸಿಗೆ ಶುಲ್ಕವೆಷ್ಟು: ಪ್ರತಿಯೊಬ್ಬ ಪ್ರಯಾಣಿಕರಿಗೆ 3,500 ಶುಲ್ಕ ಹಾಗೂ ಜಿಎಸ್ ಟಿ ಸೇರಿದಂತೆ 4,130 ರೂ ಗಳನ್ನು ವಿಧಿಸಲಾಗುತ್ತಿದ್ದು ಇದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಒಳಗೆ ಚಾಲನಾ ಸೇವೆಯನ್ನು ಒಳಗೊಂಡಿದೆ ಅಲ್ಲದೆ 15 ಕೆಜಿ ತೂಕದ ಲಗೇಜ್ ಗಳನ್ನು ಒಬ್ಬ ಪ್ರಯಾಣಿಕ ತೆಗೆದುಕೊಂಡು ಹೋಗಬಹುದಾಗಿದೆ ಇದಕ್ಕಿಂತ ಹೆಚ್ಚು ಭಾರದ ಲಗೇಜ್ ಗಳಿಗೆ ಹೆಚ್ಚುವರಿ ಶುಲ್ಕವನ್ನು ತೆರಬೇಕಾಗುತ್ತದೆ.

ಕೆಐಎಎಲ್ ವಿಮಾನ ನಿಲ್ದಾಣದಿಂದ ನಗರಕ್ಕೆ ಹೆಲಿಕಾಪ್ಟರ್ ಸೇವೆ?ಕೆಐಎಎಲ್ ವಿಮಾನ ನಿಲ್ದಾಣದಿಂದ ನಗರಕ್ಕೆ ಹೆಲಿಕಾಪ್ಟರ್ ಸೇವೆ?

ಹೆಲಿ ಟ್ಯಾಕ್ಸಿ ಬುಕ್ ಮಾಡುವುದು ಹೇಗೆ: ಪ್ರಯಾಣಿಕರು ಟಿಕೇಟ್ ಗಳನ್ನು ಬುಕ್ ಮಾಡಲು 'ಫ್ಲೈ ನೌ' ಎನ್ನುವ ಮೊಬೈಲ್ ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಳ್ಳಬೇಕು. ಫೆ.23 ರಿಂದ ಟಿಕೇಟ್ ಗಳನ್ನು ಬುಕ್ ಮಾಡಬಹುದಾಗಿದೆ. ಅದಲ್ಲದೆ ಮುಂಗಡವಾಗಿ ಟಿಕೇಟ್ ಕಾಯ್ದಿರಿಸಲು ಕೂಡ 'ಫ್ಲೈ ಲೇಟರ್' ಆಪ್ಷನ್ ಒಳಗೊಂಡು ಟಿಕೇಟ್ ಗಳನ್ನು ಬುಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ.

ವಿವರಗಳಿಗಾಗಿ ಇದೇ ವೇಳೆ ಡ್ರಾಪ್ ಮತ್ತು ಪಿಕ್ ಅಪ್ ವಿವರಗಳನ್ನು ಬೆಂಗಳೂರು ಏರ್ ಪೋರ್ಟ್ ಮತ್ತು ಎಲೆಕ್ಟ್ರಾನಿಕ್ ಸಿಟಿ ಎಂದು ನಮೂದಿಸಬಹುದಾಗಿದೆ. ಹೆಲಿಟ್ಯಾಕ್ಸಿ ಸವೆಯನ್ನು ಮುಂಬರುವ ದಿನಗಳಲ್ಲಿ ಎಲೆಕ್ಟ್ರಾನಿಕ್ ಸಿಟಿಯಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಎಚ್ ಎಎಲ್ ವಿಮಾನ ನಿಲ್ದಾಣ ಹೊರತುಪಡಿಸಿ ವಿವಿಧೆಡೆಯಲ್ಲೂ ಅವಕಾಶ ಕಲ್ಪಿಸಲಾಗುತ್ತದೆ ಥಂಬಿ ಏವಿಯೇಷನ್ ನ ವ್ಯವಹಾರ ಅಭಿವೃದ್ಧಿ ನಿರ್ದೇಶಕ ಗೋವಿಂದ್ ನಾಯರ್ ತಿಳಿಸಿದ್ದಾರೆ.

English summary
Bengaluru's much awaited heli taxi service is all set to take off some time next week. Thumby Aviation , the company operating the helicopter taxis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X