ಓಲಾ, ಉಬರ್ ಗೆ ಸಡ್ಡು ಹೊಡೆಯಲು ಬರ್ತಿದೆ 'ಎಚ್.ಡಿ.ಕೆ ಕ್ಯಾಬ್ಸ್'!

Subscribe to Oneindia Kannada

ಬೆಂಗಳೂರು, ಮಾರ್ಚ್ 19: ಆ್ಯಪ್ ಆಧಾರಿತ ಕ್ಯಾಬ್ ಸೇವೆ ನೀಡುವ ದೈತ್ಯ ಕಂಪನಿಗಳಾದ ಓಲಾ ಮತ್ತು ಉಬರ್ ಗೆ ಸಡ್ಡು ಹೊಡೆಯಲು ಬರ್ತಿದೆ 'ಎಚ್.ಡಿ.ಕೆ ಕ್ಯಾಬ್ಸ್'!

ಅಚ್ಚರಿಯಾಗಬೇಡಿ. ಈ ಸುದ್ದಿ ನಿಜ. ಓಲಾ ಮತ್ತು ಉಬರ್ ವಿರುದ್ಧ ಬಂಡಾಯವೆದ್ದಿದ್ದ ಕ್ಯಾಬ್ ಚಾಲಕರು ಪ್ರತಿಭಟನೆ ನಡೆಸಿ ನಡೆಸಿ ಸುಸ್ತಾಗಿ ಕೊನೆಗೆ ತಮ್ಮದೇ ಸ್ವಂತ ಆ್ಯಪ್ ಹೊಂದುವ ಹಾದಿ ಹಿಡಿದಿದ್ದರು.

ಇದರ ರಚನೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹಣ ಸಹಾಯ (ಹೂಡಿಕೆ) ಮಾಡಲಿದ್ದಾರೆ ಎಂಬುದೂ ಸುದ್ದಿಯಾಗಿತ್ತು. ಇದನ್ನು ಸ್ವತಃ ಓಲಾ, ಟಾಕ್ಸಿ ಫಾರ್ ಶೂರ್ ಮತ್ತು ಉಬರ್ ಚಾಲಕರ ಸಂಘದ ಅಧ್ಯಕ್ಷ ತನ್ವೀರ್ ಪಾಷಾ ಹೇಳಿದ್ದರು.[ದೈತ್ಯ ಓಲಾ, ಉಬರ್ ಗೆ ಸಡ್ಡು ಹೊಡೆಯಲು ಚಾಲಕರಿಂದ ಮಾಸ್ಟರ್ ಪ್ಲಾನ್!]

Bengaluru: ‘HDK Cabs’ to counter Ola and Uber

ಇದೀಗ ಆ್ಯಪ್ ಸಿದ್ದವಾಗಿದ್ದು ಇದಕ್ಕೆ 'ಎಚ್.ಡಿ.ಕೆ ಕ್ಯಾಬ್ಸ್' ಎಂದು ಹೆಸರಿಡಲಾಗಿದೆ. ಇದೇ ಯುಗಾದಿಯಂದು ಅಂದರೆ ಮಾರ್ಚ್ 29ರಂದು ಇದು ಕಾರ್ಯಾರಂಭ ಮಾಡಲಿದೆ.

ಶೇಷಾದ್ರಿಪುರಂನಲ್ಲಿರುವ ಜೆಡಿಎಸ್ ಕಚೇರಿಯಲ್ಲಿ ಶನಿವಾರ ನಡೆದ ಮಹತ್ವದ ಸಭೆಯಲ್ಲಿ ಈ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ. ಎಚ್.ಡಿ.ಕೆ ಕ್ಯಾಬ್ ಗೆ ಆ್ಯಡ್ ಕ್ಲಿಕ್ಸ್ ಮತ್ತು ಎಬಿಟಿ ಎಂಬ ಸಂಸ್ಥೆಗಳು ಆ್ಯಪ್ ಸೇವೆ ನೀಡಲಿವೆ.

ಮಿನಿ ಕ್ಯಾಬಿಗೆ ಕಿಲೋಮೀಟರ್ ಗೆ 10 ರೂ ಹಾಗೂ ಪ್ರೈಮ್ ಕ್ಯಾಬಿಗೆ ಕಿಲೋಮೀಟರ್ ಗೆ 12 ರೂ ದರ ನಿಗದಿ ಪಡಿಸಲಾಗಿದೆ. ಮೊದಲ 4 ಕಿಲೋಮೀಟರಿಗೆ ಇಂತಿಷ್ಟು ಎಂಬ ಯಾವುದೇ ಕಂಡೀಷನ್ ಗಳು ಇಲ್ಲಿರುವುದಿಲ್ಲ ಎಂದು ಹೇಳಲಾಗಿದೆ.

ಓಲಾ ಮತ್ತು ಉಬರಿನಲ್ಲಿ ಸಂಸ್ಥೆಗೆ ಶೇಕಡಾ 30 ಕಮಿಷನ್ ಇದ್ದರೆ ಇಲ್ಲಿ ಕೇವಲ ಶೇಕಡಾ 10 ಕಮಿಷನ್ ಪಾವತಿಸಲು ನಿರ್ಧರಿಸಲಾಗಿದೆ.

Bengaluru: ‘HDK Cabs’ to counter Ola and Uber

ಕ್ಯಾಬಿನಲ್ಲಿ ಪ್ರಯಾಣಿಕರಿಗೆ ಮತ್ತು ಚಾಲಕರಿಗೆ ಮಿನರಲ್ ವಾಟರ್, ಚಾಕೋಲೇಟ್ ಮತ್ತು ಇಂಟರ್ನೆಟ್ ಸಂಪರ್ಕ ಇರುವ ಟ್ಯಾಬ್ ನೀಡಲಾಗುತ್ತದೆ. ನಗರದ ಐದು ಪ್ರಮುಖ ಭಾಗಗಳಲ್ಲಿ ಕಚೇರಿ ತೆರೆದು ಕ್ಯಾಬುಗಳನ್ನು ನಿರ್ವಹಣೆ ಮಾಡಲಾಗುತ್ತದೆ. ಪ್ರತಿ ಕೇಂದ್ರಗಳಲ್ಲೂ 100 ಕ್ಯಾಬ್ ಪಾರ್ಕಿಂಗಿಗೆ ವ್ಯವಸ್ಥೆ ಮಾಡಲಾಗುತ್ತದೆ.

ಇನ್ನು ಕಾರಿನ ಸರ್ವಿಸ್, ಕಾರಿನ ವಾಷ್, ಸುಮಾರು 20 ಲಕ್ಷ ರೂಪಾಯಿವರೆಗಿನ ಜೀವ ವಿಮೆ, ಆರೋಗ್ಯ ವಿಮೆ ಮೊದಲಾದ ಸೌಲಭ್ಯಗಳನ್ನು ಕಂಪೆನಿ ಕಡೆಯಿಂದಲೇ ನೀಡಲಾಗುವುದು ಎಂದು ತನ್ವೀರ್ ಪಾಷಾ ಹೇಳಿದ್ದಾರೆ.

30,000 ಕ್ಕೂ ಹೆಚ್ಚಿನ ಓಲಾ ಮತ್ತು ಉಬರ್ ಚಾಲಕರು ಎಚ್.ಡಿ.ಕೆ ಕ್ಯಾಬಿಗೆ ಸೇರ್ಪಡೆಯಾಗಲಿದ್ದಾರೆ ಎನ್ನಲಾಗಿದೆ.

2018ರ ಚುನಾವಣೆ ಬರುತ್ತಿರುವ ಹೊತ್ತಲ್ಲಿ ಎಚ್.ಡಿ.ಕೆ ಕ್ಯಾಬ್ಸ್ ಕುತೂಹಲ ಹುಟ್ಟಿದೆ. ದೆಹಲಿ ಚುನಾವಣೆಯಲ್ಲಿ ಎಎಪಿ ಪಕ್ಷ ಗೆಲುವು ಸಾಧಿಸುವಲ್ಲಿ ಆಟೋ ಚಾಲಕರು ನಿರ್ಣಾಯಕ ಪಾತ್ರ ವಹಿಸಿದ್ದರು. ಇಲ್ಲಿ ಕ್ಯಾಬ್ ಚಾಲಕರು ಅಂಥಹದ್ದೊಂದು ಪಾತ್ರ ನಿರ್ವಹಿಸುತ್ತಾರಾ? ಇದರಿಂದ ಜೆಡಿಎಸ್ ಗೆ ಏನಾದರೂ ಲಾಭವಾಗುತ್ತೋ ಗೊತ್ತಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
After the several days of protest, Ola and Uber drivers not able to incite a response from either the cab-aggregating companies or the Transport Department. Now rebel Ola and Uber drivers are coming out with their own app called ‘HDK cabs’ in Bengaluru city.
Please Wait while comments are loading...