ಹೊಸ ವರ್ಷಕ್ಕೆ ಬೆಂಗಳೂರು-ಹಾಸನ ರೈಲ್ವೇ ಯೋಜನೆ ಪೂರ್ಣ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 24: ಬೆಂಗಳೂರು- ಹಾಸನ ರೈಲ್ವೆ ಮಾರ್ಗವು 167 ಕಿ.ಮೀ ಇದೆ. ಈ ಯೋಜನೆಯು ಮುಕ್ತಾಯ ಹಂತದಲ್ಲಿದೆ. 2016 ಡಿಸೆಂಬರ್ ತಿಂಗಳಿನಲ್ಲಿ ಕಾಮಗಾರಿ ಪೂರ್ಣಗೊಳಿಸುವುದಾಗಿ ರೈಲ್ವೆ ಇಲಾಖೆ ತಿಳಿಸಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಆರ್.ವಿ. ದೇಶಪಾಂಡೆ ಅವರು ತಿಳಿಸಿದರು.

ರೈಲ್ವೇ ಇಲಾಖೆಯ ಕೋರಿಕೆಯ ಮೇರೆಗೆ ಬೆಂಗಳೂರು-ಹಾಸನ ಯೋಜನೆಯ ಬಾಕಿ ಕಾಮಗಾರಿಯನ್ನು 2010ರಲ್ಲಿ ಶೇ. 50:50 ವೆಚ್ಚ ಹಂಚಿಕೆ ಆಧಾರದಡಿ ಕೈಗೆತ್ತಿಕೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿತ್ತು ಎಂದು ಹೇಳಿದರು.[ಮಲ್ಯ ಕುಣಿಗಲ್ ಕುದುರೆಯ ಮೇಲೆ ರೈಲ್ವೆ ಸವಾರಿ!]

Bengaluru-Hassan broad gauge rail line by New Year 2017

ಪ್ರಾಯೋಗಿಕ ಸಂಚಾರ ಜಾರಿ: ಬೆಂಗಳೂರು- ಹಾಸನ ರೈಲ್ವೆ ಯೋಜನೆಯ ಪ್ರಾಯೋಗಿಕ ಸಂಚಾರ ಆರಂಭವಾಗಿದೆ. ತಿಪ್ಪಸಂದ್ರ ಕುಣಿಗಲ್ ಮಾರ್ಗದ 10 ಕಿ.ಮೀ. ಪ್ರಾಯೋಗಿಕ ಓಡಾಟ ಯಶಸ್ವಿಯಾಗಿದೆ.

* 1996-97 ರಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಪ್ರಧಾನಿಗಳಾಗಿ ದ್ದಾಗ ಯೋಜನೆಗೆ ಚಾಲನೆ ಕೊಟ್ಟಿದ್ದರು.[ಕುಣಿಗಲ್ ಮಾರ್ಗದ ಬೆಂಗಳೂರು-ಹಾಸನ ರೈಲಿಗೆ ಚಾಲನೆ]
* ಬಾಣವಾರದಿಂದ ಹಾಸನ ಮಾರ್ಗವಾಗಿ ರೈಲ್ವೆ ಯೋಜನೆ ಪೂರ್ಣಗೊಂಡಿದ್ದು, ನೆಲಮಂಗಲ, ಕುಣಿಗಲ್, ಯಡಿಯೂರು, ಶ್ರವಣಬೆಳಗೊಳವನ್ನು ಬೆಸೆಯಲಿದೆ.
* 179.28 ಕಿ.ಮೀ ಉದ್ದದ ಟ್ರ್ಯಾಕ್ ಹೊಂದಿದೆ. ರಾಷ್ಟ್ರೀಯ ಹೆದ್ದಾರಿ 48ಕ್ಕೆ ಸಮಾನಾಂತರವಾಗಿ ಈ ಮಾರ್ಗ ಸಾಗಲಿದೆ.
* 50 ಕಿ.ಮೀ. ಅಂತರ ಕಡಿಮೆಯಾಗುವುದರಿಂದ ಒಂದುವರೆ ಗಂಟೆ ಪ್ರಯಾಣ ಕಡಿತವಾಗುತ್ತಿದೆ.

* ಕುಣಿಗಲ್‌ನಲ್ಲಿರುವ ವಿಜಯ್ ಮಲ್ಯ ಒಡೆತನದ ಕುದುರೆ ಫಾರ್ಮ್ ಮಧ್ಯದಲ್ಲೇ ರೈಲು ಮಾರ್ಗ ಹಾದು ಹೋಗಲಿದೆ. (ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bengaluru-Hassan broad gauge rail line has picked up the pace and the track is expected to be opened by Janaury 2017 said Minister RV Deshpande.
Please Wait while comments are loading...