ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಡ್ಲೆಕಾಯಿ ಪರಿಷೆಗೆ ರಾಷ್ಟ್ರೀಯ ಮಾನ್ಯತೆ: ಅನಂತಕುಮಾರ್

|
Google Oneindia Kannada News

ಬೆಂಗಳೂರು, ನ.17: ಬೆಂಗಳೂರಿನ ಬಸವನಗುಡಿ ಕಡ್ಲೆಕಾಯಿ ಪರಿಷೆಗೆ ರಾಷ್ಟ್ರೀಯ ಮಾನ್ಯತೆ ದೊರೆಯುವಂತೆ ಪ್ರಯತ್ನ ಮಾಡಲು ಪ್ರಯತ್ನಿಸುತ್ತೇನೆ ಎಂದು ಕೇಂದ್ರ ಸಚಿವ ಅನಂತ ಕುಮಾರ್ ಹೇಳಿದರು.

ಸೋಮವಾರ ಬಸವನಗುಡಿ ಕಡ್ಲೆಕಾಯಿ ಪರಿಷೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಪ್ರವಾಸೋದ್ಯಮ ಸಚಿವ ಮಹೇಶ್ ಶರ್ಮಾ ಜತೆ ಈ ಬಗ್ಗೆ ಮಾತನಾಡುತ್ತೇನೆ. ದೇಶ ವಿದೇಶಗಳಲ್ಲಿ ಇದರ ಮಹತ್ವ ಗೊತ್ತಾಗುವಂತೆ ಮಾಡಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.[ಬಸವನಗುಡಿ ಕಡ್ಲೆಕಾಯಿ ಪರಿಷೆಗೆ ಬಟ್ಟೆಯ ಬ್ಯಾಗ್]

parishe

ವಿಶ್ವದ ಎಲ್ಲ ಮಾರುಕಟ್ಟೆಗಳಿಗೆ ಪ್ರೇರಣೆ ನೀಡಿದ್ದೇ ಕಡ್ಲೆಯಾಯಿ ಪರಿಷೆ. ಪ್ರಪಂಚದ ಯಾವ ಮೂಲೆಗೆ ತೆರಳಿ ಸಂತೆ ಎಂಬ ಸಂಸ್ಕೃತಿ ಕಂಡುಬಂದಿತೆಂದರೆ ಅದಕ್ಕೆ ರೈತರು ಆರಂಭಿಸಿದ ಈ ಹಬ್ಬವೇ ಕಾರಣ ಎಂದು ಹೇಳಿದರು.

ಈ ಬಾರಿಯ ಕಡ್ಲೇಕಾಯಿ ಪರಿಷೆಯನ್ನು 'ಹಸಿರು ಪರಿಷೆಯನ್ನಾಗಿಸೋಣ, ಪ್ಲಾಸ್ಟಿಕ್ ಮುಕ್ತವಾಗಿಸೋಣ, ವಿದ್ಯಾರ್ಥಿಗಳು ನೀಡಿದ ಬಟ್ಟೆ ಚೀಲಗಳನ್ನೆ ಬಳಸಿಕೊಳ್ಳೋಣ' ಎಂದು ಸಲಹೆ ನೀಡಿದರು. ಹಿಂದೆ ಬೆಂಗಳೂರು ಕರಗವನ್ನು ನಾವಷ್ಟೇ ಆಚರಿಸುತ್ತಿದ್ದೇವು. ಆದರೆ ಅದಕ್ಕಿಂದು ವಿಶ್ವ ಮಾನ್ಯತೆ ದೊರೆಯುವಂತೆ ಮಾಡಲಾಗಿದೆ ಎಂದರು.[ಬಸವನಗುಡಿಯಲ್ಲಿ ಕಡ್ಲೇ ಕಾಯಿ ಪರಿಷೆ ಕ್ರೇಜ್ ಶುರು]

parishe

ಉಸ್ತುವಾರಿ ಸಚಿವರ ಗೈರು
ಬೆಂಗಳೂರು ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಈ ಬಗ್ಗೆ ಪ್ರಶ್ನೆ ಮಾಡಿದರೆ 'ಇದು ಯಾವ ರಾಜಕಾರಣದ ಸಮಾರಂಭವಲ್ಲ. ಇಡೀ ಬೆಂಗಳೂರಿಗರೇ ಸೇರಿ ಆಚರಿಸುವಂಥ ಹಬ್ಬ. ಉದ್ಘಾಟನೆ ಕಾರ್ಯಕ್ರಮಕ್ಕೆ ಆಗದಿದ್ದರೆ ಸಂಜೆ ಭಾಗವಹಿಸಬಹುದು. ಇಲ್ಲಿ ಭಿನ್ನಾಭಿಪ್ರಾಯಗಳ ಪ್ರಶ್ನೆ ಇಲ್ಲ' ಎಂದು ಅನಂತಕುಮಾರ್ ಹೇಳಿದರು. ಪತ್ರಕರ್ತರ ಪ್ರಶ್ನೆಗೆ ಶಾಸಕ ರವಿ ಸುಬ್ರಮಣ್ಯ ಉತ್ತರ ಹೇಳಲು ಮುಂದಾಗುತ್ತಿದ್ದರೂ ಪದೇ ಪದೇ ಅನಂತಕುಮಾರ್ ಅವರನ್ನು ತಡೆಯುತ್ತಿದ್ದರು.[ಪರಿಷೆಯ ಮತ್ತಷ್ಟು ಚಿತ್ರಗಳು]

2 ಗಂಟೆ ತಡವಾಗಿ ಆರಂಭ
ನಿಗದಿಯಂತೆ ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ಆರಂಭವಾಗಬೇಕಿತ್ತು. ಆದರೆ ಕೇಂದ್ರ ಸಚಿವರು ಆಗಮಿಸಿದಾಗ ಗಡಿಯಾರ 12 ಗಂಟೆ ತೋರಿಸುತ್ತಿತ್ತು. ಬಸವನಗುಡಿಯ ಬೀದಿಯೊಂದರಲ್ಲಿ ಷೇರು ಕಡ್ಲೆಕಾಯಿ ಮಾರಾಟವಾದಗಲೇ ಪರಿಷೆ ಆರಂಭವಾಗುತ್ತದೆ. ಇದು ಕೇವಲ ಔಷಚಾರಿಕ ಉದ್ಘಾಟನೆಯಷ್ಟೇ ಎಂದು ಕೇಂದ್ರ ಸಚಿವರು ಲೇಟಾಗಿ ಬಂದಿದ್ದಕ್ಕೆ ಸಮಜಾಯಿಷಿ ನೀಡಿದರು.

ಇತ್ತ ಎರಡು ಗಂಟೆಗಳಿಂದ ಕಾದು ಕುಳಿತಿದ್ದ ಮಹಿಳೆಯರು ಮತ್ತು ಮಾಧ್ಯಮದವರ ಗೋಳಿಗೆ ಮಾತ್ರ ಉತ್ತರ ಸಿಗಲಿಲ್ಲ. ಮೇಯರ್ ಶಾಂತಕುಮಾರಿ, ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ, ಕಟ್ಟೆ ಸತ್ಯನಾರಾಯಣ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

English summary
Bengaluru : Union Minister Anatkumar inaugurated Basavanagudi Kadlekai Parishe, on 17 November. The groundnut fair well known Kadlekai Parishe will get national recognition, Minister said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X