ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
 • search

'ಸುಡೊಕು'ದಲ್ಲಿ ಬೆಳ್ಳಿಪದಕ ಗೆದ್ದು, ಮಿಂಚಿದ ಬೆಂಗಳೂರು ಬಾಲಕಿ

By Vanitha
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಬೆಂಗಳೂರು, ಆಗಸ್ಟ್, 11 : ದಿನಪತ್ರಿಕೆ, ನಿಯತಕಾಲಿಕೆಯಲ್ಲಿ ಬುದ್ದಿ ಚುರುಕುಗೊಳಿಸುವ ಹಲವಾರು ಆಟಗಳು ಕಾಣ ಬರುತ್ತದೆ. ಅದರಲ್ಲಿ ಪದ ಬಂಧ ಮತ್ತು ಸುಡೊಕು ಆಟದಷ್ಟು ಖ್ಯಾತಿ ಪಡೆದ ಆಟ ಮತ್ತೊಂದಿಲ್ಲ. ಈ ಆಟಕ್ಕೆ ಜಗತ್ತಿನ ಮಾನ್ಯತೆ ಇದೆ ಎಂದರೆ ನಂಬ್ತೀರಾ?

  ಹೌದು..ಈ ಆಟ ಪ್ರಾಪಂಚಿಕ ಮಟ್ಟದಲ್ಲಿ ಪ್ರಖ್ಯಾತಿ ಗಳಿಸಿದ್ದು, ಬುದ್ದಿಮತೆ ಹೆಚ್ಚಿಸುವ ಸುಡೊಕು ಆಟದಲ್ಲಿ Qianán Water City Cup 2015ರ ಜಗತ್ತಿನ ಕಿರಿಯರ ಸುಡೊಕು ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ ಬೆಂಗಳೂರಿನ ಬಾಲಕಿ.[ಬೆಂಗಳೂರು ವಿದ್ಯಾರ್ಥಿನಿಯರ ಜಗಮೆಚ್ಚಿದ ಸಾಧನೆ]

  Bengaluru girl shines at World Junior Sudoku Championship

  ಬೆಂಗಳೂರಿನ ದಕ್ಷಿಣ ವಲಯದ ಡೆಲ್ಲಿ ಪಬ್ಲಿಕ್ ಶಾಲೆ ವಿದ್ಯಾರ್ಥಿಯಾದ ಅದಿತಿ ಶೇಷಾದ್ರಿ ಚೀನಾದ ಬೀಜಿಂಗ್‌ನಲ್ಲಿ ನಡೆದ ಸ್ಫರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಗೆದ್ದುಕೊಂಡಿದ್ದಾಳೆ. ಮೊದಲಿನಿಂದಲೂ ಸುಡೊಕಿನಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ಈಕೆ, ತನ್ನ ತಾತಾ ಹಾಗೂ ಅಪ್ಪನ ಜೊತೆ ಕಳೆದ ಒಂದು ವರ್ಷದಿಂದ ನಿರಂತರ ಅಭ್ಯಾಸದಲ್ಲಿದ್ದಳು.

  ಮೊದಲು ಬೆಂಗಳೂರಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿದ ಈಕೆ ಇದರಲ್ಲಿ ವಿಜಯಿಶಾಲಿಯಾಗಿ, ಬೀಜಿಂಗ್‌ನಲ್ಲಿ ನಡೆಯುವ ಜೂನಿಯರ್‌ ಚಾಂಪಿಯನ್ ಶಿಪ್‌ಗೆ Indian Under-18 ತಂಡಕ್ಕೆ ಆಯ್ಕೆಯಾದಳು. ಈ ತಂಡವು 3 ಜನರನ್ನು ಒಳಗೊಂಡಿದ್ದು, ಕಲ್ಕತ್ತಾದ ಮಹಾದೇವಿ ಬಿರ್ಲಾ ವರ್ಡ್ ಅಕಾಡೆಮಿಯ ಸೃಷ್ಟಿ ಕೇಜ್ರಿವಾಲ್ ಮತ್ತು ಮಹಾರಿಷಿ ವಿದ್ಯಾ ಮಂದಿರದ ಎಸ್‌. ಪ್ರಣವ್ ಕಾಮೇಶ್ ಈ ತಂಡದೊಂದಿಗೆ ಬೀಜಿಂಗ್ ತೆರಳಿದ್ದಳು.

  ವರ್ಡ್‌ ಚಾಂಪಿಯನ್ ಶಿಪ್‌ನಲ್ಲಿ ಸುಮಾರು 10 ರಾಷ್ಟ್ರಗಳಿಂದ 200 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದರಲ್ಲಿ ಬಹಳ ಉತ್ಸಾಹದಿಂದ ಪಾಲ್ಗೊಂಡಿದ್ದ ಅಧಿತಿ ಸ್ವತಂತ್ರಳಾಗಿ 9 ಸುತ್ತುಗಳನ್ನು ಪೂರೈಸಿ ತಂಡದಲ್ಲಿ ಭರವಸೆ ಮೂಡಿಸಿದ್ದಳು. ಕಳೆದ ಬಾರಿಯ ಎಲ್ಲಾ ದಾಖಲೆಗಳನ್ನು ಸರಿಗಟ್ಟಿದ ಈಕೆ ತಂಡಕ್ಕೆ ಬೆಳ್ಳಿ ಪದಕ ತಂದುಕೊಡುವಲ್ಲಿ ಯಶಸ್ವಿಯಾದ ಈಕೆ Guinness World Records ಎಂಬ ವಿಶೇಷ ವಿಭಾಗದ ಪ್ರಮಾಣ ಪತ್ರ ಸ್ವೀಕರಿಸಿದ್ದಾಳೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Bangalore Delhi public school student Aditi Sheshadri got a silver medal in Sudoku play. Qianán Water City Cup 2015 World Junior Sudoku Championship held at Beijing, China, recently.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more