ಬೆಂಗಳೂರಿನಲ್ಲಿ ಸಬ್ ಅರ್ಬನ್ ರೈಲು ಸಂಚಾರಕ್ಕೆ ಗ್ರೀನ್ ಸಿಗ್ನಲ್

Posted By:
Subscribe to Oneindia Kannada

ಬೆಂಗಳೂರು, ಜನವರಿ 16: ರಾಮನಗರ-ಕುಪ್ಪಂ Mainline Electric Multiple Unit ಮೆಮು (ವಿದ್ಯುತ್​ಚಾಲಿತ) ರೈಲು ಸಂಚಾರ ಜನವರಿ16ರಂದು ಆರಂಭವಾಗಿದೆ. ರೈಲ್ವೆ ಸಚಿವ ಸುರೇಶ್ ಪ್ರಭು ಹಸಿರು ನಿಶಾನೆ ತೋರಿಸಿದ್ದಾರೆ. ಜನವರಿ 17ರಿಂದ ರೈಲಿನ ವಾಣಿಜ್ಯ ಸಂಚಾರ ಶುರುವಾಗಲಿದೆ.

ಈ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ,ಕೇಂದ್ರ ಸಚಿವರಾದ ಸುರೇಶ್ ಪ್ರಭು, ಅನಂತ್ ಕುಮಾರ್, ಸದಾನಂದ ಗೌಡ, ರಾಜ್ಯ ಸಚಿವರಾದ ಕೆ ಜೆ ಜಾರ್ಜ್, ಆರ್ ವಿ ದೇಶಪಾಂಡೆ ಮುಂತಾದವರು ಉಪಸ್ಥಿತರಿದ್ದರು.

ಕಾಂಗ್ರೆಸ್ ಸರ್ಕಾರ ಈ ಹಿಂದಿನ ಬಜೆಟ್​ನಲ್ಲಿ ಘೋಷಿಸಿದ್ದಂತೆ ರಾಮನಗರ-ಕುಪ್ಪಂ ಮಾರ್ಗದಲ್ಲಿ ಮೆಮು ರೈಲು ಸಂಚಾರ ಆರಂಭಿಸಿತ್ತು. ಬೆಳಗ್ಗೆ 7ಕ್ಕೆ ರಾಮನಗರದಿಂದ ಹೊರಡುತ್ತಿದ್ದ ರೈಲು 8.40ಕ್ಕೆ ಕೆಎಸ್​ಆರ್ ನಿಲ್ದಾಣ ತಲುಪುತ್ತಿತ್ತು. ನಂತರ 11.30ಕ್ಕೆ ಕುಪ್ಪಂಗೆ ತೆರಳುತ್ತಿತ್ತು.[ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ರಿಂಗ್ ರೈಲು]

ಆದರೆ, ವೈಟ್​ಫೀಲ್ಡ್ ಸೇರಿ ಈ ಭಾಗದ ವಾಹನದಟ್ಟಣೆ ಅಧಿಕವಾಗಿರುವುದರಿಂದ ಉಪನಗರ ರೈಲು ಯೋಜನೆ ಆರಂಭಕ್ಕೆ ಭಾರಿ ಒತ್ತಾಯ ಕೇಳಿ ಬಂದಿತ್ತು.

ಈ ಹಿನ್ನೆಲೆಯಲ್ಲಿ ಬೆಳಗ್ಗೆ 8.40-11.30ರ ನಡುವಿನ ಸಮಯ ಬಳಸಿಕೊಂಡ ನೈಋತ್ಯ ರೈಲ್ವೆ ಅಧಿಕಾರಿಗಳು ಕೆಎಸ್​ಆರ್-ವೈಟ್​ಫೀಲ್ಡ್ ನಡುವೆ 1 ಟ್ರಿಪ್ ರೈಲು ಸಂಚಾರ ಆರಂಭಿಸಲು ನಿರ್ಧರಿಸಿದ್ದಾರೆ.ವೈಟ್​ಫೀಲ್ಡ್ ಸುತ್ತಮುತ್ತಲ ನಿವಾಸಿಗಳು ಹಾಗೂ ಉದ್ಯೋಗಿಗಳ ಪಾಲಿಗೆ ಈ ರೈಲು ಉಪಯುಕ್ತವಾಗಲಿದೆ. ಉಪನಗರ ರೈಲು ಮಾದರಿಯಲ್ಲೇ ರಾಮನಗರ-ಕುಪ್ಪಂ ರೈಲು ಸಂಚರಿಸಲಿದೆ.

ತಪ್ಪಲಿದೆ ಟ್ರಾಫಿಕ್ ಸಮಸ್ಯೆ

ತಪ್ಪಲಿದೆ ಟ್ರಾಫಿಕ್ ಸಮಸ್ಯೆ

ಬೈಯಪ್ಪನಹಳ್ಳಿ-ವೈಟ್​ಫೀಲ್ಡ್ ನಡುವೆ ಫೆಬ್ರವರಿ ವೇಳೆಗೆ ಮೆಟ್ರೋ ಮಾರ್ಗ ವಿಸ್ತರಣಾ ಕಾಮಗಾರಿ ಆರಂಭವಾಗಲಿದೆ. ಇದಕ್ಕಾಗಿ ಬಿಎಂಆರ್​ಸಿಎಲ್ ತಯಾರಿ ನಡೆಸಿದೆ. ಮೆಟ್ರೋ ಕಾಮಗಾರಿ ಹಿನ್ನೆಲೆಯಲ್ಲಿ ರಸ್ತೆಗಳನ್ನು ವಿಸ್ತರಿಸುವ ಕಾಮಗಾರಿಯೂ ನಡೆಯಲಿದೆ. ಹೀಗಾಗಿ ಈ ಭಾಗದಲ್ಲಿ ವಾಹನದಟ್ಟಣೆ ಸಮಸ್ಯೆ ಹೆಚ್ಚಾಗಲಿದೆ. ಈ ಸಮಸ್ಯೆಯಿಂದ ಪಾರಾಗಲು ಈ ಭಾಗದ ಜನರಿಗೆ ರಾಮನಗರ-ಕುಪ್ಪಂ ಮೆಮು ರೈಲು ಅನುಕೂಲಕರ.

 ನೈಋತ್ಯ ರೈಲ್ವೆ ಬಿಡುಗಡೆ ಮಾಡಿರುವ ವೇಳಾಪಟ್ಟಿ

ನೈಋತ್ಯ ರೈಲ್ವೆ ಬಿಡುಗಡೆ ಮಾಡಿರುವ ವೇಳಾಪಟ್ಟಿ

* ಬೆಳಗ್ಗೆ 8.45ಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ(KRS)ದಿಂದ ಹೊರಟು 9.40ಕ್ಕೆ ವೈಟ್​ಫೀಲ್ಡ್ ತಲುಪುತ್ತದೆ.
* ವೈಟ್​ಫೀಲ್ಡ್​ನಿಂದ 10.30ಕ್ಕೆ ಹೊರಡುವ ರೈಲು 11.10ಕ್ಕೆ ಕೆಎಸ್​ಆರ್ ರೈಲು ನಿಲ್ದಾಣಕ್ಕೆ ತಲುಪಲಿದೆ.
* ಎರಡನೇ ರೈಲು 11.20 am ಕ್ಕೆ ಕೆಎಸ್ ಆರ್ ತೊರೆದು 1.45pm ಗೆ ಕುಪ್ಪಂ ಸೇರಲಿದೆ.
* 2.45 pmಗೆ ಕುಪ್ಪಂ ಬಿಟ್ಟು 5.20 pm.ಕ್ಕೆ ಕೆಎಸ್ ಆರ್ ಸೇರಲಿದೆ.

ಬೆಂಗಳೂರು ಶಿವಮೊಗ್ಗ

ಬೆಂಗಳೂರು ಶಿವಮೊಗ್ಗ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಎಸ್ಆರ್ ಬೆಂಗಳೂರು-ರಾಮನಗರ ರೈಲ್ವೆ ನಿಲ್ದಾಣದ ನಡುವೆ ಮೆಮು ಸೇವೆಗಳು ಹಾಗೂ ಬೆಂಗಳೂರು ಶಿವಮೊಗ್ಗ ನಗರದ ನಡುವೆ ಹೊಸ ಎಕ್ಸ್ ಪ್ರೆಸ್ ರೈಲು ಸೇವೆಗೆ ಚಾಲನೆ ನೀಡಿದರು. ಬೈಯಪ್ಪನಹಳ್ಳಿಯಲ್ಲಿ ಹೊಸ ಕೋಚಿಂಗ್ ಟರ್ಮಿನಲ್ ಗೆ ಶಂಕುಸ್ಥಾಪನೆಯು ಈ ಸಂಧರ್ಭದಲ್ಲಿ ನೆರವೇರಿತು. ಕೇಂದ್ರ ಸಚಿವರು ಮತ್ತು ರಾಜ್ಯ ಸಚಿವರುಗಳು ಮುಖ್ಯಮಂತ್ರಿಗಳ ಜೊತೆಗೆ ಉಪಸ್ಥಿತರಿದ್ದರು.

ಕೇಂದ್ರ ಸರ್ಕಾರದ ಜತೆ ಒಪ್ಪಂದ

ಕೇಂದ್ರ ಸರ್ಕಾರದ ಜತೆ ಒಪ್ಪಂದ ಮಾಡಿಕೊಂಡಿರುವ ಕರ್ನಾಟಕ ಸರ್ಕಾರ ಪ್ರಸ್ತುತ ರಾಮನಗರ ಹಾಗೂ ವೈಟ್ ಫೀಲ್ಡ್ ಮಾರ್ಗದ ಯೋಜನೆಗೆ ಶೇ 80ರಷ್ಟು ಯೋಜನಾ ವೆಚ್ಚವನ್ನು ಭರಿಸುತ್ತಿದೆ. ರಾಜ್ಯದಲ್ಲಿ ಇನ್ನೂ 13ಕ್ಕೂ ಅಧಿಕ ವಿದ್ಯುತ್ ಚಾಲಿತ ಮೆಮು ರೈಲಿಗಾಗಿ ಮನವಿ ಸಲ್ಲಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka government has initiated the two Mainline Electric Multiple Unit (MEMU) services in the city. One service to Whitefield and another towards Ram Nagar.The trains will stop at Cantonment, Bengaluru East, Baiyappanahalli, KR Puram and Hoodi stations in both directions.
Please Wait while comments are loading...