ಬೆಂಗಳೂರಿಗೆ 12 ಮೇಲ್ಸೇತುವೆ, ಎಲಿವೇಟೆಡ್ ಕಾರಿಡಾರ್ 'ಭಾಗ್ಯ'

Posted By:
Subscribe to Oneindia Kannada

ಬೆಂಗಳೂರು, ಫೆ. 04: ಇನ್ವೆಸ್ಟ್ ಕರ್ನಾಟಕ 2016ರ ದೆಸೆಯಿಂದ ಬೆಂಗಳೂರಿಗೆ 12 ಫ್ಲೈ ಓವರ್ ಹಾಗೂ ಅಂಡರ್ ಪಾಸುಗಳು, 2,000 ಬಸ್ ಶೆಲ್ಟರುಗಳು, 56 ಸ್ವಯಂಚಾಲಿತ ಕಾರು ಪಾರ್ಕ್ ಗಳು, 100 ಸ್ಕೈ ವಾಕ್ ಗಳು, ಇನ್ನಷ್ಟು ಟೆಂಡರ್ ಶ್ಯೂರ್ ರಸ್ತೆಗಳು, ಎಲೆವೇಟೆಡ್ ಕಾರಿಡಾರ್ ಗಳು ಸಿಗುತ್ತಿದೆ ಎಂದು ನಗರಾಭಿವೃದ್ಧಿ ಸಚಿವ ಕೆಜೆ ಜಾರ್ಜ್ ಗುರುವಾರ ಘೋಷಿಸಿದ್ದಾರೆ.

ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಪ್ರಮುಖ ಉದ್ಯಮಿಗಳು ಬೇಡಿಕೆ ಸಲ್ಲಿಸಿರುವ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಕ್ಷೇತ್ರಕ್ಕೆ ಹೆಚ್ಚಿನ ಯೋಜನೆಗಳು, ಒಪ್ಪಂದಗಳು ಹರಿದು ಬಂದಿವೆ. 20 ಸಾವಿರ ಕೋಟಿ ರೂ. ವೆಚ್ಚದಲ್ಲಿ ಎಲಿವೇಟೆಡ್ ರಸ್ತೆ ನಿರ್ಮಾಣಕ್ಕೆ ಕರ್ನಾಟಕ ಸರ್ಕಾರ ನಿರ್ಧರಿಸಿದೆ.[ಬಿಲಿಯನೇರ್ ಗಳ ಕಣ್ಣಿಗೆ ಬೀದಿನಾಯಿಗಳು ಬೀಳಂಗಿಲ್ಲ!]

ಬೆಂಗಳೂರು ನಗರಾಭಿವೃದ್ಧಿಗೆ ಜಪಾನ್ ಹೆಚ್ಚಿನ ನೆರವು ನೀಡುತ್ತಿದ್ದು, 9 ಸಾವಿರ ಕೋಟಿ ರೂ. ವೆಚ್ಚದಲ್ಲಿ ಸಬ್‌ ಅರ್ಬನ್ ರೈಲ್ವೆ ಯೋಜನೆ ಸೇರಿದೆ ಎಂದು ಜಾರ್ಜ್ ಹೇಳಿದರು.

ಇನ್‌ವೆಸ್ಟ್ ಕರ್ನಾಟಕ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ಎರಡನೇ ದಿನದಲ್ಲಿ ನಗರಾಭಿವದ್ಧಿ ಇಲಾಖೆಗೆ ಸಂಬಂಧಿಸಿದ ಕಾರ್ಯಾಗಾರದಲ್ಲಿ ನಗರಾಭಿವೃದ್ಧಿ ಸಚಿವ ವಿನಯ್‌ಕುಮಾರ್ ಸೊರಕೆ, ಪೌರಾಡಳಿತ ಸಚಿವ ಖಮರುಲ್ ಇಸ್ಲಾಂ ಹಾಗೂ ಇಲಾಖೆಯ ಅಧಿಕಾರಿಗಳು ಉದ್ದಿಮೆದಾರರೊಂದಿಗೆ ಸಂವಾದ ನಡೆಸಿದರು.

ಬೆಂಗಳೂರಿನಲ್ಲಿ ಚಾಲ್ತಿಯಲ್ಲಿರುವ ಯೋಜನೆಗಳು

ಬೆಂಗಳೂರಿನಲ್ಲಿ ಚಾಲ್ತಿಯಲ್ಲಿರುವ ಯೋಜನೆಗಳು

ಸುಮಾರು 7.5 ಬಿಲಿಯನ್ ವೆಚ್ಚದಲ್ಲಿ 50 ಟೆಂಡರ್ ಶೂರ್ ರಸ್ತೆ, ಬಿಬಿಎಂಪಿ ವ್ಯಾಪ್ತಿಯ 300 ಕಿ.ಮೀ. ರಸ್ತೆಗೆ 11 ಬಿಲಿಯನ್ ವೆಚ್ಚದಲ್ಲಿ ಕ್ವೈಟ್ ಟಾಪಿಂಗ್, ನಾಲ್ಕು ಮೇಲ್ಸೇತುವೆಗಳು, 8 ಅಂಡರ್‌ಪಾಸ್, ರೈಲ್ವೆ ಮೇಲ್ಸೇತುವೆ ಮತ್ತು ಕೆಳ ಸೇತುವೆ ನಿರ್ಮಾಣ ಜಾರಿಯಲ್ಲಿದೆ.

ಖಾಸಗಿ ಸಹಭಾಗಿತ್ವದಲ್ಲಿ ಬಂಡವಾಳ ಹೂಡಿಕೆಗೆ ಮನವಿ

ಖಾಸಗಿ ಸಹಭಾಗಿತ್ವದಲ್ಲಿ ಬಂಡವಾಳ ಹೂಡಿಕೆಗೆ ಮನವಿ

3.5 ಬಿಲಿಯನ್ ವೆಚ್ಚದಲ್ಲಿ 20 ಬಹು ಅಂತಸ್ತಿನ ಕಾರ್ ಪಾರ್ಕಿಂಗ್ ಕಟ್ಟಡ, 2.5 ಬಿಲಿಯನ್ ವೆಚ್ಚದಲ್ಲಿ 100 ಸ್ಕೈ ವಾಕರ್‌ಗಳ ನಿರ್ಮಾಣ, ಬೆಂಗಳೂರಿನ ವಿವಿಧೆಡೆ 1.5 ಲಕ್ಷ ಎಲ್‌ಇಡಿ ಬೀದಿ ದೀಪ ಅಳವಡಿಕೆ ಸೇರಿದಂತೆ ವಿವಿಧ ಯೋಜನೆಗಳನ್ನು ಸರ್ಕಾರ ಕೈಗೆತ್ತಿಕೊಂಡಿದೆ. ಈ ಎಲ್ಲಾ ಯೋಜನೆಗಳಿಗೆ ಖಾಸಗಿ ಸಹಭಾಗಿತ್ವದಲ್ಲಿ ಬಂಡವಾಳ ಹೂಡಿಕೆ ಮಾಡುವಂತೆ ಉದ್ಯಮಿಗಳನ್ನು ಜಾರ್ಜ್ ಆಹ್ವಾನಿಸಿದರು.

ಮಹಿಳೆಯರಿಗಾಗಿ ಪ್ರತ್ಯೇಕ ಕೈಗಾರಿಕಾ ಪಾರ್ಕ್

ಮಹಿಳೆಯರಿಗಾಗಿ ಪ್ರತ್ಯೇಕ ಕೈಗಾರಿಕಾ ಪಾರ್ಕ್

ಸಂವಾದದ ನಂತರ ಮಾತನಾಡಿದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರು ಮತ್ತೊಂದು ಘೋಷಣೆ ಮಾಡಿ, ಮಾರ್ಚ್ 08 ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕನಕಪುರ ಹಾಗೂ ಧಾರವಾಡದಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ಕೈಗಾರಿಕಾ ಪಾರ್ಕ್ ಗಳನ್ನು ಉದ್ಘಾಟಿಸಲಾಗುವುದು ಎಂದರು.

ಬೆಂಗಳೂರು ಜಿಡಿಪಿಯಲ್ಲಿ ದೇಶದಲ್ಲೆ 4ನೇ ಸ್ಥಾನದಲ್ಲಿದೆ

ಬೆಂಗಳೂರು ಜಿಡಿಪಿಯಲ್ಲಿ ದೇಶದಲ್ಲೆ 4ನೇ ಸ್ಥಾನದಲ್ಲಿದೆ

ಬೆಂಗಳೂರು ಹೊಸ ಹೊಸ ಯೋಜನೆಗಳು ಸ್ಟಾರ್ಟ್ ಅಪ್ ಕಂಪನಿಗಳಿಗೆ ಹೇಳಿ ಮಾಡಿಸಿದಂಥ ನಗರ. ಬೆಂಗಳೂರು ಜಿಡಿಪಿಯಲ್ಲಿ ದೇಶದಲ್ಲೆ 4ನೇ ಸ್ಥಾನದಲ್ಲಿದೆ. ನಮ್ಮ ಮೆಟ್ರೋಗೆ ಜಪಾನ್ ಹೆಚ್ಚಿನ ಹೂಡಿಕೆ ಮಾಡಿದೆ.ಬಂಡವಾಳ ಹೂಡಿಕೆ ಮಾಡಲು ಮುಂದೆ ಬರುವವರಿಗೆ ಯಾವುದೇ ತೊಂದರೆಯಾಗದಂತೆ ಮೇಲ್ಸೇತುವೆ, ಅಂಡರ್‌ಪಾಸ್, ಎಲಿವೆಟೆಡ್ ರಸ್ತೆ ನಿರ್ಮಾಣ ಮಾಡಲಾಗುವುದು ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Tender SURE roads, tarring of roads, 12 flyovers and underpasses, 2000 bus shelters, 56 automated car parks, 100 skywalks, 10 markets and 250 public toilets are on offer for investors at the meet. The infrastructure session also sees K.J. George asking for investment in PRR and elevated corridors.
Please Wait while comments are loading...